ಮಂಗಳವಾರ ದೇಶದ ಮೊದಲ ಜಲ ಮೆಟ್ರೋ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ವೆಚ್ಚವೆಷ್ಟು ಗೊತ್ತೆ?
ತಿರುವನಂತಪುರ, ಏಪ್ರಿಲ್. 23: ಕೇರಳದ ಬಂದರು ನಗರ ಕೊಚ್ಚಿಯ ಸುತ್ತಲಿನ ಹತ್ತು ಸಣ್ಣ ದ್ವೀಪಗಳನ್ನು ಸಂಪರ್ಕಿಸುವ ದೇಶದ ಮೊದಲ ಜಲ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಏಪ್ರಿಲ್ 25) ಚಾಲನೆ ನೀಡಲಿದ್ದಾರೆ. ರೈಲು, ರಸ್ತೆ ಮತ್ತು ನೀರನ್ನು ಸಂಪರ್ಕಿಸುವ ಮೆಟ್ರೋ ವ್ಯವಸ್ಥೆಯು ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ ಎಂದು ಅಂದಾಜಿಸಲಾಗಿದೆ.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ತಯಾರಿಸಿದ ಎಂಟು ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳೊಂದಿಗೆ ಮೆಟ್ರೋ ಯೋಜನೆಯು ಪ್ರಾರಂಭವಾಗಲಿದೆ ಎಂದು ಜಲ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ತಿತ್ವದಲ್ಲಿರುವ ಸಾರಿಗೆ ಜಾಲಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಒಳನಾಡಿನ ಜಲಮೂಲಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಇದು ಒತ್ತಿಹೇಳುತ್ತಿದೆ.

ವಾಟರ್ ಮೆಟ್ರೋ ಕೊಚ್ಚಿಯ ಸುಂದರವಾದ ಹಿನ್ನೀರಿನ ಮೂಲಕ ಅಗ್ಗದ ಪ್ರಯಾಣವನ್ನು ಒದಗಿಸುತ್ತದೆ. ಜಲ ಮೆಟ್ರೋ ರಾಜ್ಯದ ಜಲ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ ಮತ್ತು ಇದು ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ನೀಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಂಧನ-ಸಮರ್ಥ ಮತ್ತು ಪರಿಸರ ಸ್ನೇಹಿ ಜಲ ಮೆಟ್ರೋ ಸೇವೆಯು ನಗರ ಪ್ರಯಾಣದ ಪರಿಕಲ್ಪನೆಯನ್ನು ಬದಲಾಯಿಸುತ್ತದೆ. ವಾಟರ್ ಮೆಟ್ರೋ ಯೋಜನೆ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಉತ್ತೇಜನವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ವಾಟರ್ ಮೆಟ್ರೋ ಕೈಗೆಟುಕುವ ಬೆಲೆ ಹೊಂದಿರುತ್ತದೆ. ನಾವು 75 ಕಿಲೋಮೀಟರ್‌ಗಳನ್ನು ಕ್ರಮಿಸುವ 15 ಮಾರ್ಗಗಳನ್ನು ಸುವ್ಯವಸ್ಥಿತಗೊಳಿಸಿದ್ದೇವೆ. ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ಹೆಚ್ಚು ವಿದ್ಯುತ್ ಚಾಲಿತ ಹೈಬ್ರಿಡ್ ಬೋಟ್‌ಗಳನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಕೊಚ್ಚಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮತ್ತು ಮಾಜಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದ್ದಾರೆ.

ಈ ಜಲ ಮೆಟ್ರೋ ಪ್ರಯಾಣವನ್ನು ಆನಂದಿಸಲು ಬಯಸುವವರು ಒಂದೇ ಟ್ರಿಪ್ ಟಿಕೆಟ್‌ಗಳಲ್ಲದೆ, ಸಾಪ್ತಾಹಿಕ, ಮಾಸಿಕ ಮತ್ತು ತ್ರೈಮಾಸಿಕ ಪಾಸ್‌ಗಳನ್ನು ಸಹ ಪಡೆಯಬಹುದು. ಆರಂಭದಲ್ಲಿ, ಪ್ರತಿ 15 ನಿಮಿಷಗಳಿಗೊಮ್ಮೆ ವಾಟರ್ ಮೆಟ್ರೋ ಪ್ರಯಾಣಿಸಲಿದೆ.
"ವಾಟರ್ ಮೆಟ್ರೋದಲ್ಲಿ ನಾವು ಅತ್ಯಾಧುನಿಕ ಲಿಥಿಯಂ ಟೈಟಾನೈಟ್ ಸ್ಪಿನೆಲ್ ಬ್ಯಾಟರಿಗಳನ್ನು ಬಳಸುತ್ತೇವೆ. ಸಾರ್ವಜನಿಕ ವಲಯದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳು ಒಂದೇ ಕಮಾಂಡ್ ಅಡಿಯಲ್ಲಿ ಫ್ಲೀಟ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು" ಎಂದು ಕೇರಳ ವಾಟರ್ ಮೆಟ್ರೋ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ (ಕಾರ್ಯಾಚರಣೆ) ಸಜನ್ ಪಿ ಜಾನ್ ಹೇಳಿದ್ದಾರೆ.
ವಿಶಾಲವಾದ ಕಿಟಕಿಗಳನ್ನು ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ಬೋಟ್‌ಗಳೂ ಹಿನ್ನೀರಿನ ಸುಂದರ ದೃಶ್ಯಗಳ ಜೊತೆಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಹೆಚ್ಚನ ಭದ್ರತೆಯೂ ನೀಡಲಾಗಿದೆ. ಈ ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ 1,137 ಕೋಟಿ ರೂಪಾಯಿ. ಇದಕ್ಕೆ ಜರ್ಮನ್ ಧನಸಹಾಯ ಸಂಸ್ಥೆ ಕೆಎಫ್ ಡಬ್ಲ್ಯೂ ಮತ್ತು ರಾಜ್ಯ ಸರ್ಕಾರವು ಯೋಜನೆಗೆ ಹಣವನ್ನು ಒದಗಿಸಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications