Railway Stations Redevelopment: 28 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ-ಯಾವಾಗ ಹಾಗೂ ವೆಚ್ಚ ಎಷ್ಟು ಕೋಟಿ?
ಹುಬ್ಬಳ್ಳಿ, ಫೆಬ್ರವರಿ, 25: ಅಮೃತ್ ಭಾರತ ರೈಲ್ವೆ ಯೋಜನೆಯಡಿ ದೇಶದ ಈ ಮೂರು ರಾಜ್ಯಗಳಲ್ಲಿ 26 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆಯನ್ನು ಫೆಬ್ರವರಿ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುವಲ್ ಮೂಲಕ ನೆರವೇರಿಸಲಿದ್ದಾರೆ. ಹಾಗಾದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಕೋಟಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದ 28 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ನಿಲ್ದಾಣಗಳ ಪುನರಾಭಿವೃದ್ಧಿಗೆ ಅಂದಾಜು 704 ಕೋಟಿ ರೂಪಾಯಿ ವೆಚ್ಚ ಆಗಲಿದ ಎನ್ನುವ ಮಾಹಿತಿ ತಿಳಿದುಬಂದಿದೆ.

550 ನಿಲ್ದಾಣಗಳ ಅಭಿವೃದ್ಧಿ: ಪೂರ್ವ ರೈಲ್ವೇ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂರ್ವ ರೈಲ್ವೆ ಮ್ಯಾನೇಜರ್ ಮಿಲಿಂದ್ ಕೆ. ದೇವುಸ್ಕರ್, ಈ ಉಪಕ್ರಮವು 550 ಅಮೃತ್ ಭಾರತ್ ನಿಲ್ದಾಣಗಳನ್ನು ಪರಿವರ್ತಿಸುವ ಮತ್ತು ರೈಲ್ವೆ ನಿಲ್ದಾಣಗಳಾದ್ಯಂತ ಸೌಲಭ್ಯಗಳನ್ನು ಹೆಚ್ಚಿಸುವ ದೊಡ್ಡ ಯೋಜನೆಯ ಭಾಗವಾಗಿದೆ ಎಂದು ತಿಳಿಸಿದರು.
ವರ್ಚುವಲ್ ಮೂಲಕ, ಪಿಎಂ ಮೋದಿ 28 ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಬಾಂಡೆಲ್ 307 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅತ್ಯಂತ ಮಹತ್ವದ ಹೂಡಿಕೆಯನ್ನು ಪಡೆಯುತ್ತಿದೆ. ಪುನರಾಭಿವೃದ್ಧಿಗಾಗಿ ಮೀಸಲಿಟ್ಟ 28 ನಿಲ್ದಾಣಗಳಲ್ಲಿ 17 ಪಶ್ಚಿಮ ಬಂಗಾಳ, 7 ಜಾರ್ಖಂಡ್ ಮತ್ತು 4 ಬಿಹಾರದಲ್ಲಿವೆ. ನಿಲ್ದಾಣದ ಮೂಲಸೌಕರ್ಯವನ್ನು ಸುಧಾರಿಸುವುದರ ಮೇಲೆ ಮಾತ್ರವಲ್ಲದೆ ಪ್ರಯಾಣಿಕರಿಗೆ ಮತ್ತು ರಸ್ತೆ ಬಳಕೆದಾರರಿಗೆ ಸುರಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಲಾಗಿದೆ.
ಇನ್ನು ಪೂರ್ವ ರೈಲ್ವೆಯು ಕ್ರಾಸಿಂಗ್‌ಗಳನ್ನು ಅಂಡರ್‌ಪಾಸ್‌ಗಳೊಂದಿಗೆ ಸಕ್ರಿಯವಾಗಿ ಬದಲಾಯಿಸುತ್ತಿದೆ. ಈಗಾಗಲೇ 11 ಪೂರ್ಣಗೊಂಡಿದ್ದು, 123.52 ಕೋಟಿ ವೆಚ್ಚದಲ್ಲಿ ಹೆಚ್ಚುವರಿ 22 ಅಂಡರ್‌ಪಾಸ್‌ಗಳಿಗೆ ಯೋಜಿಸಲಾಗಿದೆ. ಮುಂಬರುವ ಈವೆಂಟ್‌ನಲ್ಲಿ ಪ್ರಧಾನಿ ಮೋದಿ ಅವರು ಈ ನಾಲ್ಕು ಅಂಡರ್‌ಪಾಸ್‌ಗಳಿಗೆ ಖುದ್ದಾಗಿ ಶಂಕುಸ್ಥಾಪನೆ ಮಾಡಲಿದ್ದು, ಪೂರ್ವ ರೈಲ್ವೇ ವ್ಯಾಪ್ತಿಯೊಳಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುರಕ್ಷತಾ ಕ್ರಮಗಳ ಬದ್ಧತೆಯನ್ನು ಪ್ರದರ್ಶಿಸಲಿದ್ದಾರೆ.












Click it and Unblock the Notifications