ಹೊಸ ತಂತ್ರಜ್ಞಾನಗಳಿಗೆ ಅವಕಾಶ ಮಾಡಿಕೊಡುತ್ತಿದೆ ಪ್ರಸಾರ ಭಾರತಿ
ಕಳೆದ ಎರಡು ವರ್ಷಗಳಿಂದ ದೂರದರ್ಶನ ಹಾಗೂ ಆಕಾಶವಾಣಿಯು ಪ್ರಸಾರ ಸುಧಾರಣೆಗಳನ್ನು ಮಾಡಿಕೊಳ್ಳುತ್ತಿದೆ.
ಬಳಕೆಯಲ್ಲಿಲ್ಲದ ಪ್ರಸಾರ ತಂತ್ರಜ್ಞಾನಗಳನ್ನು ತೆಗೆದುಹಾಕಿ ನೂತನ ತಂತ್ರಜ್ಞಾನ ಹಾಗೂ ಹೊಸ ವಿಷಯಗಳಿಗೆ ದಾರಿ ಮಾಡಿಕೊಡುತ್ತಿದೆ.
ಪ್ರಸಾರ ಭಾರತಿಯು ಎಫ್‌ಎಂ ರೇಡಿಯೋಕ್ಕೆ ಡಿಜಿಟಲ್ ತಂತ್ರಜ್ಞಾನ ಆಯ್ಕೆಗಳನ್ನು ಪರೀಕ್ಷಿಸುವ ಸುಧಾರಿತ ಹಂತದಲ್ಲಿದೆ ಮತ್ತು ಭಾರತದಲ್ಲಿ ಡಿಜಿಟಲ್ ಎಫ್‌ಎಂ ರೇಡಿಯೋ ಆರಂಭಿಸಲು ಶೀಘ್ರದಲ್ಲೇ ಅದರ ಗುಣಮಟ್ಟವನ್ನು ಅಂತಿಮಗೊಳಿಸಲಾಗುವುದು.

ಯಾವುದೇ ರಾಜ್ಯದ ಯಾವುದೇ ಆಕಾಶವಾಣಿ ಕೇಂದ್ರವನ್ನೂ ಮುಚ್ಚುವುದಿಲ್ಲ ಎಂದು ಪ್ರಸಾರ ಭಾರತಿ ಇಂದು ಸ್ಪಷ್ಟಪಡಿಸಿದೆ. ಆಕಾಶವಾಣಿ ಕೇಂದ್ರಗಳನ್ನು ಮುಚ್ಚಲಾಗುತ್ತದೆ ಎಂದು ಭಾರತದಾದ್ಯಂತದ ವಿವಿಧ ಮಾಧ್ಯಮಗಳು ಸುಳ್ಳು ವರದಿ ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಸಾರ ಭಾರತಿ, ಈ ವರದಿಗಳು ಆಧಾರರಹಿತ ಮತ್ತು ವಾಸ್ತವಕ್ಕೆ ದೂರವಾದುವು ಎಂದು ಸ್ಪಷ್ಟಪಡಿಸಿದೆ.
ಶಶಿ ಶೇಖರ್ ಟ್ವೀಟ್ ಮಾಡಿದ್ದು, ''ಪ್ರಸಾರ ಭಾರತಿಯು ಅನೇಕ ನೂತನ ತಂತ್ರಜ್ಞಾನಗಳಿಗೆ ಅವಕಾಶ ಮಾಡಿಕೊಡುತ್ತಿದೆ, ಆದರೆ ಅನೇಕ ಮಾಧ್ಯಮಗಳು ಇದನ್ನು ತಪ್ಪು ಭಾವಿಸಿ, ಬೇರೆ ರೀತಿಯಲ್ಲೇ ಪ್ರಚಾರ ಮಾಡುತ್ತಿವೆ. ಭಾರತದಲ್ಲಿ ರೂಫ್ ಟಾಪ್ ಆಂಟೆನಾ ಮೂಲಕ ಟಿವಿ ವೀಕ್ಷಣೆ ಸಾಧ್ಯವಿಲ್ಲ, ಅದಕ್ಕೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ, ಬೇಡವಾದವುಗಳನ್ನು ಹೊರಹಾಕುವ ಕೆಲಸ ನಡೆಯುತ್ತಿದೆ'' ಎಂದು ಹೇಳಿದ್ದಾರೆ.
