3 ವರ್ಷದ ಸಾಕುಮಗಳ ಮೇಲೆ ಅತ್ಯಾಚಾರ: ಮಲತಂದೆ ಬಂಧನ
ಪುಣೆ, ಫೆಬ್ರವರಿ 7: ಮೂರು ವರ್ಷದ ಸಾಕು ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಯೊಬ್ಬನನ್ನು ಮಹಾರಾಷ್ಟ್ರದ ಪುಣೆಯ ಪೊಲೀಸರು ಬಂಧಿಸಿದ್ದಾರೆ.
ಪುಣೆಯ ವಾರ್ಜೆ ಎಂಬಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ನೀಡಿದ ದೂರಿನನ್ವರ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಪತಿ, ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಲು ಮುಂದಾಗಿದ್ದಾನೆ.
ಆದರೆ ಪತ್ನಿ ಒಪ್ಪದಿದ್ದಾಗ ಮನೆಯಲ್ಲಿದ್ದ ಮೂರು ವರ್ಷದ ಸಾಕು ಮಗಳನ್ನು ಹೊರಗಡೆ ಕರೆದೊಯ್ದಿದ್ದಾನೆ. ಹಿಂತಿರುಗಿ ಬಂದ ಮೇಲೆ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದುದನ್ನು ಕಂಡು ಆಅಸ್ಪತ್ರೆಗೆ ಸೇರಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢವಾಗಿದೆ.

ಇದರಿಂದ ಆಕ್ರೋಶಗೊಂಡ ಆಕೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಪೋಸ್ಕೋ(Children from Sexual Offences) ಕಾಯ್ದೆಯಡಿ ಬಂಧಿಸಲಾಗಿದೆ.












Click it and Unblock the Notifications