ವಿಜಯದಶಮಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ: ಸಿಜೆಪಿ ವಿರುದ್ಧ ಪರೋಕ್ಷವಾಗಿ ಗುಡುಗಿದರೇ, ದೇಶದ ಒಳಗಿನ ಶತ್ರು ಬಗ್ಗೆ ಹೇಳಿದ್ದೇನು
ವಿಜಯದಶಮಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು, ವಿಜಯದಶಮಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ದೇಶದ ಜನಗರು ಒಗ್ಗೂಡುವಂತೆ ಕರೆ ನೀಡಿದ್ದಾರೆ. ರಾಷ್ಟ್ರವು ತನ್ನ ಗೌರವ, ಘನತೆ, ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಳುಮಾಡುವ ಶಕ್ತಿಗಳ ವಿರುದ್ಧ ಒಗ್ಗಟ್ಟಾಗಿ ನಿಲ್ಲಬೇಕಿದೆ ಅಂತ ಕರೆ ನೀಡಿದ್ದಾರೆ. ದೇಶವು "ದೇಶದ ಶತ್ರುಗಳ ವಿರುದ್ಧ ಹೋರಾಡಬೇಕಾಗುತ್ತದೆ' ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾವಣನ ಪ್ರತಿಕೃತಿಯನ್ನು ಸಾಂಪ್ರದಾಯಿಕವಾಗಿ ದಹನ ಮಾಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ಸಮಾರಂಭವು ವಿಜಯದಶಮಿಯ ಭಾಗವಾಗಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ. ದೇಶದ ಗೌರವಕ್ಕೆ ಹಾನಿ ಮಾಡುವ ಶಕ್ತಿಗಳು, ಸಮಾಜವನ್ನು ವಿಭಜಿಸುವ ಜನರು, ನಮ್ಮ ಸಂಸ್ಕೃತಿಯನ್ನು ದ್ವೇಷಿಸುವವರ ಮನಸ್ಥಿತಿ ಇರುವವರು ದೇಶದ ಶತ್ರುಗಳು. ಇಂದು, ವಿಜಯ ದಶಮಿಯ ಶುಭ ಸಂದರ್ಭದಲ್ಲಿ, ನಾವು ನಮ್ಮ ಸಂಕಲ್ಪವನ್ನು ಪುನರಾವರ್ತಿಸಬೇಕಾಗುತ್ತದೆ. ನಾವು ಮಾ ಭಾರತಿಯ ಶತ್ರುಗಳನ್ನು ಗುರುತಿಸಬೇಕಾಗುತ್ತದೆ. ನಾವು ಅವರನ್ನು ಸೋಲಿಸಬೇಕಾಗುತ್ತದೆ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನಮ್ಮ ದೇಶದ ಪ್ರಾಚೀನ ಸಂತರು ನಮಗೆ, ಎಲ್ಲಾ ರಾಜಕೀಯ ಪಕ್ಷಗಳಿಗೆ, ಎಲ್ಲಾ ಸಂಸ್ಥೆಗಳಿಗೆ, ಶತ್ರುಗಳ ವಿರುದ್ಧ ಒಗ್ಗಟ್ಟಾಗಿರುವುದನ್ನು ಕಲಿಸಿದ್ದಾರೆ. ವಿಜಯದಶಮಿಯ ಈ ಪವಿತ್ರ ಸಂದರ್ಭದಲ್ಲಿ, ನಾನು ಶ್ರೀರಾಮ, ಜಾನಕಿ ಮತ್ತು ಬಜರಂಗಬಲಿಯ ಪಾದಗಳಿಗೆ ನಮಸ್ಕರಿಸುತ್ತೇನೆ. ಈ ಪವಿತ್ರ ವಾತಾವರಣದಲ್ಲಿ, ವಿಜಯದಶಮಿಯಂದು ದೇಶದ ಎಲ್ಲ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಶ್ರೀರಾಮನ ಆದರ್ಶದ ಬಗ್ಗೆ ಮೋದಿ ಮಾತು
ಇನ್ನು ಶ್ರೀರಾಮನ ಆದರ್ಶದನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಶ್ರೀರಾಮನ ಆದರ್ಶಗಳು ದೇಶವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಪ್ರಸ್ತುತವಾಗಿವೆ. ಜನರ ಕಲ್ಯಾಣವು ಮೊದಲು ಬರುವುದು ನ್ಯಾಯಯುತ ಮತ್ತು ಸಮಗ್ರ ಆಡಳಿತಕ್ಕೆ ರಾಮ ರಾಜ್ಯ'ದ ಕಲ್ಪನೆಯನ್ನು ಇನ್ನೂ ಮಾನದಂಡವಾಗಿ ನೋಡಲಾಗುತ್ತಿದೆ ಅಂತ ಹೇಳಿದ್ದಾರೆ.
ಅಲ್ಲದೆ ಮುಂದುವರಿ ಇಂದಿಗೂ ಉತ್ತಮ ಆಡಳಿತದ ಮಾನದಂಡವೆಂದು ಶ್ರೀರಾಮನ ಆದರ್ಶವನ್ನು ಪರಿಗಣಿಸಲಾಗಿದೆ. ರಾಮ ರಾಜ್ಯ, ಅಂದರೆ, ಯಾರ ವಿರುದ್ಧವೂ ತಾರತಮ್ಯವಿಲ್ಲದ, ಎಲ್ಲರಿಗೂ ನ್ಯಾಯ ಸಿಗುವ, ಸಮಾನ ಅವಕಾಶಗಳು ಲಭ್ಯವಿರುವ ಮತ್ತು ಅಧಿಕಾರದ ಉದ್ದೇಶ ಆಳುವುದಲ್ಲ, ಜನರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ಆಡಳಿತ; ಇದು ಶ್ರೀ ರಾಮನ ಆದರ್ಶ. ಆದ್ದರಿಂದ, ನಾವು ಯಾವಾಗಲೂ ಸಾರ್ವಜನಿಕರನ್ನು ಜನಾರ್ದನ ಮತ್ತು 'ನಾಗರಿಕ, ನೀವು ದೇವರು' ಎಂದು ಪರಿಗಣಿಸುವ ಮಂತ್ರದೊಂದಿಗೆ ಮುಂದುವರಿಯಬೇಕು. ನಾವು ಬಡವರು ಮತ್ತು ವಂಚಿತರ ಸೇವೆಗೆ ಆದ್ಯತೆ ನೀಡಬೇಕು ಅಂತಲೂ ಹೇಳಿದ್ದಾರೆ.
ವಿಜಯದಶಮಿ ಜನರಿಗೆ ಸತ್ಯ ಮತ್ತು ಮಾನವೀಯತೆಯೇ ಕೊನೆಯಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ನೀಡುತ್ತದೆ ಅಂತಲೂ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಮುಂದುವರಿದು ವಿಜಯದಶಮಿ ವಿಜಯದ ಹಬ್ಬ. ಈ ಹಬ್ಬವು ಎಷ್ಟೇ ಶಕ್ತಿಶಾಲಿ ಶತ್ರುವಾಗಿದ್ದರೂ, ನಾವು ಸತ್ಯ ಮತ್ತು ಮಾನವೀಯತೆಯೊಂದಿಗೆ ನಿಂತಾಗ, ಗೆಲುವು ಅಂತಿಮವಾಗಿ ನಮ್ಮದಾಗುತ್ತದೆ ಎಂದು ನಂಬುವ ಧೈರ್ಯವನ್ನು ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.


Click it and Unblock the Notifications
