ಕಾಂಗ್ರೆಸ್ ಆಡಳಿತಕ್ಕೆ ಹೊಸ ಸಮಿತಿ, ಕರ್ನಾಟಕದ ಮೂವರಿಗೆ ಸ್ಥಾನ

Recommended Video

      ಕಾಂಗ್ರೆಸ್ ಗೆ ರಾಹುಲ್ ಗಾಂಧಿಯವರ ಹೊಸ ಸ್ಟೀರಿಂಗ್ ಸಮಿತಿ ರಚನೆ | Oneindia Kannada

      ನವದೆಹಲಿ, ಫೆಬ್ರವರಿ 16: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮೇಲುಸ್ತುವಾರಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಸಮಿತಿ ನೇಮಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಸ್ಟೀರಿಂಗ್ ಕಮಿಟಿ ಎಂದು ಹೆಸರಿಡಲಾಗಿದೆ.

      ಮುಂದಿನ ಅಧಿವೇಶನದ ಸಂದರ್ಭದಲ್ಲಿ ಈ ಹಿಂದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಪರ್ಯಾಯವಾಗಿ ಈ ಸಮಿತಿ ಕೆಲಸ ಮಾಡಲಿದೆ.

      34 ಜನರ ಸ್ಟೀರಿಂಗ್ ಸಮಿತಿಯಲ್ಲಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಿದ್ದಾರೆ. ಇವರೆಲ್ಲಾ ನಾಳೆ ಅಂದರೆ ಫೆಬ್ರವರಿ 17ರಂದು ಸಭೆ ನಡೆಸಲಿದ್ದಾರೆ.

      Rahul forms steering committee for Cong plenary

      ಪಕ್ಷದ ಸಂವಿಧಾನದ ಆರ್ಟಿಕಲ್ XV (vii) (b) ಅಡಿಯಲ್ಲಿ ರಾಹುಲ್ ಗಾಂಧಿ ಸ್ಟೀರಿಂಗ್ ಸಮಿತಿ ರಚಿಸಿದ್ದಾರೆ. ಸಂಸತ್ ಅಧಿವೇಶನಕ್ಕೂ ಮೊದಲು ನಡೆಯಲಿರುವ ಸರ್ವಪಕ್ಷದ ಸಭೆಗೂ ಮುನ್ನ ಈ ಸಮಿತಿ ರಚನೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ (ವರ್ಕಿಂಗ್ ಕಮಿಟಿ) ಗೆ ಬದಲಾಗಿ ಈ ಸ್ಟೀರಿಂಗ್ ಸಮಿತಿ ಕೆಲಸ ಮಾಡಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಹೇಳಿದ್ದಾರೆ.

      ಸಮಿತಿಯಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫೆರ್ನಾಂಡಿಸ್, ಬಿಕೆ ಹರಿಪ್ರಸಾದ್, ಸಮಿತಿಯಲ್ಲಿ ಸ್ಥಾನ ಪಡೆದ ಕನ್ನಡಿಗರಾಗಿದ್ದಾರೆ.

      ಹಿರಿಯ ಕಾಂಗ್ರೆಸ್ ನಾಯಕರಾದ ಎ.ಕೆ. ಆ್ಯಂಟನಿ, ಅಹ್ಮದ್ ಪಟೇಲ್, ದಿಗ್ವಿಜಯ್ ಸಿಂಗ್, ಗುಲಾಮ್ ನಬಿ ಅಝಾದ್, ಅಂಬಿಕಾ ಸೋನಿ, ಜನಾರ್ದನ್ ದ್ವಿವೇದಿ, ಅಶೋಕ್ ಗೆಹ್ಲೋಟ್, ಸುಶೀಲ್ ಕುಮಾರ್ ಶಿಂಧೆ, ಪಿ. ಚಿದಂಬರಂ, ಆನಂದ್ ಶರ್ಮಾ, ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಸಮಿತಿಯಲ್ಲಿ ಸ್ಥಾನ ಪಡೆದ ಇತರ ಪ್ರಮುಖರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+