ದೇಶಿ ನಿರ್ಮಿತ ಕ್ಷಿಪಣಿ ಪೃಥ್ವಿ 2ಯಶಸ್ವಿ ಪರೀಕ್ಷೆ

ಬಾಲಸೋರ್(ಒಡಿಶಾ), ನ.14: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಹಾರಬಲ್ಲ ಪರಮಾಣು ಸಾಮರ್ಥ್ಯವುಳ್ಳ ಪೃಥ್ವಿ2 ಕ್ಷಿಪಣಿಯನ್ನು ಶುಕ್ರವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತದ ಬತ್ತಳಿಕೆಗೆ ಇನ್ನೊಂದು ಪ್ರಮುಖ ಅಸ್ತ್ರ ಸಿದ್ಧವಾಗಿದೆ.

350 ಕಿ.ಮೀ. ವ್ಯಾಪ್ತಿಯಲ್ಲಿ ಅಪ್ಪಳಿಸಬಲ್ಲ ಸಂಪೂರ್ಣ ಸ್ವದೇಶದಲ್ಲೇ ಅಭಿವೃದ್ಧಿ ಪಡಿಸಲಾಗಿರುವ ಪರಮಾಣು ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯನ್ನು ಒಡಿಶಾದ ಚಂಡಿಪುರ ಉಡ್ಡಯನ ಕೇಂದ್ರದಿಂದ ಶುಕ್ರವಾರ ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸಲಾಯಿತು.

India successfully test-fires Prithvi-II missile

ಸುಮಾರು 500ರಿಂದ ಒಂದು ಸಾವಿರ ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಇಂದು ಬೆಳಗ್ಗೆ 10.40ರ ವೇಳೆಗೆ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಇಲಾಖೆ ತಿಳಿಸಿವೆ.

ಪೃಥ್ವಿ-2ರ ಉಡಾವಣೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇದು ದೇಶದ ರಕ್ಷಣಾ ಇಲಾಖೆಗೆ ಹೆಚ್ಚಿನ ರೀತಿಯಲ್ಲಿ ಸಹಾಯಕವಾಗಲಿದೆ ಎಂದು ಐಟಿಆರ್ ಮುಖ್ಯಸ್ಥ ಎಂ.ವಿ.ಕೆ.ವಿ.ಪ್ರಸಾದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+