ಬ್ಯಾಂಕ್ ಖಾತೆ, ಆಧಾರ್ ಇಲ್ಲ ಎಂದು ಹೆರಿಗೆಗೆ ನಕಾರ ಎಂದ ಆಸ್ಪತ್ರೆ

ಜೌನ್ಪುರ, ಜನವರಿ 30: ಬ್ಯಾಂಕ್ ಖಾತೆ ಹೊಂದಿಲ್ಲ ಮತ್ತು ಆಧಾರ್ ಕಾರ್ಡ್ ಹೊಂದಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿ, ಆಕೆ ಆಸ್ಪತ್ರೆಯ ಗೇಟ್ ಬಳಿಯಲ್ಲೇ ಹೆರಿಗೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಜೌನ್ಪುರ ಎಂಬಲ್ಲಿ ನಡೆದಿದೆ.

ಘಟನೆ ಜನವರಿ 29 ರಂದು ನಡೆದಿದೆ. ಆಸ್ಪತ್ರೆಗೆ ಹೋಗುತ್ತಿದ್ದಂತೆಯೇ ನನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಕೆಲವು ಪ್ರಮುಖ ದಾಖಲೆಗಳನ್ನು ನೀಡುವಂತೆ ಆಸ್ಪತ್ರೆಯಲ್ಲಿ ಕೇಳಲಾಯಿತು. ನಾನು ಅದ್ಯಾವುದನ್ನೂ ಹೊಂದಿಲ್ಲ ಎಂಬ ಕಾರಣಕ್ಕೆ ನನ್ನ ಪತ್ನಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಯಿತು ಎಂದು ಮಹಿಳೆಯ ಪತಿ ದೂರಿದ್ದಾರೆ.

Pregnant woman denied help at MP hospital

ಆದರೆ ಈ ಆರೋಪವನ್ನು ಅಲ್ಲಗಳೆದ ಆಸ್ಪತ್ರೆ ಮೇಲ್ವಿಚಾರಕರು, ಆಸ್ಪತ್ರೆಯ ಗೇಟಿನ ಬಳಿ ಬರುವಾಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ನಿಜ. ಅದಕ್ಕೆಂದೇ ನಾವು ತಕ್ಷಣ ಆಕೆಯನ್ನು ಆಸ್ಪತ್ರೆಯ ಒಳಗೆ ಕರೆಸಿ ಚಿಕಿತ್ಸೆ ನೀಡಿದೆವು. ಹೆರಿಗೆಯೂ ಸುಸೂತ್ರವಾಗಿ ಆಯಿತು ಎಂದಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+