ಪ್ರಾವಿಡೆಂಟ್ ಹೌಸಿಂಗ್ ನಿಂದ ಮೊದಲ ಬಾರಿಗೆ ವಿಶಿಷ್ಟ FOHF ಅಭಿಯಾನ ಆಗಸ್ಟ್ 15ರಿಂದ 18ರ ತನಕ

ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನ ಕಾಣಬಹುದಾಗಿದೆ. ಮನೆಯ ಖರೀದಿಗಾಗಿ ಎದುರು ನೋಡುತ್ತಿರುವವರು ವರ್ಚುವಲ್ ಟೂರ್ ಮಾಡಬಹುದು, ಸದ್ಯಕ್ಕೆ ಲಭ್ಯ ಇರುವ ಮನೆಗಳನ್ನು ನೋಡಬಹುದು, ಜತೆಗೆ ಆದ್ಯತೆಯ ಅಪಾರ್ಟ್ ಮೆಂಟ್ ಅನ್ನು ಆಯ್ಕೆ ಮಾಡಿಕೊಂಡು, ಆನ್ ಲೈನ್ ನಲ್ಲಿ ಬುಕ್ ಮಾಡಬಹುದು.

ಪ್ರಾವಿಡೆಂಟ್ ಹೌಸಿಂಗ್ ನಿಂದ ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ "ಹೋಮ್ ಬುಕಿಂಗ್ ಎಂಜಿನ್" ಬಳಸಿ ಗ್ರಾಹಕರಿಗೆ ಈ ಮೇಲ್ಕಂಡ ಎಲ್ಲ ಅನುಕೂಲ ಮಾಡಿಕೊಡಲಾಗುತ್ತಿದೆ. ಪ್ರಾವಿಡೆಂಟ್ ಹೌಸಿಂಗ್ ನಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ 'ಫ್ರೀಡಂ ಆನ್ ಲೈನ್ ಹೋಮ್ ಫೆಸ್ಟ್' (FOHF) ಅದ್ಭುತ ಕೊಡುಗೆ ನೀಡಲಾಗುತ್ತಿದೆ.

ಆಗಸ್ಟ್ 15ರಿಂದ 18ನೇ ತಾರೀಕಿನ 2019ರ ಮಧ್ಯೆ 4 ದಿನಗಳ ಅವಧಿಯಲ್ಲಿ ಗೃಹ ಖರೀದಿಯ ಈ ಆನ್ ಲೈನ್ ಹಬ್ಬದಲ್ಲಿ ನೀವೂ ಭಾಗವಹಿಸಬಹುದು. ಗ್ರಾಹಕರು ವರ್ಚುವಲ್ ಟೂರ್ ಮೂಲಕ ಸದ್ಯಕ್ಕೆ ಲಭ್ಯವಿರುವ ಅಪಾರ್ಟ್ ಮೆಂಟ್ ಗಳನ್ನು ವೀಕ್ಷಿಸಿ, ತಮಗೆ ಇಷ್ಟವಾದ ಅಪಾರ್ಟ್ ಮೆಂಟ್ ಗಳನ್ನು ಆನ್ ಲೈನ್ ನಲ್ಲೇ ಬುಕ್ ಮಾಡಬಹುದು. 'ಹೋಮ್ ಬುಕಿಂಗ್ ಆನ್ ಲೈನ್'ನ ನೆರವು ಪಡೆಯಬಹುದು.

