ಸಾಧು ಸಂತರಿಂದ ಜೈಲು ಕೈದಿಗಳವರೆಗೆ ಯಾರಿಗಿಲ್ಲ ಯೋಗ?!

ಜೂನ್ 21-ಅಂತರರಾಷ್ತ್ರೀಯ ಯೋಗ ದಿನಾಚರಣೆ ಕರ್ನಾಟಕದಲ್ಲೂ ಈ ವರ್ಷ ದಾಖಲೆಗೆ ಸೇರಲಿದೆ. ಮೂನ್ನೂರಾ ಐವತ್ತು ಸ್ಥಳಗಳಲ್ಲಿ ರಾಜ್ಯದಾದ್ಯಂತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂರು ಲಕ್ಷ ಮಂದಿ ಭಾಗವಹಿಸಿದ್ದಾರೆ. ರಾಜ್ಯದ ನಲವತ್ತು ಜೈಲುಗಳಲ್ಲಿನ ಕೈದಿಗಳು ಕೂಡ ಪಾಲ್ಗೊಂಡಿದ್ದಾರೆ.

ಬೆಂಗಳೂರಿನ ನಲವತ್ತು ಬಸ್ ಡಿಪೋದಲ್ಲಿ ಯೋಗ ದಿನಾಚರಣೆ ಆಚರಿಸಿದ್ದು, ಮೂವತ್ತು ಸಾವಿರ ಮಂದಿ ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗುರುದೇವ್ ನೇತೃತ್ವದಲ್ಲಿ ಹಿಮಾಚಲ ಪ್ರದೇಶದಲ್ಲಿ ಆಯೋಜನೆ ಆಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ವಿಶ್ವದಾದ್ಯಂತ ಇರುವ ಯೋಗ ಶಿಕ್ಷಕ-ಶಿಕ್ಷಕಿಯರಿಗೆ ಈ ಯಶಸ್ಸಿಗಾಗಿ ಧನ್ಯವಾದ ಹೇಳಲಾಯಿತು.

ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಆರ್ಟ್ ಆಫ್ ಲಿವಿಂಗ್ ನ ಯೋಗ ಅಭ್ಯಾಸದಲ್ಲಿ ಭಾಗವಹಿಸಿದ್ದರು. ಸಂಸದರು, ಸೇನಾಧಿಕಾರಿಗಳು, ಕಾರ್ಪೋರೇಟ್ ವಲಯದವರು, ವಿದ್ಯಾರ್ಥಿಗಳು, ಗೃಹಿಣಿಯರು, ಅಷ್ಟೇ ಏಕೆ ಕೈದಿಗಳು ಸಹ ಈ ಯೋಗ ದಿನದ ಆಚರಣೆಯಲ್ಲಿ ತುಂಬ ಉತ್ಸಾಹದಿಂದ ಪಾಲುದಾರರಾದರು.

ಇನ್ನು ಈ ದಿನದ ಕಾರ್ಯಕ್ರಮದಲ್ಲಿ ಅಲ್ಲಿಲ್ಲಿ ಕಂಡ ಕೆಲವು ಫೋಟೋಗಳನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ. ಪಿಟಿಐ ಸುದ್ದಿ ಸಂಸ್ಥೆಯ ಕೆಲ ಫೋಟೋಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ಸಾಧುಗಳಿಂದ ಯೋಗ ದಿನಾಚರಣೆ

ಸಾಧುಗಳಿಂದ ಯೋಗ ದಿನಾಚರಣೆ

ಅಸ್ಸಾಂನ ಗುವಾಹತಿಯ ಕಾಮಾಖ್ಯ ದೇಗುಲದಲ್ಲಿ ಹಿಂದೂ ಸಾಧುಗಳು ಅಂತರ ರಾಷ್ಟ್ರೀಯ ಯೋಗ ದಿನದ ಬುಧವಾರಂದು ಯೋಗಾಭ್ಯಾಸದಲ್ಲಿ ನಿರತರಾಗಿದ್ದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಮುಸ್ಲಿಂ ಯುವತಿಯ ಯೋಗ ಅಭ್ಯಾಸ

ಮುಸ್ಲಿಂ ಯುವತಿಯ ಯೋಗ ಅಭ್ಯಾಸ

ನವೀ ಮುಂಬೈನ ವಶಿಯಲ್ಲಿ ಮುಸ್ಲಿಮ್ ಯುವತಿಯೊಬ್ಬರು ಯೋಗಾಭ್ಯಾಸದಲ್ಲಿ ನಿರತರಾಗಿದ್ದರು.

