ಚುನಾವಣಾ ತಯಾರಿ ಹೊತ್ತಲ್ಲಿ ರಾಹುಲ್ ಅಮೆರಿಕಕ್ಕೆ ತೆರಳಿದ್ದೇಕೆ?
ಕೃತಕ ಬುದ್ಧಿಮತ್ತೆ ವಿಷಯದ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ ರಾಹುಲ್ ಗಾಂಧಿ. ಚುನಾವಣೆಯ ತಯಾರಿಯ ಈ ಹೊತ್ತಿನಲ್ಲಿ ಅಧ್ಯಯನಕ್ಕೆ ತೆರಳಿದ ಕಾಂಗ್ರೆಸ್ ಉಪಾಧ್ಯಕ್ಷ.
ನವದೆಹಲಿ, ಸೆಪ್ಟೆಂಬರ್ 5: ಕೆಲವು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿವೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ದೇಶದ ಅನೇಕ ರಾಜಕೀಯ ಪಕ್ಷಗಳು ತಮ್ಮ ರಾಜ್ಯಗಳಲ್ಲಿನ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುವಲ್ಲಿ ನಿರತವಾಗಿವೆ. ಇದರ ನಡುವೆಯೇ, ದೇಶದ ಪ್ರಮುಖ ಪಕ್ಷವಾದ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ಅಂದಹಾಗೆ, ಅಮೆರಿಕಕ್ಕೆ ತೆರಳಿರುವ ರಾಹುಲ್ ಗಾಂಧಿ ಏನು ಅಧ್ಯಯನ ಮಾಡಲಿದ್ದಾರೆ? ಅವರು ರಾಜಕೀಯ ಕುರಿತಂತೆ ಏನಾದರೂ ವಿಶೇಷ ಅಧ್ಯಯನವಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅವರು ಅಮೆರಿಕಕ್ಕೆ, ಕೃತಕ ಬುದ್ಧಿಮತ್ತೆ (artificial intelligence) ವಿಚಾರದ ಬಗ್ಗೆ ಅಧ್ಯಯನ ನಡೆಸಲು ಅಮೆರಿಕಕ್ಕೆ ಹಾರಿದ್ದಾರೆ.
ಇದೇ ವೇಳೆ, ವಾಷಿಂಗ್ಟನ್ ನಲ್ಲಿರುವ ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ, ಅನಿವಾಸಿ ಭಾರತೀಯರಾಗಿರುವ ಉದ್ಯಮಿಗಳು, ಪದವೀಧರರು, ಇಂಜಿನಿಯರ್ ಗಳು ಸೇರಿದಂತೆ ಹಲವಾರು ಮಂದಿ ಭಾಗವಹಿಸಲಿದ್ದಾರೆಂದು ಹೇಳಲಾಗಿದೆ.












Click it and Unblock the Notifications