Priyanka Gandhi: ಚೊಚ್ಚಲ ಚುನಾವಣೆ ಕಣ ವಯನಾಡಿನಿಂದ ಇಂದು ಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಕೆ
ನವದೆಹಲಿ, ಅಕ್ಟೋಬರ್ 23: ಕೇರಳದ ವಯನಾಡು ಲೋಕಸಭಾ ಉಪಚುನಾವಣೆ 2024 ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಬುಧವಾರ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ರೋಡ್ ಶೋ ಮೂಲಕ ಅವರು ಚುನಾವಣಾ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ಪ್ರಯುಕ್ತ ಗುಂಡ್ಲುಪೇಟೆ ಮೂಲಕ ವಯನಾಡಿಗೆ ಗಾಂಧಿ ಕುಟುಂಬ ತೆರಳಲಿದೆ.
ಪ್ರಿಯಾಂಕಾ ಗಾಂಧಿಯವರು ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದರು ಸಹ ಅವರದ್ದು ಇದೇ ಮೊದಲ ಚುಣಾವಣೆಯಾಗಿದೆ. ಅವರು ಈ ಹಿಂದೆ ಸಂಸದ ರಾಹುಲ್ ಗಾಂಧಿ ಹಾಗೂ ತಾಯಿ ಪ್ರಧಾನಿ ಸೋನಿಯಾ ಗಾಂಧಿ ಪರ ಅಮೇಥಿಯಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು. ಒಂದಷ್ಟು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಆದರೆ ಅವರು ಚುನಾವಣೆ ನಿಂತಿರಲಿಲ್ಲಿ.

ಇದೀಗ ಎರಡು ಕಡೆಗೆ ಗೆದ್ದು ಬೀಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ವಯನಾಡು ಟಿಕೆಟ್ ನೀಡಲಾಗಿದೆ. ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಮೊದಲ ಚುನಾವಣೆ ಎದುರಿಸಲು ಭರ್ಜರಿ ತಯಾರಿ ನಡೆಸಿದ್ದಾರೆ.
ಬೃಹತ್ ರೋಡ್ ಶೋ ಮೂಲಕ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಸಾವಿರಾರು ಕಾರ್ಯಕರ್ತರು ಜಮೆಯಾಗಿ, ಕಾಂಗ್ರೆಸ್ ಭಾವುಟ ಪ್ರದರ್ಶಿಸಲಿಸದ್ದಾರೆ.
ವಯನಾಡಿಗೆ ಗಾಂಧಿ ಕುಟುಂಬ
ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರದಂದು ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ಹಿನ್ನೆಲೆ ಗಾಂಧಿ ಕುಟುಂಬ ಗುಂಡ್ಲುಪೇಟೆ ಮೂಲಕ ತೆರಳಿದ್ದಾರೆ. ಬುಧವಾರ ಮೈಸೂರಿಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಯನಾಡಿಗೆ ಮಂಗಳವಾರ ಸಂಜೆ ತಲುಪಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ವರಿಷ್ಠರು ತೆರಳುತ್ತಿರುವ ಮಾಹಿತಿ ಅರಿತ ಕಾಂಗ್ರೆಸ್ ಕಾರ್ಯಕರ್ತರು ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ಎರಡು ಬದಿ ಜಮಾಯಿಸಿದ್ದರು. ಜನರನ್ನು ಕಂಡ ಸೋನಿಯಾ ಗಾಂಧಿ ಕಾರೊಳಗಿನಿಂದ ಕೈ ಬೀಸುತ್ತಾ ತೆರಳಿದ್ದು ಕಂಡು ಬಂತು.












Click it and Unblock the Notifications