ಇಂಡಿಯಾ ಟುಡೇ ಸಮೀಕ್ಷೆ : ಯೋಗಿ ಆದಿತ್ಯನಾಥ್ ನಂಬರ್ 1 ಸಿಎಂ
ಲಕ್ನೋ, ಜನವರಿ 24 : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಲ್ಲಿಯೇ ನಂಬರ್ 1 ಮುಖ್ಯಮಂತ್ರಿ ಎಂದು ಜನರು ಹೇಳಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ನಡೆದ ಸಮೀಕ್ಷೆಯ ವರದಿ ಇದನ್ನು ಹೇಳಿದೆ.
India Today-Karvy Insights ನೇಷನ್ ಮೂಡ್ ಬಗ್ಗೆ ಸಮೀಕ್ಷೆ ನಡೆಸಿದ್ದು, ವರದಿಯನ್ನು ಬಹಿರಂಗ ಮಾಡಿದೆ. ದೇಶದ ನಾಲ್ವರು ಮುಖ್ಯಮಂತ್ರಿಗಳ ಪೈಕಿ ಯೋಗಿ ಆದಿತ್ಯನಾಥ್ ದೇಶದಲ್ಲಿಯೇ ನಂಬರ್ 1 ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.
ಯೋಗಿ ಆದಿತ್ಯನಾಥ್ ಉತ್ತಮ ಮುಖ್ಯಮಂತ್ರಿ ಎಂದು ಶೇ 40ರಷ್ಟು ಜನರು ವೋಟ್ ಮಾಡಿದ್ದಾರೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶ. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳು ಕಳೆಯುತ್ತಾ ಬಂದಿದೆ.
2017ರ ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿಯೂ ಯೋಗಿ ಆದಿತ್ಯನಾಥ್ ಅವರು ಉತ್ತಮ ಮುಖ್ಯಮಂತ್ರಿ ಎಂದು ಶೇ 30ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಪ್ರದೇಶದ ಜನರ ಅಭಿಪ್ರಾಯ ಯಾವಾಗಲೂ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ.

ಯಾವ-ಯಾವ ಮುಖ್ಯಮಂತ್ರಿಗಳು?
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಯೋಗಿ ಆದಿತ್ಯನಾಥ್ ಉತ್ತಮ ಮುಖ್ಯಮಂತ್ರಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಯಾವುದಕ್ಕೆ ಎಷ್ಟು ಮತ?
ಯೋಗಿ ಆದಿತ್ಯನಾಥ್ ಅವರ ಆಡಳಿತ ಅತ್ಯುತ್ತಮವಾಗಿದೆ ಎಂದು ಶೇ 17ರಷ್ಟು ಜನರು, ಉತ್ತಮ ಎಂದು ಶೇ 40ರಷ್ಟು ಜನರು, ಉತ್ತಮವಾಗಿಲ್ಲ ಎಂದು ಶೇ 27ರಷ್ಟು ಜನರು, ತೃಪ್ತಿಕರವಾಗಿಲ್ಲ ಎಂದು ಶೇ 12ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಸ್ಥಿತಿ-ಗತಿ
ಉತ್ತರ ಪ್ರದೇಶ ದೇಶದ ಅತಿ ದೊಡ್ಡ ರಾಜ್ಯ. ಇಲ್ಲಿನ ಜನರ ಅಭಿಪ್ರಾಯ 2019ರ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. India Today-Karvy Insights ಸಮೀಕ್ಷೆಯಲ್ಲಿ 2478 ಜನರು ಪಾಲ್ಗೊಂಡಿದ್ದರು.

ಅಂತಿಮ ಫಲಿತಾಂಶ
India Today-Karvy Insights ಸಮೀಕ್ಷೆಯ ಅಂತಿಮ ಫಲಿತಾಂಶದ ಪ್ರಕಾರ ಉತ್ತರ ಪ್ರದೇಶದ ಜನರು 5ರಲ್ಲಿ 3.57 ಅಂಕಗಳನ್ನು ಯೋಗಿ ಆದಿತ್ಯನಾಥ್ ಅವರ ಆಡಳಿತಕ್ಕೆ ನೀಡಿದ್ದಾರೆ.












Click it and Unblock the Notifications