Priya Munjal: ಅಡುಗೆ ಮನೆಯಿಂದ ಮಿಸೆಸ್ ಯೂನಿವರ್ಸ್ ವರೆಗೆ! ರನ್ನರ್‌ಅಪ್ ಪ್ರಿಯಾ ಮುಂಜಾಲ್ ಸ್ಪೂರ್ತಿಯ ಕಥೆ

ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ತಮ್ಮದೇ ಆದ ಕನಸುಗಳನ್ನು ನನಸಾಗಿಸಿಕೊಳ್ಳುವುದು ಅನೇಕ ಮಹಿಳೆಯರ ಆಶಯ. ಆದರೆ ಕುಟುಂಬ, ಮಕ್ಕಳು ಮತ್ತು ದೈನಂದಿನ ಕೆಲಸಗಳ ನಡುವೆ ವೈಯಕ್ತಿಕ ಆಸೆಗಳಿಗೆ ಸಮಯ ಮೀಸಲಿಡುವುದು ಬಹಳ ಕಷ್ಟ. ಇಂತಹದರ ನಡುವೆಯೇ ಪ್ರಿಯಾ ಮುಂಜಾಲ್ ಅವರ ಸಾಧನೆಯ ಪಯಣ ಅನೇಕ ಮಹಿಳೆಯರಿಗೆ ಪ್ರೇರಣೆ.

ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಪ್ರಿಯಾ, ಸೌಂದರ್ಯ ಸ್ಪರ್ಧೆಗಳ ಮೂಲಕ ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ವೇದಿಕೆಯವರೆಗೆ ತಮ್ಮ ಗುರುತನ್ನು ಮೂಡಿಸಿದ್ದಾರೆ. 2025ರಲ್ಲಿ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್ ಸ್ಥಾನ ಪಡೆದ ಅವರು, 2026ರಲ್ಲಿ ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿಯೂ ಮೊದಲ ರನ್ನರ್‌ಅಪ್ ಗೌರವ ಗಳಿಸಿದ್ದಾರೆ.

Priya Munjal Success Story From Homemaker to Mrs Universe 2026 First Runner-Up Priya s Inspiring Journey

ಮಿಸೆಸ್ ಇಂಡಿಯಾದಿಂದ ಮಿಸೆಸ್ ಯೂನಿವರ್ಸ್‌ವರೆಗೆ

ಪ್ರಿಯಾ ಮುಂಜಾಲ್ ಅವರ ಸಾಧನೆಯ ಪಯಣಕ್ಕೆ ಮಹತ್ವದ ತಿರುವು ದೊರೆತದ್ದು 2025ರಲ್ಲಿ. ಆ ವರ್ಷ ನಡೆದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್‌ಅಪ್ ಸ್ಥಾನ ಪಡೆದರು. ಈ ಸಾಧನೆ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿತು. ನಂತರ 2026ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿವಿಧ ದೇಶಗಳ ಸ್ಪರ್ಧಿಗಳೊಂದಿಗೆ ಭಾಗವಹಿಸಿದ ಪ್ರಿಯಾ, ಮೊದಲ ರನ್ನರ್‌ಅಪ್ ಸ್ಥಾನ ಗಳಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು.

104 ಕಿಲೋದಿಂದ 60 ಕಿಲೋಗೆ!

ಪ್ರಿಯಾ ಇಬ್ಬರು ಮಕ್ಕಳ ತಾಯಿ. ತಾಯ್ತನದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ತಮ್ಮ ವೈಯಕ್ತಿಕ ಗುರಿಗಳತ್ತ ಸಾಗಿದ್ದಾರೆ. ಜೊತೆಗೆ, ಈ ಸ್ಪರ್ಧೆಗಳಿಗೆ ಇಳಿಯುವ ಮೊದಲು ಅವರ ದೇಹತೂಕ 104 ಕಿಲೋ ಇತ್ತು. ಸೌಂದರ್ಯ ಸ್ಪರ್ಧೆಗಳ ಮಾನದಂಡಗಳ ಪ್ರಕಾರ ಅವರು ಅವುಗಳಲ್ಲಿ ಭಾಗವಹಿಸಲು ಸಾಧ್ಯವಿರಲಿಲ್ಲ. ಸೊಂಟ ಹಾಗೂ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ದಪ್ಪ ಇತ್ತು. ಇದು ತೊಡಕಾಗಿತ್ತು.