It is irresponsible of sections of media to misrepresent the phase out of obsolete transmitters in this manner. Television viewing is no longer happening through Roof top Antennas in India. Phasing out of analog transmitters which were setup decades ago is a necessary reform.
— Shashi S शशि शेखर (@shashidigital) October 9, 2021
ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಯಾವುದೇ ಆಕಾಶವಾಣಿಯ ಕೇಂದ್ರವನ್ನೂ ಕೆಳಹಂತಕ್ಕೆ ಇಳಿಸಲಾಗುವುದಿಲ್ಲ ಅಥವಾ ಪರಿವರ್ತಿಸಲಾಗುವುದಿಲ್ಲ ಎಂದು ಪ್ರಸಾರ ಭಾರತಿ ಹೇಳಿದೆ.
ಎಲ್ಲಾ ಆಕಾಶವಾಣಿ ಕೇಂದ್ರಗಳು ಸ್ಥಳೀಯ ಕಾರ್ಯಕ್ರಮಗಳನ್ನು ಭಾಷೆ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಜನಸಂಖ್ಯಾ ವೈವಿಧ್ಯತೆಗೆ ಅನುಗುಣವಾಗಿ ಮುಂದುವರೆಸುತ್ತವೆ. ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸುವ ಆಕಾಶವಾಣಿಯ ಧ್ಯೇಯವನ್ನೂ ಮುಂದುವರೆಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.
2021-2022ರಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿರುವ ಹಲವಾರು ಪ್ರಮುಖ ಯೋಜನೆಗಳೊಂದಿಗೆ ಆಕಾಶವಾಣಿ, ಆಲ್ ಇಂಡಿಯಾ ರೇಡಿಯೋ, ಎಐಆರ್ ಜಾಲವನ್ನು ಬಲಪಡಿಸಲಾಗುವುದು. ಭಾರತದಾದ್ಯಂತ ನೂರಕ್ಕೂ ಹೆಚ್ಚು ಹೊಸ ಎಫ್‌ಎಂ ರೇಡಿಯೊ ಟ್ರಾನ್ಸ್‌ಮಿಟರ್‌ಗಳೊಂದಿಗೆ ತನ್ನ ಜಾಲವನ್ನು ವಿಸ್ತರಿಸಲಾಗುವುದು ಎಂದು ಪ್ರಸಾರ ಭಾರತಿ ಪ್ರಕಟಿಸಿದೆ.
ನೂರಾರು ಕೇಂದ್ರಗಳು ಮತ್ತು ರೇಡಿಯೊ ಟ್ರಾನ್ಸ್‌ಮಿಟರ್‌ಗಳನ್ನು ಒಳಗೊಂಡಿರುವ ಎಐಆರ್ ನೆಟ್‌ವರ್ಕ್ ವಿಶ್ವದ ಅತಿದೊಡ್ಡ ಸಾರ್ವಜನಿಕ ಸೇವಾ ಪ್ರಸಾರ ಜಾಲಗಳಲ್ಲಿ ಒಂದಾಗಿದ್ದು, ಇದು ಟೆರೆಸ್ಟ್ರಿಯಲ್ ಅನಲಾಗ್ ರೇಡಿಯೋ (ಎಫ್‌ಎಂ, ಎಂ ಡಬ್ಲ್ಯೂ, ಎಸ್‌ಡಬ್ಲ್ಯೂ), ಸ್ಯಾಟಲೈಟ್ ಡಿಟಿಎಚ್ ರೇಡಿಯೋ (ಉಚಿತ ಡಿಡಿ ಡಿಶ್ ಡಿಟಿಎಚ್ ), ಇಂಟರ್ನೆಟ್ ರೇಡಿಯೋ (ಐಒಎಸ್ / ಆಂಡ್ರಾಯ್ಡ್‌ನಲ್ಲಿ ನ್ಯೂಸ್‌ಆನ್ಏರ್ ಅಪ್ಲಿಕೇಶನ್) ವಿಧಾನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಉಚಿತ ಡಿಡಿ ಡಿಶ್ ಡಿಟಿಎಚ್ ಸೇವೆಯಲ್ಲಿ 48 ಸ್ಯಾಟಲೈಟ್ ರೇಡಿಯೊ ಚಾನೆಲ್‌ಗಳು ಲಭ್ಯವಿದ್ದು, ಭಾರತದಾದ್ಯಂತದ ರೇಡಿಯೊ ಕೇಂದ್ರಗಳಲ್ಲಿನ ಸ್ಥಳೀಯ ಮತ್ತು ಪ್ರಾದೇಶಿಕ ಧ್ವನಿಗಳಿಗೆ ಈಗ ರಾಷ್ಟ್ರವ್ಯಾಪಿ ವೇದಿಕೆಯನ್ನು ಒದಗಿಸಿವೆ.
