Get Updates
Get notified of breaking news, exclusive insights, and must-see stories!

ಪಿ.ವಿ. ನರಸಿಂಹರಾವ್100ನೇ ಜನ್ಮದಿನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗೌರವ ನಮನ

ನವದೆಹಲಿ, ಜೂನ್ 28: ಮಾಜಿ ಪ್ರಧಾನ ಮಂತ್ರಿ ದಿವಂಗತ ನರಸಿಂಹರಾವ್ ಅವರ 100ನೇ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ''ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಜೀ ಅವರಿಗೆ 100ನೇ ಜನ್ಮದಿನದ ಶುಭಾಶಯಗಳು. ದೇಶದ ಅಭಿವೃದ್ಧಿ ಮತ್ತು ಏಳಿಗೆಗೆ ನರಸಿಂಹರಾವ್ ಅವರು ನೀಡಿರುವ ವಿಶಿಷ್ಟ ಮತ್ತು ವಿಸ್ತೃತ ಕೊಡುಗೆಗಳನ್ನು ಇಡೀ ದೇಶವೇ ಸ್ಮರಿಸುತ್ತಿದೆ ನೆನಪಿಸಿಕೊಳ್ಳುತ್ತಿದೆ. ಅವರು ಅಪಾರ ಜ್ಞಾನ ಮತ್ತು ಬುದ್ಧಿಶಕ್ತಿ ಹೊಂದಿದ್ದರು. ಅವರ ಬಗ್ಗೆ ಆಡಿರುವ ಮಾತುಗಳನ್ನು ನಾನು ಕಳೆದ ವರ್ಷ ಜೂನ್‌ನಲ್ಲಿ ನಡೆದ ರೇಡಿಯೊ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ (#MannKiBaat)ನಲ್ಲಿ ಹಂಚಿಕೊಂಡಿದ್ದೇನೆ.'' ಎಂದು ಮೋದಿ ಹೇಳಿದ್ದಾರೆ.

PM Modi pays tributes to former PM PV Narasimha Rao on his 100th birth anniversary

ಬಹುಮುಖ ವ್ಯಕ್ತಿತ್ವದ ಪಿವಿಎನ್: ನೆಹರು ಮನೆತನದ ಪ್ರಧಾನಿಗಳ ನಂತರ ಆಡಳಿತಾವಧಿಯ ಐದು ವರ್ಷಗಳನ್ನು ಪೂರೈಸಿದ ಮೊದಲ ಪ್ರಧಾನಿ ಪಾಮುಲಪರ್ತಿ ವೆಂಕಟ ನರಸಿಂಹರಾವ್‌ ದೇಶಕ್ಕೆ ಹೊಸ ಆರ್ಥಿಕ ನೀತಿ, ಶಿಕ್ಷಣ ನೀತಿ, ಉದ್ಯಮ ನೀತಿ ಪರಿಚಯಿಸಿದವರು. ನೆಹರು ಕುಟುಂಬಕ್ಕೆ ಮೊದಲಿನಿಂದಲೂ ನಿಷ್ಠರಾಗಿದ್ದ ಪಿವಿಎನ್‌, ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಅಧಿಕಾರವಧಿಯಲ್ಲಿ ಸಚಿವರಾಗಿ ಗೃಹ, ರಕ್ಷಣೆ ಮತ್ತಿತರ ಖಾತೆಗಳನ್ನು ನಿರ್ವಹಿಸಿದ್ದರು. ಬಹುಭಾಷಾ ಪಂಡಿತರಾಗಿದ್ದ ಇವರ ಆತ್ಮಕಥನ ಸಂಗ್ರಹಯೋಗ್ಯ ಕೃತಿ. ಕರೀಂನಗರ ಜಿಲ್ಲೆಯ ವಂಗಾರ ಎನ್ನುವ ಪುಟ್ಟ ಹಳ್ಳಿಯವರಾದ ರಾವ್‌ ತಮ್ಮ 83ರ ವಯಸ್ಸಿನಲ್ಲಿ ಮೂವರು ಗಂಡುಮಕ್ಕಳು ಮತ್ತು ಐವರು ಪುತ್ರಿಯರನ್ನು ಅಗಲಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+