ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ

ನವದೆಹಲಿ, ಜುಲೈ 16 : ಬಿಹಾರ ವಿಧಾನಸಭೆ ಚುನಾವಣೆ ಮತ್ತು ಉಪ ಚುನಾವಣೆಯಲ್ಲಿ ಅಂಚೆ ಮತ ಚಲಾವಣೆ ಮಾಡಲು ಇರುವ ವಯೋಮಿತಿಯನ್ನು ಸಡಿಲಿಕೆ ಮಾಡದಿರಲು ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿದೆ.

Recommended Video

      Jofra Archer ,ಬಾಲಿಗೆ ಉಗುಳು ಹಚ್ಚಿದ್ದಕ್ಕೆ ಆಟದಿಂದ ಹೊರಕ್ಕೆ Eng vs WI 2nd test | Oneindia Kannada

      ಕೇಂದ್ರ ಕಾನೂನು ಸಚಿವಾಲಯ ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ 65 ವರ್ಷ ಅಥವ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲು ತಿದ್ದುಪಡಿ ತಂದಿತ್ತು.

      ಗುರುವಾರ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ್ದು 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು, ಅಂಗವಿಕಲರು, ಅತ್ಯಗತ್ಯ ಸೇವೆಗಳಲ್ಲಿ ನಿರತರಾಗಿರುವವರು, ಕೋವಿಡ್ ಸೋಂಕು ದೃಢಪಟ್ಟವರು, ಕ್ವಾರಂಟೈನ್‌ನಲ್ಲಿರುವ ಜನರಿಗೆ ಮಾತ್ರ ಅಂಚೆ ಮೂಲಕ ಮತ ಚಲಾವಣೆ ಮಾಡಲು ಅವಕಾಶ ನೀಡಲಾಗಿದೆ.

      Postal Ballot Facility For Above 65 Years Will Not Apply For Bihar Polls

      2019ರ ಅಕ್ಟೋಬರ್‌ನಲ್ಲಿ ಅಂಚೆ ಮತಗಳನ್ನು ಚಲಾವಣೆ ಮಾಡುವವರ ವಯೋಮಿತಿಯನ್ನು ಸಡಿಲಿಕೆ ಮಾಡುವ ಬಗ್ಗೆ ಚರ್ಚೆಗಳು ಆರಂಭವಾಗಿತ್ತು. ಆಗ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅಂಗವಿಕಲರು, 80 ವರ್ಷ ಮತ್ತು ಹೆಚ್ಚು ವಯಸ್ಸಿನವರು ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಯಿತು.

      2020ರ ಜೂನ್ 19ರಂದು ಮತ್ತೊಂದು ತಿದ್ದುಪಡಿಯ ಮೂಲಕ 65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಯಿತು. ಈಗ ಅದನ್ನು ವಾಪಸ್ ಪಡೆಯಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+