ಕೊವಿಡ್ ರೋಗಿಗಳಿಗೆ 'ಸೋರಿಯಾಸಿಸ್ ' ಇಂಜೆಕ್ಷನ್ ನೀಡಲು ಒಪ್ಪಿಗೆ

ನವದೆಹಲಿ , ಜುಲೈ 11: ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರಿಗೆ ಚರ್ಮದ ರೋಗ ಸೋರಿಯಾಸಿಸ್‌ ಅನ್ನು ಗುಣಪಡಿಸಬಲ್ಲ ಇಟೊಲಿಜುಮಾಬ್ ಔಷಧವನ್ನು ನೀಡಲು ಔಷಧ ನಿಯಂತ್ರಣ ಮಂಡಳಿ ಒಪ್ಪಿಗೆ ನೀಡಿದೆ.

Recommended Video

      Drone Prathap ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳಾ ? | Oneindia Kannada

      ಕೊರೊನಾ ಸೋಂಕಿತನಿಗೆ ತೀವ್ರ ತರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇಟೊಲಿಜುಮಾಬ್ ಔಷಧವನ್ನು ನೀಡಬಹುದು ಎಂದು ಹೇಳಲಾಗಿದೆ.

      ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಡಾ. ವಿಜಿ ಸೋಮಾನಿ ಅವರು ಮೋನೋಕ್ಲೋನಲ್ ಆಂಟಿ ಬಾಂಡಿ ಇಂಜೆಕ್ಷನ್ ಇಟೋಲೊಜುಮಾಬ್‌ ಬಳಕೆಗೆ ಒಪ್ಪಿಗೆ ನೀಡಿದ್ದಾರೆ.

      Psoriasis Injection Cleared For Limited Use To Treat COVID Patients

      ಕೊವಿಡ್ 19 ರೋಗಿಗಳಿಗೆ ನಡೆಸಿದ ಕ್ಲಿನಿಕಲ್ ಟ್ರಯಲ್ ಬಳಿಕ ಫಲಿತಾಂಶವನ್ನು ನೋಡಿ ಸೋರಿಯಾಸಿಸ್ ಇಂಜೆಕ್ಷನ್‌ಗೆ ಒಪ್ಪಿಗೆ ನೀಡಲಾಗಿದೆ.

      ಬಯೋಕಾನ್‌ನ ಈ ಔಷಧವನ್ನು ಸೋರಿಯಾಸಿಸ್‌ಗೆ ಬಳಕೆ ಮಾಡಲು ಈಗಾಗಲೇ ಸಮ್ಮತಿ ದೊರೆತಿದೆ. ಪ್ರತಿಯೊಬ್ಬ ರೋಗಿಗೂ ವೈದ್ಯರ ಅನುಮತಿ ಇಲ್ಲದೆ ಆ ಔಷಧವನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆ.

      ಈಗಾಗಲೇ ಆ ಔಷಧವನ್ನು ಸೈಟೋಕಿನ್ ರೋಗಿಗಳಿಗೆ ನೀಡಲು ಸಮ್ಮತಿ ದೊರೆತಿದೆ. ಇದೇ ಔಷಧವನ್ನು ಕೊರೊನಾ ಸೋಂಕಿತರಿಗೆ ನೀಡಲು ಸೂಚಿಸಲಾಗಿದೆ. ಕೊರೊನಾ ಸೋಂಕಿತರ ಮೇಲೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶವೂ ಕೂಡ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+