ತಮ್ಮ ತಾಯಿ ಹೀರಾಬೆನ್‌ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

ಅಹಮದಾಬಾದ್‌, ಡಿಸೆಂಬರ್‌ 30: 100ನೇ ವಯಸ್ಸಿನಲ್ಲಿ ನಿಧನರಾದ ತಮ್ಮ ತಾಯಿ ಹೀರಾಬೆನ್‌ ಅವರ ಅಂತಿಮ ದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಡೆದಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ ತಮ್ಮ ತಾಯಿ ನಿಧನದಿಂದ ಅಹಮದಾಬಾದ್‌ಗೆ ಹೋಗಿ ತಮ್ಮ ತಾಯಿ ಅಂತಿಮ ದರ್ಶನ ಪಡೆದಿದ್ದಾರೆ.

ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅವರನ್ನು ಅನಾರೋಗ್ಯದ ಕಾರಣ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು. ವಯೋಸಹಜ ಕಾಯಿಲೆಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ತಮ್ಮ ತಾಯಿಯ ನಿಧನದ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಶುಕ್ರವಾರ ಮುಂಜಾನೆ ಟ್ವೀಟ್ ಮಾಡಿ "ಭವ್ಯವಾದ ಶತಮಾನವು ಭಗವಂತನ ಪಾದದಲ್ಲಿ ನಿಂತಿದೆ. ಅಮ್ಮನಲ್ಲಿ ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನ ತಪಸ್ವಿಯ ಪ್ರಯಾಣವನ್ನು ಒಳಗೊಂಡಿರುವ ತ್ರಿಮೂರ್ತಿಗಳನ್ನು ನಾನು ಯಾವಾಗಲೂ ಭಾವಿಸುತ್ತೇನೆ ಎಂದು ಬರೆದಿದ್ದಾರೆ.

PM Narendra Modi pays respect to his mother Heeraben Modi at Gandhinagar residence

ಈ ವರ್ಷ ತನ್ನ ತಾಯಿಯ 100ನೇ ಹುಟ್ಟುಹಬ್ಬದಂದು ಪ್ರಧಾನಿ ಮೋದಿ ಭೇಟಿಯನ್ನು ಅವರು ನೆನಪಿಸಿಕೊಂಡರು. ನಾನು ಅಮ್ಮನ 100ನೇ ಹುಟ್ಟುಹಬ್ಬದಂದು ಅವರನ್ನು ಭೇಟಿಯಾದಾಗ ಅವರು ಒಂದು ವಿಷಯವನ್ನು ಹೇಳಿದರು. ಅದು ಯಾವಾಗಲೂ ನೆನಪಿಗೆ ಬರುತ್ತದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಬದುಕು, ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಜೀವನವನ್ನು ಶುದ್ಧತೆಯಿಂದ ಬದುಕಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನದ ಬೆನ್ನಲ್ಲೆ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ 'ಗೌರವಾನ್ವಿತ ಮಾತಾಜಿ ಹೀರಾಬೆನ್ ಅವರ ನಿಧನದ ವಿಷಯ ತಿಳಿದು ತುಂಬಾ ದುಃಖವಾಗಿದೆ. ತಾಯಿ ಒಬ್ಬ ವ್ಯಕ್ತಿಯ ಜೀವನದ ಮೊದಲ ಸ್ನೇಹಿತೆ ಮತ್ತು ಶಿಕ್ಷಕಿ, ಅವರನ್ನು ಕಳೆದುಕೊಳ್ಳುವ ನೋವು ವಿಶ್ವದಲ್ಲಿ ಅತಿ ದೊಡ್ಡ ನೋವು' ಎಂದು ಬರೆದಿದ್ದಾರೆ.

PM Narendra Modi pays respect to his mother Heeraben Modi at Gandhinagar residence

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ ಮೋದಿ ಅವರ ನೂರು ವರ್ಷಗಳ ಹೋರಾಟದ ಜೀವನವು ಭಾರತೀಯ ಆದರ್ಶಗಳ ಸಂಕೇತವಾಗಿದೆ' ಎಂದು ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಸಾವಿನ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ 'ನರೇಂದ್ರ ಮೋದಿ ಅವರ ತಾಯಿಯ ಸಾವು ಯಾವುದೇ ವ್ಯಕ್ತಿಯ ಜೀವನದಲ್ಲಿ ಮಹತ್ವದ ವ್ಯಕ್ತಿಯನ್ನು ಕಳೆದುಕೊಂಡ ದುಖ:ವನ್ನು ತರುತ್ತದೆ. ಅದನ್ನು ಸರಿದೂಗಿಸಲು ಅಸಾಧ್ಯ' ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+