ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ಮುದ್ರಣ ಸಂಸ್ಥೆಗಳಿಗೆ 577 ಕೋಟಿ ರು. ನಷ್ಟ!

ಅಪನಗದೀಕರಣದಿಂದಾಗಿ 577 ಕೋಟಿ ರು. ನಷ್ಟ ಎಂದ ನೋಟು ಮುದ್ರಣ ಸಂಸ್ಥೆಗಳು. ಈ ನಷ್ಟ ತುಂಬಿಕೊಡುವಂತೆ ಆರ್ ಬಿಐಗೆ ಆಗ್ರಹ.

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಕಳೆದ ವರ್ಷಾಂತ್ಯಕ್ಕೆ ಜಾರಿಗೊಂಡಿದ್ದ ಅಪನಗದೀಕರಣದ ಹಿನ್ನೆಲೆಯಲ್ಲಿ ಹೊಸ ನೋಟುಗಳನ್ನು ಮುದ್ರಣ ಮಾಡಿರುವ ಸರ್ಕಾರಿ ಮುದ್ರಣ ಸಂಸ್ಥೆಗಳು ಇದೀಗ ತಮಗೆ 577 ಕೋಟಿ ರು. ನಷ್ಟವನ್ನು ಅನುಭವಿಸಿರುವುದಾಗಿ ಹೇಳಿವೆ. ಅಲ್ಲದೆ, ಈ ನಷ್ಟವನ್ನು ತುಂಬಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅನ್ನು ಆಗ್ರಹಿಸಿವೆ.

ಅಪನಗದೀಕರಣದ ಲಾಭನಷ್ಟಗಳೇನು, ಯಾರಾದ್ರೂ ವಿವರಿಸಿಅಪನಗದೀಕರಣದ ಲಾಭನಷ್ಟಗಳೇನು, ಯಾರಾದ್ರೂ ವಿವರಿಸಿ

ಮುದ್ರಣ ಕಾರ್ಯವು ಹೆಚ್ಚು ದುಬಾರಿ ಎನಿಸಿದ್ದು ಹಾಗೂ ವೇಸ್ಟೇಜ್ ನಿಂದಾಗಿ ಇಷ್ಟು ಮೊತ್ತದ ನಷ್ಟ ಉಂಟಾಗಿದೆ ಎಂದು ಮೈಸೂರು, ನಾಸಿಕ್ ಗಳಲ್ಲಿರುವ ನೋಟು ಮುದ್ರಣ ಸಂಸ್ಥೆಗಳು ಹೇಳಿಕೊಂಡಿವೆ.

Printing presses urges RBI to Pay Rs 577 cr for note-ban loss

ಅಲ್ಲದೆ, ನೋಟುಗಳ ಮುದ್ರಣಕ್ಕಾಗಿ ತರಿಸಿಕೊಂಡಿದ್ದ ಇಂಕ್, ಅವುಗಳ ಸಾಗಾಣಿಕೆಯಲ್ಲೂ ಅಂದಾಜು ವೆಚ್ಛಕ್ಕಿಂತ ಹೆಚ್ಚೇ ಖರ್ಚಾಗಿರುವುದರಿಂದಾಗಿ ಈ ಎಲ್ಲವೂ ನಷ್ಟಕ್ಕೆ ದಾರಿಯಾಗಿವೆ ಎಂದು ಮುದ್ರಣ ಸಂಸ್ಥೆಗಳು ಹೇಳಿವೆ.

ಈಗಾಗಲೇ ಅಪನಗದೀಕರದ ಕೆಟ್ಟ ಅಥವಾ ಅಡ್ಡ ಪರಿಣಾಮಗಳ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯುತ್ತಿರುವಾಗಲೇ ಮುದ್ರಣ ಸಂಸ್ಥೆಗಳು ಈ ರೀತಿಯ ಕೂಗೆಬ್ಬಿಸಿರುವುದು ಅಪನಗದೀಕರಣದ ಮತ್ತೊಂದು ಮಗ್ಗುಲನ್ನು ಪರಿಚಯ ಮಾಡಿಕೊಟ್ಟಂತಾಗಿದೆ.

English summary
The government’s currency paper printing presses have asked the Reserve Bank of India (RBI) for compensation or reimbursement to the tune of Rs 577 crore for what they estimate was the loss and wastage they had to incur due to the November 8, 2016 announcement of demonetisation of Rs 1,000 and Rs 500 currency notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X