ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನ ಮಗ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್

By Mahesh
|
Google Oneindia Kannada News

ಬೆಂಗಳೂರು, ಜುಲೈ 20: ಭಾರತದ 14ನೇ ರಾಷ್ಟ್ರಪತಿಯಾಗಿ ಕಾನ್ಪುರ ಮೂಲಕದ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಗುರುವಾರ(ಜುಲೈ 20) ಆಯ್ಕೆಯಾಗಿದ್ದಾರೆ. ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಸೋಲಿಸಿ, ಗೆಲುವಿನ ನಗೆ ಬೀರಿರುವ ಕೋವಿಂದ್ ಅವರ ವ್ಯಕ್ತಿ ಚಿತ್ರ ಇಲ್ಲಿದೆ..

ಜೂನ್ 17ರಂದು ಎನ್ ಡಿಎ ಅಭ್ಯರ್ಥಿಯಾಗಿ ಬಿಹಾರದ ರಾಜ್ಯಪಾಲ ರಾಮನಾಥ್ ಕೋವಿಂದ್ ರನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಜೂನ್ 23ರಂದು ಕೋವಿಂದ್ ಅವರು ನಾಮಪತ್ರ ಸಲ್ಲಿಸಿದರು.

ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ 99.9 ರಷ್ಟು ಮತದಾನ ನಡೆಯಿತು. ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಜುಲೈ 20ರಂದು ನಡೆಯಿತು.

ರಾಮ್ ನಾಥ್ ಕೋವಿಂದ್ 7,02,044 ಮೌಲ್ಯದ 2,930 ಮತಗಳನ್ನು ಪಡೆದರೆ ಎದುರಾಳಿ ಅಭ್ಯರ್ಥಿ ಮೀರಾ ಕುಮಾರ್ 3,67,314 ಮೌಲ್ಯದ 1,844 ಮತಗಳನ್ನು ಮಾತ್ರ ಪಡೆದುಕೊಂಡು ಸೋಲು ಕಂಡಿದ್ದಾರೆ. 77 ಮತಗಳು ಅಸಿಂಧುವಾಗಿವೆ.

Profile: Ram Nath Kovind 14th President of India

ಜುಲೈ 24 ರಂದು ಪ್ರಣಬ್ ಮುಖರ್ಜಿ ಅಧಿಕಾರವಧಿ ಕೊನೆಗೊಳ್ಳಲಿದ್ದು, 23ರಂದು ಪ್ರಣಬ್ ಮುಖರ್ಜಿಯವರಿಗೆ ವಿದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಅಧಿಕಾರ ಸ್ವೀಕರಿಸಲಿದ್ದಾರೆ. ಕೋವಿಂದ್ ರಾಷ್ಟ್ರಪತಿ ಹುದ್ದೆಗೇರಿದ ಕೇವಲ ಎರಡನೇ ದಲಿತ ಸಮುದಾಯದ ವ್ಯಕ್ತಿಯಾಗಲಿದ್ದಾರೆ.

ಕಾನ್ಪುರ ಮೂಲದ ರೈತ ಕುಟುಂಬದಿಂದ ಬಂದಿರುವ ಕೋವಿಂದ್ ಅವರು ವಕೀಲ, ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕೋವಿಂದ್ ಅವರ ಬಗ್ಗೆ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

ಕುಟುಂಬ ವಿವರ

ಕುಟುಂಬ ವಿವರ

* ರಾಮನಾಥ್ ಕೋವಿಂದ್ ಅವರು ಅಕ್ಟೋಬರ್ 1, 1945ರಂದು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ದೇರಾಪುರ್ ದ ಪರೌಂಖ್ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನನ.
* ಪತ್ನಿ ಸವಿತಾ ಕೋವಿಂದ್, ಮಗ ಪ್ರಶಾಂತ್ ಕುಮಾರ್, ಮಗಳು ಸ್ವಾತಿ.

ಪ್ರಮುಖ ಹುದ್ದೆಗಳು

ಪ್ರಮುಖ ಹುದ್ದೆಗಳು

* 1994-2000 ಹಾಗೂ 2000-2006 ಎರಡು ಅವಧಿಗೆ ಉತ್ತರಪ್ರದೇಶದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು.
* ವೃತ್ತಿಯಿಂದ ವಕೀಲರಾದ ರಾಮನಾಥ್ ಅವರು ದೆಹಲಿಯಲ್ಲಿ ವಕೀಲಿಕೆ ಆರಂಭಿಸಿದ್ದರು. * ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ(1998-2002) ಹಾಗೂ ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿದ್ದಾರೆ.
* ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದಾರೆ.
* ಆಗಸ್ಟ್ 8, 2015ರಂದು ಬಿಹಾರದ ರಾಜ್ಯಪಾಲರಾಗಿ ಕೋವಿಂದ್ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇಮಿಸಿದರು.

ವೃತ್ತಿ ಬದುಕು

ವೃತ್ತಿ ಬದುಕು

ಕಾನ್ಪುರ್ ಕಾಲೇಜಿನಿಂದ ಕಾನೂನಿನಲ್ಲಿ ಪದವಿ ಪಡೆದ ನಂತರ, ಕೋವಿಂದ್ ಸಿವಿಲ್ ಸರ್ವೀಸಸ್ ಪರೀಕ್ಷೆಗಾಗಿ ತಯಾರಿ ಮಾಡಲು ದೆಹಲಿಗೆ ಹೋದರು. ಅವರು ಈ ಪರೀಕ್ಷೆಯನ್ನು ಅವರ ಮೂರನೆಯ ಪ್ರಯತ್ನದಲ್ಲೇ ಮುಗಿಸಿದರು. ಆದರೆ, ಅವರು ಐಎಎಸ್ ಬದಲಿಗೆ ಮೈತ್ರಿ ಸೇವೆಗಾಗಿ ಆಯ್ಕೆಯಾದ ಕಾರಣ ಅವರು ಸೇರ್ಪಡೆಗೊಂಡಿರಲಿಲ್ಲ ಆದ್ದರಿಂದ ಕಾನೂನನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ಸಂಸದೀಯ ಸ್ಥಾನಗಳ ಜವಾಬ್ದಾರಿ

ಚಿತ್ರದಲ್ಲಿ : ರಾಮನಾಥ್ ಕೋವಿಂದ್, ಪತ್ನಿ ಸವಿತಾ, ಪುತ್ರ ಪ್ರಶಾಂತ್, ಪುತ್ರಿ ಸ್ವಾತಿ.

* 1977ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ವಿವಿಧ ಸಂಸದೀಯ ಸಮಿತಿ ಸದಸ್ಯರಾಗಿ ಅನುಭವ ಹೊಂದಿದ್ದಾರೆ.
* ಗೃಹ ವ್ಯವಹಾರದ ಸಂಸದೀಯ ಸಮಿತಿ
* ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಮಿತಿ
* ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಮಿತಿ
* ಪರಿಶಿಷ್ಟ ಜಾತಿ/ ಪಂಗಡ ಸಮಿತಿ
* ಕಾನೂನು ಹಾಗೂ ನ್ಯಾಯ ಸಮಿತಿ
* ರಾಜ್ಯಸಭಾ ಸಮಿತಿ ಅಧ್ಯಕ್ಷರಾಗಿದ್ದರು.

English summary
Ram Nath Kovind has been elected as 14th President of India. Here is his brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X