ಅಂಗುಲಿಮಾಲ ಅಲ್ಲಾರೀ... ಈ ಪೊಲೀಸ್ ಎತ್ತರ ಏಳಡಿ ಆರಿಂಚು!
ಪಟಿಯಾಲ, ನವೆಂಬರ್ 14: ಅಬ್ಬಬ್ಬಾ ಅಂದ್ರೆ ಒಬ್ಬ ವ್ಯಕ್ತಿಯ ಗರಿಷ್ಠ ಎತ್ತರ ಎಷ್ಟು? ಕಾಂಪ್ಲೇನ್ ಬಾಯ್ ಆಗಿದ್ರೂ ಬೆಳೆಯೋದು ಗರಿಷ್ಠ ಆರಡಿ ಅಷ್ಟೆ! ಆದರೆ ಇಲ್ಲೊಬ್ಬ ಪೊಲೀಸ್ ಇದ್ದಾರೆ, ಅವರ ಎತ್ತರ ಏಳೂವರೆ ಅಡಿ!
ಕತ್ತೆತ್ತಿ ನೋಡಬೇಕಾದಷ್ಟು ಎತ್ತರ, ಅಜಾನುಬಾಹು ವ್ಯಕ್ತಿತ್ವದ ಅಂಗುಲಿಮಾಲನ ಕತೆ ಕೇಳಿದ್ದೇವೆ. ಇದೀಗ ಪಂಜಾಬಿನ ಜಗದೀಪ್ ಸಿಂಗ್ ಎಂಬ ಪೊಲೀಸ್, ಮತ್ತೊಮ್ಮೆ ಅಂಗುಲಿಮಾಲನನ್ನು ನೆನಪಿಸಿದ್ದಾರೆ.

ಏಳಡಿ ಆರಿಂಚು ಎತ್ತರದ ಜಗದೀಪ್ ಸಿಂಗ್ ವಿಶ್ವದಲ್ಲೇ ಅತ್ಯಂತ ಎತ್ತರದ ಪೊಲೀಸ್ ಎಂಬ ಖ್ಯಾತಿ ಪಡೆದಿದ್ದಾರೆ. ಇವರು ಬೈಕ್ ಮೇಲೆ ಕೂತು ಪ್ರಯಾಣಿಸುತ್ತಿದ್ದರೆ, ಚಿಕ್ಕ ಮಕ್ಕಳ ಆಟಿಕೆ ಬೈಕಿನ ಮೇಲೆ ಕೂತಿದ್ದಾರೇನೋ ಅನ್ನಿಸುತ್ತೆ... ಮರಗಳಿಂದ ಹಣ್ಣು ಕೀಳುವುದುಕ್ಕೆ, ಎತ್ತರದ ವಸ್ತುಗಳನ್ನು ತೆಗೆಯುವುದುಕ್ಕೆ ಇವರಿದ್ದರೆ ಏಣಿಯೂ ಬೇಡ!
ಕೇವಲ ಎತ್ತರವಷ್ಟೇ ಅಲ್ಲ, ಬರೋಬ್ಬರಿ 190 ಕೆಜಿ ತೂಗುವ ಇವರಿಗೆ ಈಗಿನ್ನೂ 35 ವರ್ಷ ವಯಸ್ಸು! ಈತ ಧರಿಸುವ ಚಪ್ಪಲಿಯ ಸೈಜ್ 19! ಹಾಕುವ ಬಟ್ಟೆ ಸಹ ಅಂಗಡಿಯಲ್ಲಿ ಸಿಗುವುದಿಲ್ಲ. ಶೂ, ಚಪ್ಪಲಿಯನ್ನೂ ಇವರು ಆಮದು ಮಾಡಿಕೊಳ್ಳುತ್ತಾರೆ. ಇಲ್ಲವೇ ಮೊದಲೇ ಆರ್ಡರ್ ಕೊಟ್ಟು ಮಾಡಿಸಿಕೊಳ್ಳುತ್ತಾರೆ. ಬಟ್ಟೆಯನ್ನು ಸಹ ಒಬ್ಬ ಟೈಲರ್ ಬಳಿ ಹೊಲಿಸಿಕೊಳ್ಳುತ್ತಾರೆ!
ಇವರು ಗಿನ್ನೀಸ್ ದಾಖಲೆ ಪಟ್ಟಿಯಲ್ಲೂ ಹೆಸರು ಪಡೆಯಬಹುದು ಎನ್ನಲಾಗಿದೆ. ಆದರೆ ಇವರನ್ನು ಸೆಲೆಬ್ರಿಟಿಯನ್ನಾಗಿ ಮಾಡಿದ ಇದೇ ಎತ್ತರವೇ ಅವರಿಗೆ ಹಲವು ಸಮಸ್ಯೆಯನ್ನೂ ತಂದೊಡ್ಡಿದೆ. ಹಲವು ಲೇವಡಿಗಳನ್ನು ಅವರು ಕೇಳಬೇಕಾಗಿದೆ.












Click it and Unblock the Notifications