ಈ ಅವಧಿಯಲ್ಲಿ ಪ್ರಾವಿಡೆಂಟ್ ನಿಂದ ಕೊಡುಗೆ ನೀಡುತ್ತಿದ್ದು, 12.5 ಲಕ್ಷದ ತನಕ ಉಳಿತಾಯಕ್ಕೆ ಅವಕಾಶ ಇದೆ. ಆದರೆ ಎಕಿನೋಕ್ಸ್ ಹಾಗೂ ಕ್ಯಾಪೆಲ್ಲ ಯೋಜನೆಗೆ ಈ ಉಳಿತಾಯ ಅನ್ವಯ ಆಗಲ್ಲ. ಉಳಿದಂತೆ ಎಲ್ಲದಕ್ಕೂ ಅನ್ವಯಿಸುತ್ತದೆ. ಅಂದ ಹಾಗೆ ಕೊಡುಗೆಯ ಬೆಲೆಗಳನ್ನು ಆಗಸ್ಟ್ 15ನೇ ತಾರೀಕು ಬಹಿರಂಗಪಡಿಸಲಾಗುತ್ತದೆ.

ಈ ಮನೆ ಹಬ್ಬದ ಅಭಿಯಾನ ಹಾಗೂ ಕೂಪನ್ ಖರೀದಿ 2-8-2019ರಿಂದ ಆರಂಭವಾಗುತ್ತದೆ. ಇನ್ನೂ ನೀವು ಕೂಪನ್ ಖರೀದಿ ಮಾಡಿಲ್ಲ ಅಂದರೆ ಚಿಂತೆ ಮಾಡಬೇಡಿ, ಏಕೆಂದರೆ ಕೂಪನ್ ಖರೀದಿ ಮಾಡುವುದಕ್ಕೆ ಆಗಸ್ಟ್ 14ನೇ ತಾರೀಕಿನ ತನಕ ನಿಮಗೆ ಅವಕಾಶ ಇದೆ. ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15 ಆನ್ ಲೈನ್ ಬುಕಿಂಗ್ ಆರಂಭ ಆಗುತ್ತದೆ. ಆಗಸ್ಟ್ 18ಕ್ಕೆ ಆನ್ ಲೈನ್ ಬುಕಿಂಗ್ ಮುಕ್ತಾಯ ಆಗುತ್ತದೆ. ಆಗಸ್ಟ್ 18ರಂದೇ "ಡೀಲ್ ಬೆಲೆ"ಯ ಕೊನೆ ದಿನ ಆಗಿರುತ್ತದೆ.

ಕೊಡುಗೆ ಬೆಲೆಯನ್ನು ಪಡೆಯುವುದಕ್ಕೆ ಹಾಗೂ ಬುಕಿಂಗ್ ನಿಯಮಾವಳಿ ಪೂರ್ಣಗೊಳಿಸಲು ಆಗಸ್ಟ್ 31, 2019 ಕೊನೆ ದಿನವಾಗಿರುತ್ತದೆ. ಯಾರು ಆನ್ ಲೈನ್ ಬುಕಿಂಗ್ ಮಾಡಿರುತ್ತಾರೋ ಅವರಿಗೆ ಇದು ಅನ್ವಯ ಆಗುತ್ತದೆ. ಆಗಸ್ಟ್ 31ರೊಳಗೆ ನಿಮ್ಮ ಬಳಿಯ ಕೂಪನ್ ಬಳಕೆ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ.

ನೀವು ಒಂದು ವೇಳೆ ಪೂರ್ತಿ ರೀಫಂಡ್ ನೊಂದಿಗೆ ರದ್ದು ಮಾಡಲು ಮನವಿ ಸಲ್ಲಿಸಬೇಕಿದ್ದಲ್ಲಿ ಅದನ್ನು ಸೆಪ್ಟೆಂಬರ್ 17, 2019ರೊಳಗೆ ಮಾಡಬೇಕು. ರದ್ದು ಮಾಡಲು ಮನವಿ ಸಲ್ಲಿಸಿದ 45 ದಿನಗಳ ಒಳಗಾಗಿ ಮರುಪಾವತಿ ಮಾಡಲಾಗುತ್ತದೆ.

