ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸಲು ಪ್ರಸ್ತಾವನೆ
ನವದೆಹಲಿ,ಜುಲೈ,19: ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರದಿಂದ ರಾಜ್ಯವನ್ನು ಬಾಂಗ್ಲಾ ಎಂದು ಬಂಗಾಳಿ, ಇಂಗ್ಲಿಷ್ ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಮರುನಾಮಕರಣ ಮಾಡಲು ಪ್ರಸ್ತಾವನೆಯನ್ನು ಸ್ವೀಕರಿಸಿದೆ.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಲಿಖಿತ ಉತ್ತರದಲ್ಲಿ ದೇಶಾದ್ಯಂತ ನಗರಗಳ ಹೆಸರನ್ನು ಬದಲಾಯಿಸಲು ಕಳೆದ ಐದು ವರ್ಷಗಳಲ್ಲಿ ಸ್ವೀಕರಿಸಿದ ಪ್ರಸ್ತಾವನೆಗಳಿಗೆ ಎಂಎಚ್‌ಎ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದಿಂದ ರಾಜ್ಯವನ್ನು ಎಲ್ಲಾ ಮೂರು ಭಾಷೆಗಳಲ್ಲಿ ಅಂದರೆ ಬಂಗಾಳಿ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಅವರು ಸಂಸತ್ತಿನಲ್ಲಿ ತಿಳಿಸಿದರು.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸಂಸದ ಸೈದಾ ಅಹ್ಮದ್ ಅವರು ದೇಶಾದ್ಯಂತ ನಗರಗಳ ಹೆಸರನ್ನು ಬದಲಾಯಿಸಲು ಅನುಮೋದನೆ ಪಡೆಯಲು ಗೃಹ ಸಚಿವಾಲಯವು ಸ್ವೀಕರಿಸಿದ ವಿವರಗಳು ಮತ್ತು ಪ್ರಸ್ತಾವನೆಗಳ ಸಂಖ್ಯೆ ಮತ್ತು ಪಾರಂಪರಿಕ ಸ್ಥಳಗಳ ಹೆಸರನ್ನು ಬದಲಾಯಿಸುವುದು ಈ ಬಗ್ಗೆ ಸರ್ಕಾರವು ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆಯೇ ಎಂಬ ಪ್ರಶ್ನೆಯನ್ನು ಕೇಳಿದರು.

ಇದಕ್ಕೆ ಪಾರಂಪರಿಕ ಸ್ಥಳಗಳ ಹೆಸರು ಬದಲಾವಣೆಗೆ ಗೃಹ ಸಚಿವಾಲಯ ಯಾವುದೇ ಮಾರ್ಗಸೂಚಿಗಳನ್ನು ಹೊಂದಿಲ್ಲ ಎಂದು ರೈ ಉತ್ತರಿಸಿದರು. 2017 ರಲ್ಲಿ ಆಂಧ್ರಪ್ರದೇಶದ ನಗರ "ರಾಜಮಂಡ್ರಿ" ಹೆಸರನ್ನು "ರಾಜಮಹೇಂದ್ರವರಂ" ಎಂದು ಬದಲಾಯಿಸಲಾಯಿತ್ತು.
2018 ರಲ್ಲಿ ಜಾರ್ಖಂಡ್ ಪಟ್ಟಣದ ನಗರ ಉಂಟಾರಿ ಹೆಸರನ್ನು ಶ್ರೀ ಬನ್ಶಿಧರ್ ನಗರ ಎಂದು ಬದಲಾಯಿಸಲಾಯಿತು. ಅದೇ ವರ್ಷದಲ್ಲಿ ಮಧ್ಯಪ್ರದೇಶ ನಗರ ಪಂಚಾಯತ್ ಪಟ್ಟಣ, ಬಿರ್ಸಿಂಗಾಪುರ ಪಾಲಿ ಹೆಸರನ್ನು ಮಾ ಬಿರಾಸಿನಿ ಧಾಮ್ ಎಂದು ಬದಲಾಯಿಸಲಾಯಿತು. ಅದೇ ವರ್ಷ ಉತ್ತರ ಪ್ರದೇಶ ನಗರ ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸಲಾಯಿತು.

2021 ರಲ್ಲಿ ಮಧ್ಯಪ್ರದೇಶದ ನಗರ ಹೊಶಂಗಾಬಾದ್ ನಗರ ಹೆಸರನ್ನು ನರ್ಮದಾಪುರ ಎಂದು ಮತ್ತು ಬಾಬಾಯಿ ನಗರದ ಹೆಸರನ್ನು ಮಖಾನ್ ನಗರ ಎಂದು ಬದಲಾಯಿಸಲಾಯಿತು. 2022ರಲ್ಲಿ, ಪಂಜಾಬ್ ನಗರದ ಶ್ರೀ ಹರಗೋಬಿಂದ್‌ಪುರ ಹೆಸರನ್ನು ಶ್ರೀ ಹರಗೋಬಿಂದ್‌ಪುರ ಸಾಹಿಬ್ ಎಂದು ಬದಲಾಯಿಸಲಾಯಿತು.
ಮೇಲಿನ ವಿವರಗಳ ಜೊತೆಗೆ ನಸ್ರುಲ್ಲಗಂಜ್ ನಗರ ಹೆಸರನ್ನು ಭೇರುಂಡಾ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಮಧ್ಯಪ್ರದೇಶ ಸರ್ಕಾರದಿಂದ ಏಪ್ರಿಲ್ 25, 2022ರಂದು ಗೃಹ ಸಚಿವಾಲಯದಲ್ಲಿ ಸ್ವೀಕರಿಸಲಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಸದನದದಲ್ಲಿ ತಿಳಿಸಿದರು.












Click it and Unblock the Notifications