67ನೇ ವಸಂತಕ್ಕೆ ಕಾಲಿಟ್ಟ ಮೋದಿಯನ್ನು ಹರಿಸಿದ ಅಮ್ಮ ಹೀರಾ

Posted By:
Subscribe to Oneindia Kannada

ಗಾಂಧಿನಗರ, ಸೆ. 17:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ 67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಗಾಂಧಿನಗರದಲ್ಲಿರುವ ತಾಯಿ ಮನೆಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ ಮೋದಿ ಅವರು ತಾಯಿ ಹೀರಾ ಬೇನ್ ಅವರ ಆಶೀರ್ವಾದ ಪಡೆದುಕೊಂಡರು.

ಈ ದಿನದಂದು ಬಹುತೇಕ ಸಮಯವನ್ನು ಅವರು ಗುಜರಾತಿನಲ್ಲಿ ಕಳೆಯಲಿದ್ದಾರೆ.ಹುಟ್ಟುಹಬ್ಬದ ಸಂದರ್ಭದಲ್ಲಿ ಮೋದಿ ಸರ್ದಾರ್ ಸರೋವರ್ ಆಣೆಕಟ್ಟನ್ನು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಎರಡನೇ ಅತ್ಯಂದ ದೊಡ್ಡ ಆಣೆಕಟ್ಟಾಗಿದೆ.

PM Modi seeks mother Heera's blessings on his Birthday

ನಂತರನರ್ಮದಾ ನದಿಗೆ ಪೂಜೆ ಅರ್ಚನೆ ಸಲ್ಲಿಸಲಿದ್ದಾರೆ. ಉದ್ಘಾಟನೆ ನಂತ್ರ ನಿರ್ಮಾಣ ಹಂತದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಪ್ರತಿಮೆ ವೀಕ್ಷಣೆ ಮಾಡಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನವನ್ನು ಕೇಂದ್ರ ಸರ್ಕಾರವು ಸೇವಾ ದಿವಸ್ ಹೆಸರಿನಲ್ಲಿ ಆಚರಣೆ ಮಾಡಲು ನಿರ್ಧರಿಸಿದೆ. ವಡೋದರಾದ ಡಬೊಯಿಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಅವರು ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi reached his home on Sunday for his 67th birthday, where he first reached Gandhinagar and take the blessing of his mother Heera.It is Prime Minister Narendra Modi's birthday today. Modi's 67th birthday will be observed as 'Seva Divas,' by the BJP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