ಗುಜರಾತ್ ಚುನಾವಣೆಗೆ ಹೊಸ ಹವಾ ನೀಡಲಿದೆಯಾ ಮೋದಿ rally?!
ಅಹ್ಮದಾಬಾದ್, ನವೆಂಬರ್ 24: ಸದ್ಯಕ್ಕೆ ಎಲ್ಲರ ಕಣ್ಣೂ ನೆಟ್ಟಿರುವುದು ಗುಜರಾತ್ ವಿಧಾನಸಭಾ ಚುನಾವಣೆಯ ಮೇಲೆ. ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಈ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ ಅಸಲಿ ಆಟ ಇನ್ನು ಮೇಲೆ ಶುರುವಾಗತ್ತೆ!
ಹೌದು, ಚುನಾವಣೆಗೂ ಮುನ್ನ, ಅಂದರೆ ನವೆಂಬರ್ 27 ರಿಂದ ರಾಜ್ಯದಲ್ಲಿ 32 ರಿಂದ 35 rally ಗಳನ್ನು ಮೋದಿ ನಡೆಸಲಿದ್ದಾರೆ. ಇಲ್ಲಿನ ಸುಮಾರು 50,000 ಕ್ಕೂ ಹೆಚ್ಚು ಬೂತ್ ಗಳಲ್ಲಿ 'ಚಾಯ್ ಕೆ ಸಾಥ್' ಕಾರ್ಯಕ್ರಮ ಮತ್ತು 'ಜನ ಸಭಾ'ವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಖುದ್ದು ಹಾಜರಿರಲಿದ್ದಾರೆ.

ಸತತ ಗೆಲವು ಸಾಧಿಸಿ ಕಳೆದ 22 ವರ್ಷಗಳಿಂದ ಗುಜರಾತಿನ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ಆದರೆ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಪ್ರತಿಪಕ್ಷಗಳು ಬಿದ್ದಿವೆ. ಅದರಲ್ಲೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಗುಜರಾತಿನಲ್ಲಿ ನಿರಂತರ ಸಭೆಗಳನ್ನು ನಡೆಸಿ, ಜನರನ್ನು ಸೆಳೆವ ಪ್ರಯತ್ನ ಮಾಡುತ್ತಿದ್ದಾರೆ.
ಡಿಸೆಂಬರ್ 18 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಗುಜರಾತ್ ನ ಚುಕ್ಕಾಣಿ ಯಅರಿಗೆ ದಕ್ಕಲಿದೆ ಎಂಬುದು ದೃಢವಾಗಲಿದೆ.












Click it and Unblock the Notifications