ಜಗತ್ತಿನ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೇ ಟಾಪ್!

ನವದೆಹಲಿ, ಆಗಸ್ಟ್ 26: ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ವಿಶ್ವದಲ್ಲಿ ಅತಿಹೆಚ್ಚು ರೇಟಿಂಗ್ ಪಡೆದ ನಾಯಕರಾಗಿ ಹೊರಹೊಮ್ಮಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ನಂತರದ ಸ್ಥಾನದಲ್ಲಿ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ 75 ಪಾಯಿಂಟ್ ರೇಟಿಂಗ್‌ನೊಂದಿಗೆ ಟಾಪ್ ಲೀಡರ್ ಎನಿಸಿಕೊಂಡಿದ್ದಾರೆ. US ಅಧ್ಯಕ್ಷ ಜೋ ಬಿಡೆನ್ 41 ಶೇಕಡಾ ರೇಟಿಂಗ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಪ್ರತಿ ದೇಶದಲ್ಲಿನ ಅಧಿಕೃತ ಸರ್ಕಾರಿ ಮೂಲಗಳ ಅಂಕಿ ಅಂಶಗಳನ್ನು ಪರಿಗಣಿಸಲಾಗಿದೆ. ವಯಸ್ಸು, ಲಿಂಗ, ಪ್ರದೇಶಗಳ ಅಧಿಕೃತ ಅಂಕಿ ಅಂಶಗಳನ್ನು ಪಡೆದುಕೊಳ್ಳಲಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಸಮೀಕ್ಷೆಗಳು ಜನಾಂಗ ಮತ್ತು ಜನಾಂಗೀಯತೆಯಿಂದಲೂ ಸಹ ಅಂಕಿ ಅಂಶ ಹೊಂದಿವೆ.

ವಯಸ್ಕರ ರಾಷ್ಟ್ರೀಯ ಪ್ರತಿನಿಧಿ ಮಾದರಿಗಳಲ್ಲಿ ಎಲ್ಲಾ ಸಂದರ್ಶನಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿದೆ. ಭಾರತದಲ್ಲಿನ ಮಾದರಿಯು ಸಾಕ್ಷರ ಜನಸಂಖ್ಯೆಯ ಪ್ರಾತಿನಿಧ್ಯ ಅಂಶವಾಗಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಖ್ಯಾತಿಯನ್ನು ಹೊಂದಿರುವ ನಾಯಕರು ಯಾರು ಎಂಬುದರ ಬಗ್ಗೆ 22 ವಿಶ್ವನಾಯಕರನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಯಾವ ಅಧ್ಯಕ್ಷರು ಎಷ್ಟನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿದುಕೊಳ್ಳೋಣ.

ಜಗತ್ತಿನ ಶ್ರೇಷ್ಠ ನಾಯಕ ಎನಿಸಿಕೊಂಡ ನರೇಂದ್ರ ಮೋದಿ

ಜಗತ್ತಿನ ಶ್ರೇಷ್ಠ ನಾಯಕ ಎನಿಸಿಕೊಂಡ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ 75 ಪಾಯಿಂಟ್ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 63 ರೇಟಿಂಗ್‌ನೊಂದಿಗೆ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ರೀತಿ 54 ರೇಟಿಂಗ್‌ನೊಂದಿಗೆ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ಮೂರನೇ ಸ್ಥಾನದಲ್ಲಿದ್ದಾರೆ. 41 ಪಾಯಿಂಟ್ ರೇಟಿಂಗ್‌ನೊಂದಿಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ 39 ರೇಟಿಂಗ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ 38 ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

2021ರಲ್ಲೂ ಪ್ರಧಾನಿ ಮೋದಿಯೇ ಶ್ರೇಷ್ಠ ನಾಯಕ

2021ರಲ್ಲೂ ಪ್ರಧಾನಿ ಮೋದಿಯೇ ಶ್ರೇಷ್ಠ ನಾಯಕ

ಕಳೆದ 2022ರ ಜನವರಿ ಮತ್ತು 2021ರ ನವೆಂಬರ್ ತಿಂಗಳಿನಲ್ಲೂ ಈ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಅಂದೂ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಜಗತ್ತಿನ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ಈ ಸಮೀಕ್ಷೆಯು ರಾಜಕೀಯ ಚುನಾವಣೆಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಮತದಾನದ ಸಮಸ್ಯೆಗಳ ಕುರಿತು ನೈಜ-ಸಮಯದ ಮತದಾನದ ಅಂಕಿ-ಅಂಶಗಳನ್ನು ಒದಗಿಸುತ್ತದೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿದಿನ 20,000ಕ್ಕೂ ಹೆಚ್ಚು ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ. ಜಾಗತಿಕ ನಾಯಕ ಮತ್ತು ದೇಶದ ಪಥದ ದತ್ತಾಂಶವನ್ನು ನಿರ್ದಿಷ್ಟ ದೇಶದಲ್ಲಿನ ಎಲ್ಲಾ ವಯಸ್ಕರ ಏಳು ದಿನಗಳ ಚಲಿಸುವ ಸರಾಸರಿಯನ್ನು ಆಧರಿಸಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಸರಾಸರಿ ಮಾದರಿ ಗಾತ್ರವು ಸುಮಾರು 45,000 ಆಗಿದೆ. ಇತರ ದೇಶಗಳಲ್ಲಿ ಮಾದರಿ ಗಾತ್ರವು ಸರಿಸುಮಾರು 500-5,000 ವರೆಗೆ ಇರುತ್ತದೆ.

ಆನ್‌ಲೈನ್‌ನ ಮೂಲಕ ಸಂದರ್ಶನ

ಆನ್‌ಲೈನ್‌ನ ಮೂಲಕ ಸಂದರ್ಶನ

ಆನ್‌ಲೈನ್‌ನಲ್ಲಿಯೇ ಎಲ್ಲಾ ಮಾದರಿಯ ಸಂದರ್ಶನಗಳನ್ನು ನಡೆಸಲಾಗಿದೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಟ್ರ್ಯಾಕ್ ಭಾರತದಲ್ಲಿ ಸಾಕ್ಷರತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಪ್ರತಿನಿಧಿಗಳನ್ನು ಸಂದರ್ಶನ ಮಾಡಿ ಅಂಕಿ-ಅಂಶಗಳನ್ನು ಪಡೆದುಕೊಳ್ಳಲಾಗಿದೆ.

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್

ಪ್ರಸ್ತುತ ಸರ್ಕಾರಿ ನಾಯಕರು ಮತ್ತು ದೇಶದ ಅನುಮೋದನೆ ರೇಟಿಂಗ್‌ಗಳನ್ನು ಪತ್ತೆ ಮಾಡುತ್ತಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೊ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ ರಾಷ್ಟ್ರಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+