ಪುಲ್ವಮಾ ದಾಳಿಗೆ ಸಹಕರಿಸಿದ್ದ ಉಗ್ರನನ್ನು ಬಂಧಿಸಿದ ಎನ್‌ಐಎ

ನವದೆಹಲಿ, ಫೆಬ್ರವರಿ 28 : ಪುಲ್ವಮಾ ದಾಳಿಗೆ ಸಹಕರಿಸಿದ ಆರೋಪದ ಮೇಲೆ ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ದಾಳಿಯ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದು, ಬಂಧನದಿಂದ ತನಿಖೆ ಚುರುಕುಗೊಳ್ಳುವ ನಿರೀಕ್ಷೆ ಇದೆ.

ಶಕೀರ್ ಬಷೀರ್ ಎಂಬ ಉಗ್ರನನ್ನು ಎನ್‌ಐಎ ಶುಕ್ರವಾರ ಬಂಧಿಸಿದೆ. ಜೈಷ್ ಎ ಮೊಹಮ್ಮದ್ ಸಂಘನೆಯ ತಳಮಟ್ಟದ ಸದಸ್ಯ ಈತ ಎಂದು ಎನ್‌ಐಎ ಹೇಳಿದೆ. ಪುಲ್ವಮಾ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಆದಿಲ್ ಅಹಮದ್ ದಾರ್‌ಗೆ ಈಗ ವಸತಿ ವ್ಯವಸ್ಥೆ ಮಾಡಿದ್ದ.

2018 ರಿಂದ 2019ರ ಫೆಬ್ರವರಿ ತನಕ ಶಕೀರ್ ಬಷೀರ್ ಆದಿಲ್ ಅಹಮದ್ ದಾರ್ ಮತ್ತು ಪಾಕಿಸ್ತಾನದ ಮತ್ತೊಬ್ಬ ಉಗ್ರ ಉಮರ್ ಫಾರೂಖ್‌ಗೆ ವಸತಿ ವ್ಯವಸ್ಥೆ ಮಾಡಿದ್ದ ಎಂಬ ಮಾಹಿತಿ ಎನ್‌ಐಎಗೆ ಸಿಕ್ಕಿದ್ದು, ತನಿಖೆ ಮುಂದುವರೆದಿದೆ.

Pulwama Attack Case NIA Arrested Shakir Bashir Magrey

ಶಕೀರ್ ಬಷೀರ್ ಆದಿಲ್ ಅಹಮದ್ ದಾರ್‌ಗೆ ಐಇಡಿ ತಯಾರು ಮಾಡಲು ಸಹಕಾರ ನೀಡಿದ್ದ. ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

ಪುಲ್ವಮಾ ದಾಳಿಯ ಆರೋಪಿಗೆ ಜಾಮೀನು ಸಿಕ್ಕಿದೆ ಎಂಬ ವರದಿಗಳು ಗುರುವಾರ ಹಬ್ಬಿತ್ತು. ಎನ್‌ಐಎ ಈ ಕುರಿತು ಸ್ಪಷ್ಟನೆ ನೀಡಿತ್ತು. ಜಾಮೀನು ಸಿಕ್ಕಿರುವುದು ಪುಲ್ವಮಾ ದಾಳಿಯ ಆರೋಪಿಗಲ್ಲ 2019ರ ಫೆಬ್ರವರಿಯಲ್ಲಿ ಬಂಧಿಸಲಾದ ಯೂಸೂಫ್ ಚೋಪನ್ ಎಂಬುವವರಿಗೆ ಎಂದು ಸ್ಪಷ್ಟನೆ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+