ಫ್ರಿಡ್ಜ್, ಅಲ್ಮಿರಾದಲ್ಲಿ ಶವ! ಅಲಹಾಬಾದಿನಲ್ಲೊಂದು ಥ್ರಿಲ್ಲರ್ ಕ್ರೈಂ ಸ್ಟೋರಿ
Recommended Video

ಅಲಹಾಬಾದ್, ಆಗಸ್ಟ್ 21: ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ದೆಹಲಿಯ ಬುರಾರಿ ಘಟನೆಯನ್ನು ನೆನಪಿಸಿದೆ.
ಮನೆಯ ಯಜಮಾನನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಮನೆಯೊಡತಿಯ ಶವ ಫ್ರಿಡ್ಜ್ ನಲ್ಲಿ ಮತ್ತು ಮೂವರು ಮಕ್ಕಳ ಶವ ಅಲ್ಮಿರಾದಲ್ಲಿನ ಸೂಟ್ ಕೇಸೊಂದರಲ್ಲಿ ಪತ್ತೆಯಾಗಿದೆ!
ಪ್ರಾಥಮಿಕ ತನಿಖೆಯಿಂದ ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡಿ ಮನೆಯೊಡೆಯ ನಂತರ ತಾನೂ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದೆ.

ಮೂವರು ಹೆಣ್ಣು ಮಕ್ಕಳ ಮೃತದೇಹವನ್ನು ತುಂಡರಿಸಿ ಸೂಟ್ ಕೇಸಿನಲ್ಲಿ ತುಂಬಿ ಅಲ್ಮಿರಾದಲ್ಲಿ ಇಡಲಾಗಿದ್ದು, ಮನೆಯೊಡತಿಯ ಶವವನ್ನು ಫ್ರಿಡ್ಜ್ ನಲ್ಲಿ ಇಡಲಾಗಿತ್ತು. ಘಟನೆ ಯಾವಾಗ ನಡೆದಿದ್ದು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಮನೆಯಿಂದ ಎರಡು ದಿನದಿಂದ ಯಾರೂ ಹೊರಬರದಿರುವುದು ಮತ್ತು ಮನೆಯಿಂದ ದುರ್ನಾತ ಬರುತ್ತಿರುವುದರಿಂದ ಅನುಮಾನಗೊಂಡ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದು ನಿಜಕ್ಕೂ ಆತ್ಮಹತ್ಯೆ ಪ್ರಕರಣವೇ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆತ್ಮಹತ್ಯೆಯೇ ಆಗಿದ್ದರೆ ಅದಕ್ಕೆ ಕಾರಣವೇನು ಎಂಬುದೂ ತಿಳಿದುಬಂದಿಲ್ಲ. ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಜುಲೈ ತಿಂಗಳಿನಲ್ಲಿ ದೆಹಲಿಯ ಬುರಾರಿ ಎಂಬಲ್ಲಿ ಒಂದೇ ಮನೆಯ 11 ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಇದಕ್ಕೆ ಮನೆ ಜನರಲ್ಲಿದ್ದ ಮೂಢನಂಬಿಕೆಯೇ ಕಾರಣ ಎನ್ನಲಾಗಿತ್ತು. ಈ ಕುರಿತೂ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ತನಿಖೆ ಪ್ರಗತಿಯಲ್ಲಿದೆ.












Click it and Unblock the Notifications