ನಿಮ್ಮ ಕನಸಿನ ಮನೆ ಖರೀದಿಸಲು ಆಲೋಚಿಸುತ್ತಿದ್ದಲ್ಲಿ ಪ್ರಾವಿಡೆಂಟ್ ನವರ ಅದ್ಭುತ ಕೊಡುಗೆ ಇಲ್ಲಿದೆ:
ಆಗಸ್ಟ್ 2ರಿಂದ 14ರ ಮಧ್ಯೆ ಗ್ರಾಹಕರು "ಫ್ರೀಡಂ ಕೂಪನ್" ಗಳನ್ನು ಪ್ರಾವಿಡೆಂಟ್ ಹೌಸಿಂಗ್ ವೆಬ್ ಸೈಟ್ ನಿಂದ ರು. 730ಕ್ಕೆ (ಪೂರ್ಣವಾಗಿ ಮರುಪಾವತಿ ಇದೆ. ನಿಬಂಧನೆಗಳು ಅನ್ವಯ) ಪಡೆಯಬಹುದು. ಇದರಿಂದ ಕೊಡುಗೆ ಬೆಲೆ ಮೇಲೆ ಹೆಚ್ಚುವರಿಯಾಗಿ 73,000 ರುಪಾಯಿ ಉಳಿತಾಯಕ್ಕೆ ಅವಕಾಶ ದೊರೆಯುತ್ತದೆ.

'ಡೀಲ್ ಬೆಲೆ'ಗೆ ಹೊಂದಿಕೊಂಡಂತೆ ಗರಿಷ್ಠ ಉಳಿತಾಯ ರು. 12,50,000. ಮತ್ತು ಸ್ವಾತಂತ್ರ್ಯೋತ್ಸವದ ಆನ್ ಲೈನ್ ಗೃಹ ಹಬ್ಬದ ಗರಿಷ್ಠ ಉಳಿತಾಯ ರು. 13,20,000. ನಮ್ಮ ಮನೆಗಳ ಬೆಲೆಗಳು ರು. 21,40,000 ದಿಂದ ಆರಂಭ ಆಗುತ್ತದೆ.

ಯಾವುದೇ ಗ್ರಾಹಕರು ಈ ಕೊಡುಗೆ ಬೆಲೆಗಳನ್ನು ಪ್ರಾವಿಡೆಂಟ್ ಹೋಮ್ ನಿಂದ ಪಡೆಯಬಹುದು. ಅದಕ್ಕಾಗಿ ವೆಬ್ ಸೈಟ್ ಭೇಟಿ ನೀಡಿ. ಬುಕಿಂಗ್ ಮೊತ್ತ ರು. 1,00,000 ಪಾವತಿಸುವ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಹಾಗೂ ಪಾಂಡ್ಸ್, ಕಾಂಡೋಸ್ ಹಾಗೂ 1, 2, 3 BHK ಅಪಾರ್ಟ್ ಮೆಂಟ್ ಗಳು ಲಭ್ಯ ಇವೆ.

ಬುಕಿಂಗ್ ಮೊತ್ತ ಪೂರ್ತಿಯಾಗಿ ರೀಫಂಡಬಲ್ ಇದ್ದು, ನಿಯಮಾವಳಿ ಹಾಗೂ ಷರತ್ತುಗಳು ಅನ್ವಯಿಸುತ್ತವೆ. ಈ ವಸತಿ ಹಬ್ಬದ ಮುಂಚಿತವಾಗಿ, ನಡೆಯುವಾಗ ಗ್ರಾಹಕರು ಸ್ವತಃ ಅಪಾರ್ಟ್ ಮೆಂಟ್ ಗಳಿಗೆ ಭೇಟಿ ನೀಡಬಹುದು. ಲಭ್ಯತೆ ಆಧಾರದಲ್ಲಿ ಬುಕ್ ಮಾಡಿದ ಅಪಾರ್ಟ್ ಮೆಂಟ್ ಗಳ ಬದಲಾವಣೆಗೆ ಮನವಿ ಸಲ್ಲಿಸಲು ಅವಕಾಶ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+