ಯೋಗನಿರತ ಯೋಧ

ಯೋಗನಿರತ ಯೋಧ

ಚೆನ್ನೈನಲ್ಲಿ ಸೇನಾ ಯೋಧರೊಬ್ಬರು ಯೋಗ ನಿರತರಾಗಿದ್ದ ಭಂಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಅಭ್ಯಾಸ

ಬೆಂಗಳೂರು ಅಭ್ಯಾಸ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಯೋಗ ಶಿಕ್ಷಕಿ ನನಮ್ಮಳ್ (ಬಲಕ್ಕೆ) ಹಾಗೂ ಪೊರ್ಚೊನ್ ಲಿಂಚ್ (ಎಡಕ್ಕೆ) ಕಂಡುಬಂದಿದೆ ಹೀಗೆ.

ಪ್ರತಿಭಟನೆಗೂ ಯೋಗ (ಗ್ಯ) ಮಾರ್ಗ

ಪ್ರತಿಭಟನೆಗೂ ಯೋಗ (ಗ್ಯ) ಮಾರ್ಗ

ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು ಮೀರತ್ ನ ರಾಷ್ಟ್ರೀಯ ಹೆದ್ದಾರಿ ಐವತ್ತೆಂಟರಲ್ಲಿ ಯೋಗ ಮಾಡುವ ಮೂಲಕ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ವಿವಿಧ ಯೋಗಾಸನ

ವಿವಿಧ ಯೋಗಾಸನ

ತ್ರಿಪುರ ರಾಜ್ಯದ ಅಗರ್ತಲದಲ್ಲಿ ಹೆಣ್ಣುಮಕ್ಕಳು ಯೋಗದ ಆಸನಗಳನ್ನು ಪ್ರದರ್ಶಿಸಿದರು.

ಸಾಮೂಹಿಕ ಯೋಗಾಭ್ಯಾಸ

ಸಾಮೂಹಿಕ ಯೋಗಾಭ್ಯಾಸ

ಇದು ನ್ಯೂಯಾರ್ಕ್ ನಗರದಲ್ಲಿ ಕೈಗೊಂಡ ಸಾಮೂಹಿಕ ಯೋಗಾಭ್ಯಾಸದ ಚಿತ್ರ.

ರಾಜಸ್ತಾನ ಮುಖ್ಯಮಂತ್ರಿ ಯೋಗಾಭ್ಯಾಸ

ರಾಜಸ್ತಾನ ಮುಖ್ಯಮಂತ್ರಿ ಯೋಗಾಭ್ಯಾಸ

ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅರಸ್ ಜೈಪುರದಲ್ಲಿ ನಡೆದ ಯೋಗ ಅಭ್ಯಾಸದಲ್ಲಿ ಭಾಗವಹಿಸಿದ್ದರು.

ಯೋಗನಿರತ ಅರವಿಂದ್ ಕೇಜ್ರಿವಾಲ್

ಯೋಗನಿರತ ಅರವಿಂದ್ ಕೇಜ್ರಿವಾಲ್

ದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಲ್ಗೊಂಡಿದ್ದರು.

ರಂಗೀಲಾ ನಟ ಯೋಗ ದಿನದ ಕಾರ್ಯಕ್ರಮದಲ್ಲಿ

ರಂಗೀಲಾ ನಟ ಯೋಗ ದಿನದ ಕಾರ್ಯಕ್ರಮದಲ್ಲಿ

ಮುಂಬೈನ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಟ ಜಾಕಿಶ್ರಾಫ್ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ಹೀಗೆ.

ಈಜುಕೊಳದಲ್ಲಿ ಯೋಗಾಭ್ಯಾಸ

ಈಜುಕೊಳದಲ್ಲಿ ಯೋಗಾಭ್ಯಾಸ

ಅಹ್ಮದಾಬಾದ್ ನಲ್ಲಿ ಮಹಿಳೆಯರು ಈಜುಕೊಳದಲ್ಲಿ ಯೋಗ ಅಭ್ಯಾಸ ಮಾಡಿದರು.

ಪೆರುವಿನಲ್ಲೂ ಯೋಗದ್ದೇ ಧ್ಯಾನ

ಪೆರುವಿನಲ್ಲೂ ಯೋಗದ್ದೇ ಧ್ಯಾನ

ಪೆರು ದೇಶದ ಮಚುಪಿಚುವಿನ ಆಂಡಿಸ್ ಪರ್ವತದ ಅದ್ಭುತವಾದ ಸ್ಥಳದಲ್ಲಿ ಭಾರತ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದ ಚಿತ್ರವಿದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+