ಜೇಟ್ಲಿ ಮಗಳ ಖಾತೆಗೆ ಚೋಕ್ಸಿ ಹಣ ಹಾಕಿದ್ದಾರೆ: ರಾಹುಲ್ ಗಂಭೀರ ಆರೋಪ

ನವದೆಹಲಿ, ಅಕ್ಟೋಬರ್ 22: ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಹಣ ವಂಚಿಸಿ ಪರಾರಿ ಆಗಿರುವ ಮೆಹುಲ್ ಚೋಕ್ಸಿ ಕೇಂದ್ರದ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರ ಮಗಳ ಖಾತೆಗೆ ಹಣ ಹಾಕಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಅರುಣ್ ಜೇಟ್ಲಿ ಅವರ ಮಗಳ ಖಾತೆಗೆ ಯಾವ ಖಾತೆಯಿಂದ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ಮಾಹಿತಿ ಸಹ ನೀಡಿರುವ ರಾಹುಲ್ ಗಾಂಧಿ ಐಸಿಐಸಿ ಬ್ಯಾಂಕ್‌ನ ಖಾತೆ ಸಂಖ್ಯೆಯೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿ ಇದೇ ಖಾತೆಯಿಂದ ಜೇಟ್ಲಿ ಅವರ ಮಗಳಿಗೆ ಹಣ ಬಂದಿದೆ ಎಂದೂ ಸಹ ಹೇಳಿದ್ದಾರೆ.

Rahul Gandhi accused that Choksi deposited money to Jaitleys daughter account

ಜೇಟ್ಲಿ ಮಗಳಿಗೆ ಚೋಕ್ಸಿ ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ಅವರ ತಂದೆ ಚೋಕ್ಸಿ ಅವರಿಗೆ ಸಹಾಯ ಮಾಡಿ ಆತ ದೇಶ ಬಿಟ್ಟು ಓಡಿ ಹೋಗಲು ಸಹಾಯ ಮಾಡಿದರು ಆದರೆ ಆ ನಂತರ ಚೋಕ್ಸಿ, ಜೇಟ್ಲಿ ಮಗಳ ಖಾತೆಗೆ ಹಣ ಹಾಕಿದ್ದಾರೆ ಎಂದು ಐಸಿಐಸಿ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ರಾಹುಲ್ ನೀಡಿದ್ದಾರೆ.

ಅರುಣ್ ಜೇಟ್ಲಿ ಅವರ ಮಗಳು ಸೊನಾಲಿ ಜೇಟ್ಲಿ ಹಾಗೂ ಅಳಿಯ ಜಯೇಶ್ ಬಕ್ಷಿ ಅವರ ಖಾತೆಗೆ ಚೋಕ್ಸಿ ಮಾಲೀಕತ್ವದ ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ನಿಂದ ಹಣ ವರ್ಗಾವಣೆ ಆಗಿತ್ತು. ಈ ಹಣ ಕಳೆದ ಡಿಸೆಂಬರ್‌ನಲ್ಲಿ ಆಗಿತ್ತು. ತನಗೆ ಸಹಾಯ ಮಾಡಲೆಂದು ಲಂಚದ ರೂಪವಾಗಿ ಈ ಹಣವನ್ನು ಚೋಕ್ಸಿ ಕೊಟ್ಟಿದ್ದ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

ಮೆಹುಲ್‌ ಚೋಕ್ಸಿ ದೇಶ ಬಿಟ್ಟು ಪರಾರಿಯಾದ ನಂತರ ಫೆಬ್ರವರಿ 20 ನೇ ತಾರೀಖಿನಂದು ಜೇಟ್ಲಿ ಅವರ ಮಗಳು ಚೋಕ್ಸಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ರಾಜಸ್ಥಾನದ ಕಾಂಗ್ರೆಸ್‌ ಹಿರಿಯ ಮುಖಂಡ ಸಚಿನ್ ಪೈಲೆಟ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ರಫೆಲ್ ಹಗರಣ ಹಾಗೂ ಸಾಲ ಮಾಡಿ ಓಡಿ ಹೋಗುತ್ತಿರುವ ದ್ರೋಹಿಗಳ ವಿಷಯವಾಗಿ ಕೇಂದ್ರವನ್ನು ಬಹುವಾಗಿ ಕಾಡುತ್ತಿದೆ. ಚೋಕ್ಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರುಣ್‌ಜೇಟ್ಲಿ ರಾಜೀನಾಮೆ ನೀಡುವಂತೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+