ಸ್ಮಾರ್ಟ್ ಫೋನ್, ಕಂಪ್ಯೂಟರ್ & ಗ್ಯಾಜೆಟ್‌ಗಳ ಬೆಲೆ ಭರ್ಜರಿ ಇಳಿಕೆ!
ಸ್ಮಾರ್ಟ್‌ಫೋನ್, ಕಂಪ್ಯೂಟರ್ ಹಾಗೂ ಗ್ಯಾಜೆಟ್ ಖರೀದಿ ಮಾಡಬೇಕು ಎನ್ನುವವರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಹೌದು ದೇಶದಲ್ಲಿ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ಹೊಸ ಆರ್ಥಿಕ ನೀತಿ. ಇಲ್ಲಿಯ ವರೆಗೆ ಅಮೆರಿಕದ ರಿಟರ್ನ್ ಟ್ಯಾಕ್ಸ್‌ನಿಂದ ಭಾರೀ ಸಂಕಷ್ಟ ಎದುರಾಗಿತ್ತು. ಇದೀಗ ಇದೇ ಮೊದಲ ಬಾರಿ ಅಮೆರಿಕದ ನೀತಿಯಿಂದ ಲಾಭವಾಗಿದೆ. ಭಾರತೀಯರಿಗೆ ಇದರಿಂದ ಬಂಪರ್ ಸಿಕ್ಕಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಅಮೆರಿಕದ ರಿರ್ಟನ್ ಟ್ಯಾಕ್ಸ್‌ನಿಂದ ಇದೇ ಮೊದಲ ಬಾರಿ ಎನ್ನುವಂತೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಭರ್ಜರಿ ಲಾಭವಾಗಿದೆ. ಅಮೆರಿಕ ಚೀನಾಗೆ ಭರ್ಜರಿ ಶಾಕ್ ಕೊಟ್ಟಿದೆ. ಆದರೆ, ವಿವಿಧ ದೇಶಗಳಿಗೆ ರಿಯಾಯಿತಿ ನೀಡಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಟರ್ನ್ ಟ್ಯಾಕ್ಸ್‌ನಿಂದ ತುಸು ವಿನಾಯಿತಿ ನೀಡಿದ್ದಾರೆ. ಇದರೊಂದಿಗೆ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಹಾಗೂ ಕೆಲವು ನಿರ್ದಿಷ್ಟ ಗ್ಯಾಜೆಟ್‌ಗಳ ಮೇಲೆ ಅಥವಾ ಉತ್ಪನ್ನಗಳಿಗೆ ಸುಂಕ ವಿನಾಯಿತಿ ಕೊಟ್ಟಿದ್ದು ಇದರಿಂದ ಭಾರತೀಯರಿಗೆ ಭರ್ಜರಿ ಲಾಭವಾಗಿದೆ.

ಸಂತಸ ತಂದ ಟ್ರಂಪ್ ನೀತಿ: ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಆರ್ಥಿಕ ನೀತಿಯಿಂದಾಗಿ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಹಾಗೂ ಕೆಲವು ನಿರ್ದಿಷ್ಟ ಗ್ಯಾಜೆಟ್‌ಗಳ ಬೆಲೆ ಇಳಿಕೆಯಾಗುತ್ತಿದೆ. ಅಲ್ಲದೇ ಆ್ಯಪಲ್ ಮತ್ತು ಡೆಲ್‌ನಂತಹ ಕಂಪನಿಗಳಿಗೆ ಲಾಭವಾಗಿದ್ದು. ಇದರಿಂದ ಜನರಿಗೂ ಲಾಭವಾಗುವ ನಿರೀಕ್ಷೆ ಜೋರಾಗಿದೆ.
ಟ್ಯಾಕ್ಸ್ ವಾರ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2.0 ಆಡಳಿತವು ಹಲವು ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡಿದೆ. ಮಿತಿಮೀರಿದ ಟ್ಯಾಕ್ಸ್‌ಗಳನ್ನು ವಿಧಿಸಿದರ ಪರಿಣಾಮವಾಗಿ ಹಲವು ವಸ್ತುಗಳ ಬೆಲೆಯು ಏರಿಕೆಯಾಗಿತ್ತು. ಇದೀಗ ಡೊನಾಲ್ಡ್ ಟ್ರಂಪ್ ಅವರು ವಿಧಿಸಿದ್ದ ಹೊಸ ಟ್ಯಾಕ್ಸ್‌ಗಳನ್ನು 90 ದಿನ ತಡೆಹಿಡಿದಿದ್ದಾರೆ. ಇದರಿಂದ ವಿಶ್ವದಲ್ಲಿ ಹಣದುಬ್ಬರ ತುಸು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಚೀನಾ ಮತ್ತು ಅಮೆರಿಕದ ನಡುವೆ ಟ್ಯಾಕ್ಸ್‌ವಾರ್ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಆದರೆ ಇದೀಗ ಟ್ರಂಪ್ ತೆರಿಗೆ ಘೋಷಣೆಯಿಂದಾಗಿ ಐಫೋನ್‌ಗಳನ್ನು ಖರೀದಿಸುವವರಿಗೆ ಬಂಪರ್ ಸಿಕ್ಕಿದೆ ಅಂತಲೇ ಹೇಳಲಾಗುತ್ತಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರ್ ಸೇರಿದಂತೆ ವಿವಿಧ ಗ್ಯಾಜೆಟ್‌ಗಳಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.
ಭಾರತೀಯರಿಗೆ ಬಂಪರ್: ಅಮೆರಿಕದ ಈ ನಿರ್ಧಾರದಿಂದ ಭಾರತೀಯರಿಗೆ ಬಂಪರ್ ಸಿಕ್ಕಿದೆ ಅಂತಲೇ ಹೇಳಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಐಫೋನ್ ಸೇರಿದಂತೆ ವಿವಿಧ ದುಬಾರಿ ವಸ್ತುಗಳ ಬೆಲೆ ಭಾರತದಲ್ಲಿ ಕಡಿಮೆಯಾಗುತ್ತಿದೆ. ಅದರೊಂದಿಗೆ ಗೆಜೆಟ್‌ಗಳ ಬೆಲೆಯೂ ಇಳಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ನೀತಿಯು ಸಂಕಷ್ಟದ ನಡುವೆ ಸಂತೋಷವನ್ನು ತಂದಿದೆ.
ಅಮೆರಿಕ ಅಧ್ಯಕ್ಷರು ಈಗ ರಿಲ್ಯಾಕ್ಸ್ ಕೊಟ್ಟಿದ್ದರು ಯಾವ ಕ್ಷಣದಲ್ಲಿ ಏನು ಬದಲಾವಣೆ ಆಗಬಹುದು ಎನ್ನುವ ಆತಂಕವು ಇದ್ದೇ ಇದೆ. ಯಾಕೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದು ತಿಂಗಳ ಅವಧಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ.












Click it and Unblock the Notifications