ಹೊಸ ಲುಕ್‌ನೊಂದಿಗೆ ಕೇಂಬ್ರಿಡ್ಜ್ ವಿವಿಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ
ಕನ್ಯಾಕುಮಾರಿಯಲ್ಲಿ ಶುರುವಾಗಿ ಕಾಶ್ಮೀರದಲ್ಲಿ ಅಂತ್ಯವಾಗಿದ್ದ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಗಡ್ಡಧಾರಿಯಾಗಿ ಎಲ್ಲರ ಮುಂದೆ ಕಾಣಿಸಿಕೊಂಡು ಓಡಾಡುತ್ತಿದ್ದರು.
ನ್ಯೂಯಾರ್ಕ್, ಮಾರ್ಚ್ 1: ಭಾರತ್ ಜೋಡೋ ಯಾತ್ರೆಯಲ್ಲಿ ಕಂಡಂತೆ ದಟ್ಟವಾದ ಗಡ್ಡ, ಹೇರಳ ತಲೆಕೂದಲು ಬಿಟ್ಟು ರಾಹುಲ್ ಗಾಂಧಿ ಈಗ ಹೊಸ ಲುಕ್‌ನೊಂದಿಗೆ ಅಮರಿಕಾದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ಯಾಕುಮಾರಿಯಲ್ಲಿ ಶುರುವಾಗಿ ಕಾಶ್ಮೀರದಲ್ಲಿ ಅಂತ್ಯವಾಗಿದ್ದ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಗಡ್ಡಧಾರಿಯಾಗಿ ಎಲ್ಲರ ಮುಂದೆ ಕಾಣಿಸಿಕೊಂಡು ಓಡಾಡುತ್ತಿದ್ದರು. ಆದರೆ ಈಗ ಅವರು ಸ್ವಲ್ವ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ. ಅವರು ಈಗ ಅಮೆರಿಕಾದಲ್ಲಿದ್ದು, ಅಲ್ಲಿನ ಕೇಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವ ಮುನ್ನ ಅವರು ತೆಗೆಸಿಕೊಂಡ ಫೋಟೋದಲ್ಲಿ ಟ್ರಿಮ್ ಮಾಡಿದ ಗಡ್ಡ, ಸ್ಮಾರ್ಟ್ ಹೇರ್‌ಕಟ್ ಮಾಡಿಸಿಕೊಂಡು ಮಿಂಚುತ್ತಿದ್ದಾರೆ.

ರಾಹುಲ್ ಗಾಂಧಿ ಅವರು ಮಂಗಳವಾರ ಲಂಡನ್‌ಗೆ ಬಂದಿದ್ದು ಒಂದು ವಾರದ ಪ್ರವಾಸದಲ್ಲಿದ್ದಾರೆ. ಅವರು ಅಲ್ಮಾ ಮೇಟರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ. ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನ (ಕೇಂಬ್ರಿಡ್ಜ್ ಜೆಬಿಎಸ್) ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ ಅವರು 21ನೇ ಶತಮಾನದಲ್ಲಿ ಕೇಳಲು ಕಲಿಯುವುದು ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಇದಕ್ಕಾಗಿ ಅವರು ಗಡ್ಡವನ್ನು ಟ್ರಿಮ್ ಮಾಡಿಸಿಕೊಂಡಿದ್ದಾರೆ. ಅವರ ಈ ಚಿತ್ರಗಳನ್ನು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು #NewLook ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ. 52 ವರ್ಷ ವಯಸ್ಸಿನ ರಾಹುಲ್ ಗಾಂಧಿ ಅವರು ತಮ್ಮ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮ ಕೂದಲು ಮತ್ತು ಗಡ್ಡವನ್ನು ತುಂಬಾ ದಟ್ಟವಾಗಿ ಬೆಳಸಿಕೊಂಡಿದ್ದರು. ನಾಲ್ಕು ತಿಂಗಳಲ್ಲಿ ಅವರು ಸುಮಾರು 4,000 ಕಿ.ಮೀ. 12 ರಾಜ್ಯಗಳಾದ್ಯಂತ ಪಾದಯಾತ್ರೆ ಮಾಡಿದ್ದರು.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿ ಅವರು ಕಾರ್ಪಸ್ ಕ್ರಿಸ್ಟಿ ಕಾಲೇಜ್ ಮತ್ತು ಕಂಪನಿಯಲ್ಲಿ ಭಾರತೀಯ ಮೂಲದ ಫೆಲೋ, ಟ್ಯೂಟರ್ ಮತ್ತು ಗ್ಲೋಬಲ್ ಹ್ಯುಮಾನಿಟೀಸ್ ಇನಿಶಿಯೇಟಿವ್‌ನ ನಿರ್ದೇಶಕರಾದ ಪ್ರೊಫೆಸರ್ ಶ್ರುತಿ ಕಪಿಲಾ ಅವರೊಂದಿಗೆ "ಬಿಗ್ ಡೇಟಾ ಮತ್ತು ಡೆಮಾಕ್ರಸಿ" ಮತ್ತು "ಭಾರತ-ಚೀನಾ ಸಂಬಂಧಗಳು" ಕುರಿತು ಅಧಿವೇಶನಗಳನ್ನು ನಡೆಸಲು ಯೋಜಿಸಿದ್ದಾರೆ.

"ನಮ್ಮ ಕೇಂಬ್ರಿಡ್ಜ್ ಎಂಬಿಎ ಕಾರ್ಯಕ್ರಮವು ಭಾರತದ ಪ್ರಮುಖ ವಿರೋಧ ಪಕ್ಷದ ನಾಯಕ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ" ಎಂದು ಕೇಂಬ್ರಿಡ್ಜ್ ಜೆಬಿಎಸ್ ಮಂಗಳವಾರ ಟ್ವೀಟ್ ಮಾಡಿದೆ. ಕಾಂಗ್ರೆಸ್ ನಾಯಕರು ಟ್ವೀಟ್ ಅನ್ನು ಹಂಚಿಕೊಂಡಿದ್ದು, "ನನ್ನ ಅಲ್ಮಾ ಮೇಟರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲು ಮತ್ತು ಕೇಂಬ್ರಿಡ್ಕ್ ಜೆಬಿಎಸ್‌ನಲ್ಲಿ ಉಪನ್ಯಾಸ ನೀಡಲು ಎದುರು ನೋಡುತ್ತಿದ್ದಾರೆ. ಭೌಗೋಳಿಕ ರಾಜಕೀಯ, ಅಂತಾರಾಷ್ಟ್ರೀಯ ಸಂಬಂಧಗಳು, ದೊಡ್ಡ ಡೇಟಾ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಹಲವು ಗಣ್ಯರೊಂದಿಗೆ ಪಾಲ್ಗೊಳ್ಳಲು ಸಂತೋಷವಾಗಿದೆ ಎಂದು ಬರೆದಿದ್ದಾರೆ.
ಮೇ ತಿಂಗಳಲ್ಲಿ ಯುಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ "ಇಂಡಿಯಾ ಅಟ್ 75" ಎಂಬ ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಕೊನೆಯದಾಗಿ ಮಾತನಾಡಿದ್ದರು. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮೂರು ದಿನಗಳ ಕಾಂಗ್ರೆಸ್ ನಾಯಕತ್ವ ಸಭೆಯ ನಂತರ ರಾಹುಲ್ ಗಾಂಧಿ ಯುಕೆಗೆ ತೆರಳಿದ್ದರು.












Click it and Unblock the Notifications