ಕಾರಿಯಪ್ಪ ಜನ್ಮದಿನಕ್ಕೆ ಕನ್ನಡ, ಕೊಡವ ಭಾಷೆಯಲ್ಲಿ ರಾಷ್ಟ್ರಪತಿ ಟ್ವೀಟ್
ನವದೆಹಲಿ, ಜನವರಿ 28: ದೇಶದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶೇಷವಾಗಿ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರನ್ನು ನೆನಪಿಸಿಕೊಂಡು ರಾಷ್ಟ್ರಪತಿ ಅವರ ಟ್ವಿಟ್ಟರ್ ಖಾತೆಯಿಂದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವಲ್ಲದೆ ಕನ್ನಡ ಹಾಗೂ ಕೊಡವ ಭಾಷೆಯಲ್ಲಿಯೂ ಟ್ವೀಟ್ ಮಾಡಲಾಗಿದೆ.

ಫೀಲ್ಡ್ ಮಾರ್ಷಲ್ ಬೇಟನ್ ಅನ್ನು ಕಾರಿಯಪ್ಪ ಅವರಿಗೆ ನೀಡುವ ಹಳೆಯ ಫೋಟೊವನ್ನು ಕೂಡ ಟ್ವೀಟ್ ಮಾಡಲಾಗಿದೆ. ಬೇಟನ್‌ಅನ್ನು ಕೊಂಡೊಯ್ದ ಮತ್ತು ಅದರೊಂದಿಗೆ ವಂದನೆ ಸಲ್ಲಿಸಿದ ಏಕೈಕ ಫೀಲ್ಡ್ ಮಾರ್ಷಲ್/ಫೈವ್ ಸ್ಟಾರ್ ಜನರಲ್ ಎಂದೂ ಕೋವಿಂದ್ ಅವರು ಸ್ಮರಿಸಿಕೊಂಡಿದ್ದಾರೆ.
Being handed the Field Marshal’s baton (bottom photo). Only a Field Marshal/five star general carries a baton and salutes with his baton. pic.twitter.com/CJFdXdEpiN
— President of India (@rashtrapatibhvn) 28 January 2019
ರಾಷ್ಟ್ರಪತಿ ಅವರು ಕೊಡವ ಭಾಷೆಯಲ್ಲಿ ಮಾಡಿರುವ ಟ್ವೀಟ್‌ಗೆ ಕೊಡವ ಸಮುದಾಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಕೊಡವ ಜನರಿಗೆ ಸಂತಸ ಉಂಟಾಗಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
1899ರ ಜನವರಿ 28ರಂದು ಕೊಡಗಿನಲ್ಲಿ ಜನಿಸಿದ ಕಾರಿಯಪ್ಪ, ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದ ಮೊದಲಿಗರು.
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಆಯಿಂಗಡ ಪುಟ್ಟ ನ ದಿನತ್ ರ ಒರ್ ಸ್ಮರಣೆ. ಕೊಡ ಗ್ ರ , ಕರ್ನಾಟಕ ತ್ ರ, ಆಂಡ ಮೀದ ಭಾರತ ದೇಶ ತ್ ರ ಕೊದಿಮೋಂವ ನಾನ ಇಯಂಗ ನಂಗಡ ಕೇಳಿ ಪೋನ ಮಹದಂಡ ನಾಯಕ ಅಲ್ಲತೆ ಪ್ರೀತಿರ ರಾಷ್ಟ್ರನಾಯಕ. ಇಯಂಗಡ ದೇಶ ಸೇವೆನ ನಂಗ ಎಕ್ಕಲೂ ಗೇ ನ ಬೆಚ್ಚೋ ವ. - ರಾಷ್ಟ್ರಪತಿ ಕೋವಿಂದ್
— President of India (@rashtrapatibhvn) 28 January 2019
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ - ರಾಷ್ಟ್ರಪತಿ ಕೋವಿಂದ್ ಎಂದು ರಾಷ್ಟ್ರಪತಿ ಅವರ ಖಾತೆಯಿಂದ ನಾಲ್ಕು ಭಾಷೆಗಳಲ್ಲಿ ಟ್ವೀಟ್ ಮಾಡಲಾಗಿದೆ.












Click it and Unblock the Notifications