PM Modi Birthday: ಹುಟ್ಟುಹಬ್ಬದ ದಿನ ಪ್ರಧಾನಿ ಮೋದಿ ಮೆಟ್ರೋ ಸವಾರಿ
ನವದೆಹಲಿ: ಪ್ರಧಾನಿ ಮೋದಿ ಅಭಿಮಾನಿಗಳಿಗೆ ಇಂದು ಡಬಲ್ ಸಂಭ್ರಮ. ಒಂದು ಕಡೆ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ ದಿನವಾಗಿದ್ದರೆ, ಮತ್ತೊಂದು ಕಡೆ ಖುದ್ದು ಪಿಎಂ ಮೋದಿ ಸರ್ಪ್ರೈಸ್ ಕೊಟ್ಟಿದ್ದರು. ರಾಷ್ಟ್ರ ರಾಜಧಾನಿ ಜನರು ಮೆಟ್ರೋ ರೈಲಿನಲ್ಲಿ ಸವಾರಿ ಮಾಡುವ ಸಂದರ್ಭದಲ್ಲೇ, ದೇಶದ ಪ್ರಧಾನಿ ಮೆಟ್ರೋ ರೈಲಿನಲ್ಲಿ ಪತ್ಯಕ್ಷ್ಯರಾಗಿದ್ದರು.
ಹೌದು ದೆಹಲಿ ಮೆಟ್ರೊ ರೈಲಲ್ಲಿ ಪ್ರಯಾಣಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಯಾಣಿಕರು & ಮೆಟ್ರೋ ನೌಕರರ ಜೊತೆಗೆ ಸಂವಾದ ನಡೆಸಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ಸವಾರಿ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರು ಧೌಲಾ ಕುವಾನ್ ನಿಲ್ದಾಣದಿಂದ ಮೆಟ್ರೋ ಮೂಲಕ ಪ್ರಯಾಣವನ್ನ ಮಾಡಿ ಗಮನ ಸೆಳೆದಿದ್ದಾರೆ. ಈ ವೇಳೆ ಮೆಟ್ರೋ ರೈಲಿನಲ್ಲಿ ಇದ್ದ ಪ್ರಯಾಣಿಕರಿಗಂತು ಖುಷಿಯೋ ಖುಷಿ.

ಹುಟ್ಟಹುಬ್ಬದ ದಿನವೇ ಡಬಲ್ ಸಂಭ್ರಮ
ಅಷ್ಟಕ್ಕೂ ರಾಷ್ಟ್ರ ರಾಜಧಾನಿ ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ದ್ವಾರಾಕ ಸೆಕ್ಟರ್-2 ರಿಂದ ಹೊಸ ಮೆಟ್ರೋ ನಿಲ್ದಾಣವಾದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರ ತನಕ ವಿಸ್ತರಿತ ಮಾರ್ಗವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದ್ದರು. ನಂತರ ಪ್ರಧಾನಿ ಮೋದಿ ಅವರು ಧೌಲಾ ಕುವಾನ್ ನಿಲ್ದಾಣದಿಂದ ಮೆಟ್ರೋ ಪ್ರಯಾಣ ಮಾಡಿ ಗಮನ ಸೆಳೆದರು. ದ್ವಾರಕಾದ ಇಂಟರ್‌ನ್ಯಾಷನಲ್ ಕನ್ವೆನ್ಷನ್ & ಎಕ್ಸ್‌ಪೋ ಸೆಂಟರ್ (ಐಐಸಿಸಿ) ಯಶೋಭೂಮಿ ಮೊದಲ ಹಂತವನ್ನ ಪಿಎಂ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು.
ಮಕ್ಕಳ ಜೊತೆಗೂ ಮೋದಿ ಮಾತು
ಇನ್ನು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವಾಗ ಜನ ಸಾಮಾನ್ಯರ ಕಷ್ಟ ಸುಖ ಆಲಿಸಿ ಪ್ರಧಾನಿ ಸಾಮಾನ್ಯರಂತೆ ಪ್ರಯಾಣ ಮಾಡಿದರು. ಈ ವೇಳೆ ಮಕ್ಕಳ ಜೊತೆಗೂ ಮಗುವಾಗಿ ಮಾತನಾಡಿದರು. ಹಾಗೇ ವೃದ್ಧರು ಕೂಡ ಪ್ರಧಾನಿ ಮೋದಿ ಅವರ ಜೊತೆ ಅನುಭವವನ್ನ ಹಂಚಿಕೊಂಡರು. ಇನ್ನು ಪ್ರಧಾನಿ ಆಗಮನವು ಸರ್ಪ್ರೈಸ್ ಆಗಿದ್ದರೂ ಮೆಟ್ರೋ ರೈಲಿನಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು. ಹಾಗೇ ರೈಲು ನಿಲ್ದಾಣದಲ್ಲೂ ಭದ್ರತೆ ಹೆಚ್ಚಿಸಲಾಗಿತ್ತು.
ಬಹುದಿನಗಳ ಕನಸು ಈಗ ನನಸು
ಇದೀಗ ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿ ದ್ವಾರಕಾ ಸೆಕ್ಟರ್ 21 ರವರೆಗೂ ಮೆಟ್ರೋ ಸಂಚಾರ ಲಭ್ಯವಾಗಿದೆ. ಇದು ದೆಹಲಿ ಮೆಟ್ರೊ ಬ್ಲೂ ಲೈನ್ ಇಂಟರ್‌ಚೇಂಜ್ ಕೇಂದ್ರ ಕೂಡ ಆಗಿದ್ದು, ಹೊಸ ಮೆಟ್ರೋ ನಿಲ್ದಾಣ ದ್ವಾರಕಾದ ಸೆಕ್ಟರ್ 25ರ ಸುತ್ತಮುತ್ತ ಇರುವ ಜನರಿಗೂ ಸಹಾಯಕವಾಗಿದೆ. ಹಾಗೇ ಗುರುಗ್ರಾಮ್ ದ್ವಾರಕಾ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಇರುವ ಪ್ರದೇಶಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಸಹಾಯಕವಾಗಿದೆ. ಈ ಮೂಲಕ ಸ್ಥಳೀಯರ ಬಹುದಿನಗಳ ಕನಸು ಈಡೇರಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನ ಮಂತ್ರಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಹೀಗಾಗಿಯೇ ಖುದ್ದು ಪ್ರಧಾನಿ ಮೆಟ್ರೋ ಮೋದಿ ರೈಲಿನಲ್ಲಿ ಸಂಚಾರ ಮಾಡಿ ಪ್ರಯಾಣಿಕರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇಡೀ ಜಗತ್ತು ಪ್ರಧಾನಿ ಮೋದಿ ಅವರಿಗೆ ವಿಶೇಷ ಸಂದೇಶ ಕಳುಹಿಸಿದ್ದು, ಮತ್ತೊಂದು ಕಡೆ ದೇಶದ ವಿವಿಧ ಪಕ್ಷಗಳ ಗಣ್ಯರು ಕೂಡ ಶುಭ ಕೋರಿದ್ದಾರೆ.












Click it and Unblock the Notifications