Chandrayaan 3: ಚಂದ್ರನ ಮೇಲೆ ಭಾರತ: ಚಂದ್ರನ ಬಗೆಗಿರುವ ಕತೆಗಳು ಬದಲಾಗಲಿವೆ: ಪ್ರಧಾನಿ ಮೋದಿ ಬಣ್ಣನೆ
ಬೆಂಗಳೂರು, ಆಗಸ್ಟ್ 23: ಭಾರತದ ಹೆಮ್ಮೆಯ ಚಂದ್ರಯಾನ-3 (Chandrayaan 3) ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಅಂಗಳದ ಮೇಲೆ ಇಳಿಸುವಲ್ಲಿ ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಶಸ್ವಿಯಾಗಿದೆ. ಈ ಕುರಿತು ಇಸ್ರೋ, ವಿಜ್ಞಾನಿಗಳು ಸೇರಿದಂತೆ ಭಾರತದ ಯಶಸ್ಸು, ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.
#WATCH | Johannesburg, South Africa | Immediately after the success of Chandrayaan-3, PM Narendra Modi telephoned ISRO chief S Somanath and congratulated him. pic.twitter.com/NZWCuxdiXw
— ANI (@ANI) August 23, 2023
ಚಂದ್ರಯಾನ 3 ಯಶಸ್ವಿ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ 140 ಕೋಟಿ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂದು ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಸುಸೂತ್ರವಾಗಿ ಚಂದ್ರನ ಮೇಲೆ ಇಳಿದಿದ್ದು, ಇದೊಂದು ಐತಿಹಾಸಿಕ ದಿನ ಎಂದು ಮೋದಿ ಬಣ್ಣಿಸಿದರು.

ಚಂದ್ರನ ಬಗೆಗಿರುವ ಕತೆಗಳು ಬದಲಾಗಲಿವೆ: ಮೋದಿ
ಇಂದಿನಿಂದ ಚಂದ್ರ ಕುರಿತಾದ ಉಹಾಪೋಹಗಳು ಬದಲಾಗಲಿವೆ. ಇಂದಿನಿಂದ ಚಂದ್ರನ ಬಗೆಗಿರುವ ಕತೆಗಳು ಬದಲಾಗಲಿವೆ. ಕಾರಣ ಬಾಹ್ಯಾಕಾಶದಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಭಾರತ ಚಂದ್ರಯಾನದಲ್ಲಿ ಯಶಸ್ವಿಯಾಗಿದೆ. ಇದು ಕೇವಲ ಭಾರತದ ಯಶಸ್ಸು ಅಲ್ಲ, ನಿಮ್ಮೆಲ್ಲರ ಯಶಸ್ಸು ಎಂದು ತಿಳಿಸಿರು.
ಭಾರತ ಚಂದ್ರನ ಮೇಲಿದೆ. ಭಾರತೀಯ ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದು, ಈ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಚಂದ್ರಯಾನ 3 ಯಶಸ್ವಿಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಬಹುದೂರದಲ್ಲಿರುವ ಚಂದ್ರನ ತಲುಪುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದು ಭಾರತದ ಪ್ರತಿಯೊಬ್ಬರ ಯಶಸ್ಸು ಎಂದರು.
ಭಾರತದ ಚಂದ್ರಯಾನ 3 ಯಶಸ್ಸಿನಿಂದ ಉಳಿದ ದೇಶಗಳಿಗೆ ಅನುಕೂಲವಾಗಲಿದೆ. ಚಂದ್ರನ ಅಧ್ಯಯನಕ್ಕೆ ಈ ಯಶಸ್ಸು ನೆರವಾಗಲಿದೆ. ಇಸ್ರೋ ಪ್ರತಿಯೊಬ್ಬ ವಿಜ್ಞಾನಿಗಳಿಗೂ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
ಇಸ್ರೋ ಯಶಸ್ವಿ: ಅಧ್ಯಕ್ಷರಿಗೆ ಪ್ರಧಾನಿ ಕರೆ, ಅಭಿನಂದನೆ
ಇಂದು ಸಂಜೆ 6.4 ಗಂಟೆಗೆ ಚಂದ್ರಯಾನ 3 ಯಶಸ್ವಿಯಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿಯವರು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಕರೆ ಮಾಡಿದರು. ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಯಶಸ್ವಿ ಆಗುತ್ತಿದ್ದಂತೆ ಕರೆ ಮಾಡಿ ಪ್ರಧಾನಿ ಅಭಿನಂದನೆ ತಿಳಿಸಿದರು. ಕೆಲವು ಹೊತ್ತಿ ಚಂದ್ರಯಾನ 3 ಕುರಿತು ಮಾತನಾಡಿದರು.












Click it and Unblock the Notifications