• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈನಿಕರ ರಕ್ತಕ್ಕೆ ಅಗೌರವ ತೋರಿದ ಪ್ರಧಾನಿ: ರಾಹುಲ್ ಗಾಂಧಿ ವಾಗ್ದಾಳಿ

|

ನವದೆಹಲಿ, ಸೆಪ್ಟೆಂಬರ್ 21: ಭಾರತ ಸರ್ಕಾರದ ಒತ್ತಾಯದ ಮೇರೆಗೇ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪೆನಿಯೊಂದಿಗೆ ಸಹಭಾಗಿತ್ವ ಹೊಂದಲು ಮುಂದಾಗಿದ್ದು ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊ ಒಲಾಂಡ್ ಅವರ ಹೇಳಿಕೆ, ರಫೇಲ್ ಒಪ್ಪಂದದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿರುವ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿ ದೊರೆತಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಒಲಾಂಡ್ ಅವರ ಹೇಳಿಕೆ ಬಹಿರಂಗವಾಗುತ್ತಿದ್ದಂತೆಯೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್, ಪ್ರಧಾನಿ ಮೋದಿ ಅವರು ಖುದ್ದಾಗಿ ಈ ವ್ಯವಹಾರವನ್ನು ಕುದುರಿಸಿದ್ದಾರೆ ಮತ್ತು ರಫೇಲ್ ಒಪ್ಪಂದವನ್ನು ಮುಚ್ಚಿದ ಬಾಗಿಲಿನ ಹಿಂಬದಿಯಲ್ಲಿ ಬದಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಫ್ರಾಂಕೊ ಒಲಾಂಡ್ ಅವರಿಗೆ ಧನ್ಯವಾದ. ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅವರಿಗೆ ನೂರಾರು ಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ಅವರು ಸ್ವತಃ ತಲುಪಿಸಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದು ರಾಹುಲ್ ಹೇಳಿದ್ದಾರೆ.

ಎಚ್‌ಎಎಲ್‌ಗೆ ಸಿಗದ ಅವಕಾಶ: ಸಚಿವೆ ನಿರ್ಮಲಾ ಸುಳ್ಳು ಹೇಳಿದರೇ?

ಪ್ರಧಾನಿಯವರು ದೇಶಕ್ಕೆ ಮೋಸ ಮಾಡಿದ್ದಾರೆ. ಅವರು ನಮ್ಮ ಸೈನಿಕರ ರಕ್ತಕ್ಕೆ ಅಗೌರವ ತೋರಿಸಿದ್ದಾರೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ರಫೇಲ್ ಯುದ್ಧ ವಿಮಾನದ ತಯಾರಿಕೆಗೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್‌ಅನ್ನು ನಾಮನಿರ್ದೇಶನ ಮಾಡುವಂತೆ ಭಾರತ ಸರ್ಕಾರವೇ ಫ್ರೆಂಚ್ ಸರ್ಕಾರವನ್ನು ಕೋರಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಹೇಳಿದ್ದಾರೆ ಎನ್ನಲಾಗಿದೆ.

ಎಚ್‌ಎಎಲ್‌ಗೆ ತಪ್ಪಿದ ಅವಕಾಶ: ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ನಿರ್ಮಲಾ

ಫ್ರಾನ್ಸ್‌ನ ವೆಬ್‌ಸೈಟ್ ಮೀಡಿಯಾಪಾರ್ಟ್‌ನಲ್ಲಿ ಬರೆದ ಲೇಖನವೊಂದರಲ್ಲಿ ಒಲಾಂಡ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಈ ಆರೋಪವನ್ನು ರಕ್ಷಣಾ ಇಲಾಖೆ ನಿರಾಕರಿಸಿದೆ. ರಫೇಲ್ ಯುದ್ಧ ವಿಮಾನ ತಯಾರಿಯಲ್ಲಿ ಫ್ರಾನ್ಸ್‌ನ ದಸಾಲ್ಟ್ ಏವಿಯೇಷನ್ ಜತೆ ಸಹಭಾಗಿತ್ವ ಹೊಂದಲು ಅನಿಲ್ ಅಂಬಾನಿ ಕಂಪೆನಿಗೆ ಅನುಮೋದನೆ ನೀಡುವಂತೆ ಭಾರತ ಸರ್ಕಾರ ಒತ್ತಾಯಿಸಿತ್ತು ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್ ಅವರ ಹೇಳಿಕೆಯನ್ನು ಒಳಗೊಂಡ ವರದಿಯನ್ನು ಪರಿಶೀಲಿಸಲಾಗುತ್ತಿದೆ.

ಭಾರತ ಸರ್ಕಾರವಾಗಲೀ, ಪ್ರಾನ್ಸ್ ಸರ್ಕಾರವಾಗಲೀ ಈ ಬಗ್ಗೆ ಯಾವುದೇ ವಾಣಿಜ್ಯಾತ್ಮಕ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂಬುದನ್ನು ಪುನರುಚ್ಚರಿಸಿದೆ.

English summary
Congress president Rahul Gandhi alleged that Prime Minister Narendra modi personally negotiated and changed Rafale deal behind closed doors. His remarks comes after a report qouated France former President Francois Hollande stating Indian Government has asked the French government to nominate Anil Ambani's Reliance Defence Industries as its Partner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X