ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿಗಳಿಂದ ಶೂಬಿಚ್ಚಿಸಿಕೊಳ್ಳುವ ರಾಜಕಾರಣಿಗಳಿಗೆ ಮೋದಿ ತೋರಿಸಿದ ಪಾಠ

ಪ್ರಧಾನಿ ನರೇಂದ್ರ ಮೋದಿ, ತಮ್ಮ ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದು ವಿಐಪಿ ಸಂಸ್ಕೃತಿ ಬೇಡ ಎನ್ನುವ ನಿಲುವಿಗೆ ಮಗುದೊಮ್ಮೆ ಮುನ್ನುಡಿ ಬರೆದಿದ್ದಾರೆ.

|
Google Oneindia Kannada News

ಕೇದಾರನಾಥ್, ಮೇ 4: ನಮ್ಮ ಕೆಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಂದ ಶೂಬಿಚ್ಚಿಸಿಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಇಂತಹ ಕೆಲವು ಅಧಿಕಾರದ ಅಮಲಿನವರಿಗೆ ಪ್ರಧಾನಿ ಮೋದಿ ಜನಪ್ರತಿನಿಧಿಗಳಾದ ನಾವು ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ.

ಹಿಂದೂ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೇದಾರನಾಥ್ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ, ತಮ್ಮ ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದು ವಿಐಪಿ ಸಂಸ್ಕೃತಿ ಬೇಡ ಎನ್ನುವ ನಿಲುವಿಗೆ ಮಗುದೊಮ್ಮೆ ಮುನ್ನುಡಿ ಬರೆದಿದ್ದಾರೆ.

Narendra Modi sets example, stops man from removing his shoes at Kedarnath Temple

ಪಂಚಧಾಮ್ ಕ್ಷೇತ್ರಗಳಲ್ಲೊಂದಾದ ಕೇದಾರನಾಥ್ ನಲ್ಲಿ ಪ್ರಧಾನಿ ಮೋದಿ ರುದ್ರಾಭಿಷೇಕ ಸೇವೆ ಮಾಡಲು ಹೊರಟಿದ್ದರು. ದೇವಾಲಯದ ಹೊರಗೆ ಶೂಬಿಚ್ಚಲು ಮೋದಿ ತಡಕಾಡುತ್ತಿದ್ದಾಗ ಅಲ್ಲಿದ್ದ ಸಹಾಯಕರೊಬ್ಬರು ಮಂಡಿಯೂರಿ ಮೋದಿ ಶೂಬಿಚ್ಚಲು ಮುಂದಾದರು.

ಕೂಡಲೇ, ಸಹಾಯಕನನ್ನು ತಡೆದು ಮೋದಿ, ಕೈಸನ್ನೆ ಮೂಲಕ ಆರೀತಿ ಮಾಡಬೇಡಿ ಎಂದು ತಾನೇ ಶೂಬಿಚ್ಚುಕೊಂಡು ದೇವಾಲಯದೊಳಗೆ ಪ್ರವೇಶಿಸಿದರು. ಈ ವಿಡಿಯೋ ಸಾಮಾಜಿಕ ತಾಣದಲ್ಲೀಗ ವೈರಲ್ ಆಗಿದೆ.

Narendra Modi sets example, stops man from removing his shoes at Kedarnath Temple

ಗೂಟದ ಕಾರಿಗೆ ಕೆಂಪುದೀಪ ಹಿಂದಕ್ಕೆ ಪಡೆದುಕೊಂಡಿದ್ದ ಮೋದಿ, ವಿಐಪಿ ಸಂಸ್ಕೃತಿ ಬೇಡ ಎನ್ನುವ ತನ್ನ ನಿಲುವಿಗೆ ತಾನೇ ಮುಂದೆ ನಿಂತು ಸಾಕ್ಷ್ಯ ಬರೆದರು.

28ವರ್ಷಗಳ ನಂತರ ಕೇದಾರನಾಥನಿಗೆ ರುದ್ರಾಭಿಷೇಕ ಮಾಡಿದ ಮೊದಲ ಪ್ರಧಾನಿ ಎನ್ನುವ ಹೆಗ್ಗಳಿಕೆಗೂ ಮೋದಿ ಪಾತ್ರರಾದರು. ವಿ ಪಿ ಸಿಂಗ್ ಪ್ರಧಾನಿಯಾಗಿದ್ದಾಗ ಅಭಿಷೇಕ ಮಾಡಿಸಿದ್ದರು. ಮಹಾದ್ವಾರ ತೆರೆಯುವ ಪರ್ವ ಕಾಲದಲ್ಲಿ ಹಾಜರಿದ್ದ ಮೋದಿ, ದೇವರ ಭೇಟಿಯ ನಂತರ ನೆರೆದಿದ್ದ ಸುಮಾರು 2500 ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

English summary
PM Narendra Modi on Wednesday (May 3) stopped a man from helping him remove his shoes at the Kedarnath Temple, where he has gone to perform ‘rudraabhishek’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X