ಮೋದಿ ನೇತೃತ್ವದಲ್ಲಿ ಯೋಗಪಥವಾದ ದೆಹಲಿ ರಾಜಪಥ
ನವದೆಹಲಿ, ಜೂ. 21: ಭಾನುವಾರ ಮುಂಜಾನೆ ದೆಹಲಿ ರಾಜಪಥ ಯೋಗ ಪಥವಾಗಿ ಬದಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಳಗೊಂಡಂತೆ ಸುಮಾರು 37 ಸಾವಿರ ಜನ ಯೋಗಾಭ್ಯಾಸ ಮಾಡಿದ್ದು ಹೊಸ ದಾಖಲೆಯಾಯಿತು.
ಕೆಲ ಯೋಗಾಸನಗಳನ್ನು ಪ್ರದರ್ಶನ ಮಾಡಿದ ನರೇಂದ್ರ ಮೋದಿ ಮಕ್ಕಳೊಂದಿಗೆ ಬೆರೆತು ಮಕ್ಕಳಾದರು. ನಂತರ ಮಾತನಾಡಿದ ಮೋದಿ ಯೋಗ ಎಂಬ ಕೊಡುಗೆ ನೀಡಿದ ಮಹಾತ್ಮರಿಗೆ ನಮನ ಸಲ್ಲಿಸಿದರು.[ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ]

ಶಾಂತಿ-ಸಹಬಾಳ್ವೆ ನಿರ್ಮಾಣಕ್ಕೆ ಯೋಗ ಮಾರ್ಗವಾಗಲಿದೆ. ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು ದೇಶಕ್ಕೆ ಸಂದ ಗೌರವ. ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಬೇರೆ ಯಾವ ಔಷಧ ಬೇಕಿಲ್ಲ ಎಂದು ಹೇಳಿದರು.
ಬಾಬಾ ರಾಮ್ ದೇವ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಭಾನುವಾರದ ಯೋಗ ಪ್ರದರ್ಶನ ಗಿನ್ನಿಸ್ ಬುಕ್ ನ್ನು ಸೇರಲಿದೆ. ಜಗತ್ತಿನ 177 ರಾಷ್ಟ್ರಗಳಲ್ಲಿ ಯೋಗ ದಿನ ಆಚರಣೆ ಮಾಡಲಾಗುತ್ತಿದೆ.
Pristine: Rajpath.. this morning.. from the top of India Gate. Photos: Vijay Kumar,DPR,MoD. #InternationalDayofYogapic.twitter.com/RsyO59waIn
— Sanjay Rathod (@Sanjay_Vis) June 21, 2015 











Click it and Unblock the Notifications