Salaar Teaser: ಸಲಾರ್ ಟೀಸರ್ ಕಣ್ತುಂಬಿಕೊಂಡು ಆದಿಪುರುಷ ಸೋಲು ಮರೆತ ಪ್ರಭಾಸ್ ಅಭಿಮಾನಿಗಳು

ಪ್ರಭಾಸ್-ಪ್ರಶಾಂತ್ ನೀಲ್ ಜೋಡಿಯ ಬಹುನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ಗುರುವಾರ ಮುಂಜಾನೆ ಬಿಡುಗಡೆಯಾಗಿದ್ದು ಧೂಳೆಬ್ಬಿಸುತ್ತಿದೆ. ಟೀಸರ್ ನಿಂದಲೇ ಟಾಲಿವುಡ್‌ನಲ್ಲಿ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ ಪ್ರಭಾಸ್.

ಬಾಹುಬಲಿ-2 ಚಿತ್ರದ ಬಳಿಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದ ಪ್ರಭಾಸ್ ನಂತರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುವಲ್ಲಿ ಎಡವಿದರು. ಬಾಹುಬಲಿ ನಂತರ ಬಂದ ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಸಿನಿಮಾನಗಳು ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಅಭಿಮಾನಿಗಳು ಕೂಡ ಪ್ರಭಾಸ್ ಸಿನಿಮಾಗಳ ಸೋಲಿನಿಂದ ಹತಾಶರಾಗಿದ್ದರು.

 Prabhas Unveils Most Violent Avatar in Salaar Teaser, Erasing Adipurush Debacle

ಕೆಜಿಎಫ್, ಕೆಜಿಎಫ್-2 ಚಿತ್ರದ ಮೂಲಕ ವಿಶ್ವವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿನೋಡುವಂತೆ ಮಾಡಿದ್ದ ಪ್ರಶಾಂತ್ ಎನ್ನುವ ಮಾಂತ್ರಿಕನ ಜೊತೆ ಪ್ರಭಾಸ್ ಚಿತ್ರ ಮಾಡುತ್ತಿರುವ ವಿಚಾರವೇ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡುತ್ತು. ಕನ್ನಡ ಚಿತ್ರರಂಗಕ್ಕೆ ಮಾತ್ರ ಪರಿಚಿತರಾಗಿದ್ದ ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ಇಂತಹ ಮಾಸ್ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್ ಪ್ರಭಾಸ್‌ರನ್ನು ಇನ್ನಷ್ಟು ಮಾಸ್‌ ಆಘಿ ತೋರಿಸುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು.

ಅಭಿಮಾನಿಗಳಿಗೆ ಖುಷಿ ಕೊಟ್ಟ ಸಲಾರ್ ಟೀಸರ್!

ಗುರುವಾರ ಮುಂಜಾನೆ ಸಲಾರ್ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪ್ರಭಾಸ್ ಮುಖವನ್ನೇ ತೋರಿಸದಿದ್ದರೂ, ಸಿನಿಮಾದಲ್ಲಿ ಅವರು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಝಲಕ್ ಅಂತೂ ಸಿಕ್ಕಿದೆ. ಪ್ರಭಾಸ್‌ರನ್ನು ಡೈನೋಸಾರ್ ಗೆ ಹೋಲಿಕೆ ಮಾಡಿದ್ದು, ಕೆಲವು ಭರ್ಜರಿ ಆಕ್ಷನ್ ಸೀನಗಳನ್ನು ಟೀಸರ್ ನಲ್ಲಿ ತೋರಿಲಸಲಾಗಿದೆ.

ಬಹುನಿರೀಕ್ಷಿತ ಆದಿಪುರುಷ ಸಿನಿಮಾ ಸೋಲು ಪ್ರಭಾಸ್ ಅಭಿಮಾನಿಗಳನ್ನು ನಿರಾಸೆಗೊಳ್ಳುವಂತೆ ಮಾಡಿತ್ತು. ಈಗ ಸಲಾರ್ ಟೀಸರ್ ನೋಡಿದ ಅಭಿಮಾನಿಗಳು ಈ ಬಾರಿ ಪ್ರಭಾಸ್ ಗೆದ್ದೇ ಗೆಲ್ತಾರೆ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ.

ಸಲಾರ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು ಸೆಪ್ಟೆಂಬರ್ 28ರಂದು ಸಲಾರ್ ಚಿತ್ರದ ಮೊದಲನೇ ಭಾಗ ವಿಶ್ವದಾದ್ಯಂತ ತೆರೆಕಾಣಲಿದೆ. ದಿ ಮೋಸ್ಟ್ ವೈಯಲೆಂಟ್ ಮ್ಯಾನ್ ಎಂದು ಸಲಾರ್ ಚಿತ್ರದ ಟೀಸರ್ ಬಗ್ಗೆ ಪ್ರಭಾಸ್ ಕೂಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 20 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಯೂಟ್ಯೂಬ್‌ನಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ. ಕೇವಲ 6 ಗಂಟೆಯಲ್ಲಿ 1 ಮಿಲಿಯನ್ ಲೈಕ್ಸ್ ಪಡೆದುಕೊಂಡ ಮೊದಲ ತೆಲುಗು ಸಿನಿಮಾ ಎನಿಸಿಕೊಂಡಿದೆ. ಟೀಸರ್ ನಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿರುವ ಸಲಾರ್ ಸಿನಿಮಾ ಹಲವು ದಾಖಲೆಗಳನ್ನು ಬರೆಯುತ್ತದೆ ಎಂದು ಹೇಳಲಾಗಿದೆ.

ಪ್ರಶಾಂತ್ ನೀಲ್ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದು, ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದೆ. ಶೃತಿ ಹಾಸನ್ ನಾಯಕಿಯಾಗಿದ್ದು, ಫೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜಗಪತಿ ಬಾಬು, ಗರುಡ ರಾಂ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಸಲಾರ್ ಸೆಪ್ಟೆಂಬರ್ 28, 2023 ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+