ಪ್ರಿಯಾ ಫಿಟ್‌ನೆಸ್‌ (fitness) ಎಕ್ಸ್‌ಪರ್ಟ್‌ ನೆರವು ಪಡೆದು ಕಠಿಣ ದೇಹದಂಡನೆಗೆ ಮುಂದಾದರು. ಕಾರ್ಬೋ ಡಯಟ್‌ನಿಂದ ಪ್ರೊಟೀನ್‌ ಡಯಟ್‌ಗೆ ಇಳಿದರು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡಿದರು. ನಂತರ ದ್ರವಾಹಾರ. ಮಧ್ಯಾಹ್ನದ ಊಟದಲ್ಲಿ ಮಾತ್ರ ಕಾರ್ಬೋ ತೆಗೆದುಕೊಂಡರು. ಸಂಜೆಯಾಗಲೀ, ರಾತ್ರಿಯಾಗಲೀ ಕಾರ್ಬೋ ಸೇವಿಸಲಿಲ್ಲ. ಪ್ರೊಟೀನ್‌, ವಿಟಮಿನ್‌, ನ್ಯೂಟ್ರಿಯೆಂಟ್‌ಗಳನ್ನು ಹೆಚ್ಚಾಗಿ ಸೇವಿಸಿದರು. ಹೀಗೆ ಎರಡು ವರ್ಷ ಮಾಡಿದರು. ಅವರ ದೇಹದ ತೂಕ 60 ಕಿಲೋಗೆ ಇಳಿಯಿತು. ಇದರಲ್ಲಿ ಅವರ ಫಿಟ್‌ನೆಸ್‌ ಎಕ್ಸ್‌ಪರ್ಟ್‌ ಪಾತ್ರ ಶೇ. 25 ಆದರೆ, ಇಡೀ ದೇಹದಂಡನೆ, ವ್ಯಾಯಾಮ, ಡಯಟ್‌, ವಾಕಿಂಗ್‌, ರನ್ನಿಂಗ್‌ ಮೂಲಕ ತೂಕ ಇಳಿಸಿದ ಪ್ರಿಯಾ ಪಾತ್ರ ಶೇ.75. ಆ ಮೂಲಕ ಅವರು ಸ್ಪರ್ಧೆಗೆ ಅರ್ಹತೆ ಗಳಿಸಿಕೊಂಡರು.

ಮಕ್ಕಳನ್ನು ಬೆಳೆಸುವುದು, ಮನೆಯ ಕೆಲಸಗಳನ್ನು ನೋಡಿಕೊಳ್ಳುವುದು ಮತ್ತು ಕುಟುಂಬದ ಅಗತ್ಯಗಳಿಗೆ ಸ್ಪಂದಿಸುವುದು ಅನೇಕ ಮಹಿಳೆಯರ ದಿನಚರಿಯ ಭಾಗ. ಆದರೆ ಈ ಜವಾಬ್ದಾರಿಗಳೇ ಅವರ ಕನಸುಗಳಿಗೆ ಅಂತಿಮ ಗಡಿ ಆಗಬೇಕಿಲ್ಲ. ಜೀವನದ ವಿವಿಧ ಹಂತಗಳಲ್ಲಿ ಹೊಸ ಗುರಿಗಳನ್ನು ರೂಪಿಸಿಕೊಳ್ಳಲು ಮತ್ತು ಅವುಗಳತ್ತ ಪ್ರಯತ್ನಿಸಲು ಅವಕಾಶವಿದೆ ಎಂಬುದು ಪ್ರಿಯಾ ಅಭಿಮತ.

ಕಿರೀಟಕ್ಕಿಂತ ದೊಡ್ಡದು ಆತ್ಮವಿಶ್ವಾಸ: Priya Munjal

ಸೌಂದರ್ಯ (beauty) ಸ್ಪರ್ಧೆಗಳಲ್ಲಿ ದೊರೆಯುವ ಪ್ರಶಸ್ತಿಗಳು ಸಾಧನೆಯ ಒಂದು ಭಾಗ ಮಾತ್ರ. ಇಂತಹ ವೇದಿಕೆಗಳು ಸ್ಪರ್ಧಿಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು, ಸಾರ್ವಜನಿಕವಾಗಿ ಮಾತನಾಡಲು ಮತ್ತು ಹೊಸ ಅನುಭವಗಳನ್ನು ಪಡೆಯಲು ಅವಕಾಶ ನೀಡುತ್ತವೆ. ಪ್ರಿಯಾ ಅವರ ಸಾಧನೆಯೂ ಕೇವಲ ಒಂದು ಕಿರೀಟ ಅಥವಾ ಸ್ಥಾನಕ್ಕೆ ಸೀಮಿತವಾಗಿಲ್ಲ; ಅದು ತಮ್ಮ ಸಾಮರ್ಥ್ಯವನ್ನು ಗುರುತಿಸಿ, ಹೊಸ ಗುರಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಇತರ ಸ್ಪರ್ಧಿಗಳಿಗೆ ತಮ್ಮ ಯಶಸ್ಸಿನ ಪಯಣದ ರಹಸ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+