ಮೋದಿಯಿದ್ದರೆ ಇದೆಲ್ಲ ಸಾಧ್ಯ: ಅಂಬಾನಿ ಸಾಲಮನ್ನಾಕ್ಕೆ ಕಾಂಗ್ರೆಸ್ ಟೀಕೆ

ನವದೆಹಲಿ, ಏಪ್ರಿಲ್ 13: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ತೆರಳಿ ರಫೇಲ್ ಒಪ್ಪಂದ ಪ್ರಕಟಿಸಿದ ಆರು ತಿಂಗಳಲ್ಲಿಯೇ, ಫ್ರಾನ್ಸ್‌ನಲ್ಲಿರುವ ಅನಿಲ್ ಅಂಬಾನಿ ಒಡೆತನದ ದೂರಸಂಪರ್ಕ ಕಂಪೆನಿಯ 162 ಮಿಲಿಯನ್ ಡಾಲರ್ ತೆರಿಗೆ ಸಾಲ ಮನ್ನಾ ಮಾಡಿರುವ ಅಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲ,''ಪ್ರಧಾನಿ ಮೋದಿ 'ಡಬಲ್ ಎ (ಅನಿಲ್ ಅಂಬಾನಿ) ಅವರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆಯೇ? ಚೌಕಿದಾರ ಚೋರ್ ಹೈ. ಮತ್ತು ಆತನ ಕಳ್ಳತನವನ್ನು ಹಿಡಿಯಲಾಗಿದೆ'' ಎಂದು ಟೀಕಿಸಿದ್ದಾರೆ.

Rafale deal anil ambani tax waive by French government congress narendra modi hai toh mumkin hai

'ರಫೇಲ್ ಯುದ್ಧ ವಿಮಾನಗಳ ಬಗ್ಗೆ ಮಾತನಾಡುವುದಿಲ್ಲ ಮತ್ತು ಅದರ ಗುತ್ತಿಗೆ ಎಚ್‌ಎಎಲ್‌ನಲ್ಲಿದೆ ಎಂದು ಏಪ್ರಿಲ್ 28ರಂದು ರಕ್ಷಣಾ ಕಾರ್ಯದರ್ಶಿ ಹೇಳಿದ್ದರು' ಎಂಬುದಾಗಿ ಸುರ್ಜೇವಾಲ ತಿಳಿಸಿದರು.

'ಫ್ರಾನ್ಸ್‌ನಲ್ಲಿರುವ ಅಂಬಾನಿಯ ಕಂಪೆನಿಗಳಲ್ಲೊಂದು ಬರ್ಮುಡಾದಲ್ಲಿ ಮತ್ತೊಂದು ಜಾಗತಿಕ ಕಂಪೆನಿ ಹೊಂದಿದ್ದು ಅಲ್ಲಿಗೆ ಕಪ್ಪುಹಣ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

'ಫ್ರಾನ್ಸ್‌ನಲ್ಲಿ ಸುಮಾರು 150 ಮಿಲಿಯನ್ ತೆರಿಗೆ ಮೊತ್ತ ಉಳಿಸಿಕೊಂಡಿದ್ದ ಅನಿಲ್ ಅಂಬಾನಿ ಅವರ 143 ಮಿಲಿಯನ್ ಯುರೋ ತೆರಿಗೆ ಮನ್ನಾ ಮಾಡಲಾಯಿತು. ಅವರು ಪಾವತಿ ಮಾಡಿದ್ದು ಏಳು ಮಿಲಿಯನ್ ಯುರೋ ಮಾತ್ರ. ಮೋದಿ ಇದ್ದರೆ ಇದೆಲ್ಲ ಸಾಧ್ಯ' ಎಂದು ಸುರ್ಜೇವಾಲ ಟೀಕಿಸಿದರು.

ಅನಿಲ್ ಅಂಬಾನಿ ವಿರುದ್ಧ ಪ್ಯಾರಿಸ್ ಕೋರ್ಟ್‌ನಲ್ಲಿ ಶೀಘ್ರದಲ್ಲಿಯೇ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ. ತಮ್ಮ ಫ್ರಾನ್ಸ್‌ ಸ್ನೇಹಿತರೊಬ್ಬರು ಈ ಮಾಹಿತಿ ನೀಡಿರುವುದಾಗಿ ಅವರು ಹೇಳಿದ್ದಾರೆ.

ಇದರ ಪರಿಣಾಮಗಳ ಬಗ್ಗೆ ನನಗೆ ಗೊತ್ತಾದ ಬಳಿಕ ತಿಳಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+