ನ್ಯೂಸ್‌ಆನ್‌ಏರ್ ಆ್ಯಪ್‌ನಲ್ಲಿ ಸುಮಾರು 200 ಲೈವ್ ರೇಡಿಯೊ ಸ್ಟ್ರೀಮ್‌ಗಳಿವೆ. ಪ್ರಸಾರ ಭಾರತಿಯು "ಸ್ಥಳೀಯತೆಗೆ ಆದ್ಯತೆ" ಎಂಬುದಕ್ಕೆ ಹೊಸ ಜಾಗತಿಕ ಅರ್ಥವನ್ನು ನೀಡಿದ್ದು, 2020 ರ ಅವಧಿಯಲ್ಲಿ ವಿಶ್ವದ ವಿವಿಧ ದೇಶಗಳ 2.5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಈ 200ಕ್ಕೂ ಹೆಚ್ಚು ಲೈವ್ ರೇಡಿಯೊ ಸ್ಟ್ರೀಮ್‌ಗಳ ಮೂಲಕ 300 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಮಾಡಿದ್ದಾರೆ.
ಪ್ರಸಾರ ಭಾರತಿ ಭಾರತದಲ್ಲಿ ಡಿಜಿಟಲ್ ಟೆರೆಸ್ಟ್ರಿಯಲ್ ರೇಡಿಯೊವನ್ನು ಪರಿಚಯಿಸುವ ಯೋಜನೆ ಹೊಂದಿದೆ. ಆಯ್ದ ಆಕಾಶವಾಣಿ ಚಾನಲ್‌ಗಳು ಈಗಾಗಲೇ ಪ್ರಾಯೋಗಿಕವಾಗಿ ಡಿಜಿಟಲ್ ಡಿಆರ್‌ಎಂ ತಂತ್ರಜ್ಞಾನದ ಮೂಲಕ ಅನೇಕ ನಗರಗಳಲ್ಲಿ / ಪ್ರದೇಶಗಳಲ್ಲಿನ ಕೇಳುಗರಿಗೆ ಲಭ್ಯವಿದೆ. ಈ ನಗರಗಳು / ಪ್ರದೇಶಗಳ ಕೇಳುಗರು ಡಿಜಿಟಲ್ ಮೋಡ್‌ನಲ್ಲಿ ಒಂದೇ ರೇಡಿಯೊ ತರಂಗಾಂತರದಲ್ಲಿ ಲಭ್ಯವಿರುವ ಅನೇಕ ರೇಡಿಯೊ ಚಾನೆಲ್‌ಗಳ ಮೂಲಕ ಡಿಜಿಟಲ್ ರೇಡಿಯೊದ ಶಕ್ತಿಯನ್ನು ಅನುಭವಿಸಬಹುದು.
ಡಿಆರ್‌ಎಂ ಟ್ರಾನ್ಸ್‌ಮಿಟರ್‌ಗಳಲ್ಲಿ ಲಭ್ಯವಿರುವ ಆಕಾಶವಾಣಿಯ ವಿಶೇಷ ಡಿಜಿಟಲ್ ರೇಡಿಯೋ ಸೇವೆಗಳಲ್ಲಿ ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳಿಗೆ ಮೀಸಲಾಗಿರುವ ಎಐಆರ್ ನ್ಯೂಸ್ 24X7, ಶಾಸ್ತ್ರೀಯ ಸಂಗೀತಕ್ಕೆ ಮೀಸಲಾಗಿರುವ ಎಐಆರ್ ರಾಗಂ 24X7, ಸ್ಥಳೀಯ / ಪ್ರಾದೇಶಿಕ ರೇಡಿಯೋ ಸೇವೆಗಳು ಮತ್ತು ಲೈವ್ ಸ್ಪೋರ್ಟ್ಸ್ ಸೇರಿವೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications