ಭಾರತ ಕಳಂಕಗೊಳಿಸಲು ವಿದೇಶಿ ಮಣ್ಣು ಬಳಸುವ ರಾಹುಲ್ ಒಬ್ಬ ಫೇಕ್ ಗಾಂಧಿ: ಜೋಶಿ ಗರಂ

ಬೆಂಗಳೂರು, ಮೇ 31: ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೆ ಟೀಕಿಸಿದ್ದಾರೆ. ಈ ನೆಲದ ಪ್ರಧಾನಿಯನ್ನು ಬೇರೆ ರಾಷ್ಟ್ರದಲ್ಲಿ ತೆಗಳಿದ್ದಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 'ರಾಗಾ' ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವಿವಿದ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಾಹುಲ್ ಗಾಂಧಿ ವ್ಯಂಗವಾಡಿದ್ದಾರೆ. ಕೆಲವರನ್ನು ದೇವರಿಗಿಂತ ದೊಡ್ಡವರೆಂದು ಭಾವಿಸುತ್ತಾರೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಒಬ್ಬರು ಎಂದು ವಿದೇಶಿ ನೆಲದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಮಾತಾಡಿದ್ದಾರೆ.

Pralhad Joshi Hits Back To Rahul Gandhi Remark On PM Narendra Modi And BJP At America

ಗಾಂಧಿ ಹೆಸರ ನೆರಳಲ್ಲಿ ರಾಜಕೀಯ ಮಾಡುವ ರಾಹುಲ್, ಒಬ್ಬ ಫೇಕ್ ಗಾಂಧಿ ಎಂದು ಟಾಂಗ್ ಕೊಟ್ಟಿದ್ದಾರೆ. ಮಿಸ್ಟರ್ ಫೇಕ್ ಗಾಂಧಿಗೆ ಭಾರತದ ತಿರುಳು ಅದರ ಸಂಸ್ಕೃತಿ ಗೊತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ಜರಿದಿದ್ದಾರೆ.

ದೇಶವನ್ನು ಕಳಂಕಗೊಳಿಸಲು ವಿದೇಶಿ ಮಣ್ಣನ್ನು ಬಳಸುವ ರಾಹಿಲ್ ಗಾಂಧಿಯಂಥವರಿಂದ ಇನ್ನೇನನ್ನ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತೀಯರು ತಮ್ಮ ಇತಿಹಾಸದ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಭೌಗೋಳಿಕತೆಯನ್ನು ಚೆನ್ನಾಗಿ ರಕ್ಷಿಸಿಕೊಳ್ಳುತ್ತಾರೆ ಎಂದರು.

ಏನೂ ಅರಿಯದವನು ಇದ್ದಕ್ಕಿದ್ದಂತೆ ಎಲ್ಲದರಲ್ಲೂ ಪರಿಣಿತನಾಗಿರುವಂತ ರಾಹುಲ್ ಗಾಂಧಿ ವರ್ತಿಸುತ್ತಿರುವುದನ್ನು ನೋಡಿದರೆ ತಮಾಷೆ ಆನಿಸುತ್ತದೆ ಎಂದು ಪ್ರಹ್ಲಾದ್ ಜೋಶಿಯವರು ಸರಣಿ ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

Pralhad Joshi Hits Back To Rahul Gandhi Remark On PM Narendra Modi And BJP At America

'ರಾಗಾ' ಹೇಳಿದ್ದೇನು?

ರಾಹುಲ್ ಗಾಂಧಿಯವರು ಈ ಹಿಂದೆ ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿದ್ದರು. ಅದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೆ ಅಮೆರಿಕಾದಲ್ಲಿ ಭಾಷಣವೊಂದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಟೀಕಿಸಿದ್ದಾರೆ.

ಭಾರತದಲ್ಲಿ ಕೆಲವರನ್ನು ದೇವರಿಗಂತ ದೊಡ್ಡವರೆಂದು ಭಾವಿಸುತ್ತಾರೆ. ಅದರಲ್ಲಿ ನರೇಂದ್ರ ಮೋದಿ ಸಹ ಒಬ್ಬರು. ಕೇಲವರಿಗೆ ತಾವು ಸರ್ವವನ್ನು ತಿಳಿದಿದ್ದೇವೆ ಎಂಬ ರೋಗ ಇರುತ್ತದೆ. ಚರಿತ್ರಾಕಾರರಿಗೆ ಚರಿತ್ರೆಯನ್ನು, ವಿಜ್ಞಾನಿಗಳಿಗೆ ವಿಜ್ಞಾನವನ್ನು, ಸೇನೆಗೆ ಯುದ್ಧವನ್ನು ಹೇಳಿಕೊಡುವಷ್ಟು ಜ್ಞಾನವಿದೇ ಎಂದುಕೊಳ್ಳುತ್ತಾರೆ ಎಂದು ಹೇಳಿದ್ದರು. ಇದೀಗ ಇದಕ್ಕೆ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+