ಬಾತ್ ರೂಂಗೆ ಕಳ್ಳನೋಟ ಬೀರುವುದೇ ಮೋದಿಗೆ ಕೆಲಸ: ರಾಹುಲ್ ವಾಗ್ದಾಳಿ

Posted By:
Subscribe to Oneindia Kannada

ಲಕ್ನೋ, ಫೆ 11: ಜಾತಕ, ಜನ್ಮ ಜಾಲಾಡಿಸುತ್ತೇನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ತೀಕ್ಷ್ಣವಾಗಿ ಹರಿಹಾಯ್ದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿಜೀಗೆ ಇನ್ನೊಬ್ಬರ ಮನೆಯ ಬಾತ್ ರೂಂನಲ್ಲಿ ಕಳ್ಳನೋಟ ಬೀರುವುದೇ ಕೆಲಸ ಎಂದಿದ್ದಾರೆ.

ನಗರದಲ್ಲಿ ಶನಿವಾರ (ಫೆ 11) ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ರಾಹುಲ್, ಬಾತ್ ರೂಂನಲ್ಲಿ ಮನಮೋಹನ್ ಸಿಂಗ್ ರೈನ್ ಕೋಟ್ ಹಾಕಿಕೊಂಡು ಸ್ನಾನ ಮಾಡುತ್ತಾರೆ ಎನ್ನುವ ಮೋದಿ ಟೀಕಿಸಿದ್ದನ್ನು ಉಲ್ಲೇಖಿಸಿ ಮೇಲಿನ ಹೇಳಿಕೆ ನೀಡಿದ್ದಾರೆ. (ಜನ್ಮ ಜಾಲಾಡಿಸುತ್ತೇನೆ, ಮೋದಿ ಎಚ್ಚರಿಕೆ)

 PM Modi likes peeping into others bathrooms, Rahul Gandhi

ಹರಿದ್ವಾರದಲ್ಲಿ ಮೋದಿ ನೀಡಿದ ಭಾಷಣವನ್ನು ಪ್ರಸ್ತಾವಿಸಿದ ರಾಹುಲ್, ನನಗಿರುವ ಮಾಹಿತಿಯ ಪ್ರಕಾರ ಮೋದಿಗೆ ಜಾತಕ, ಭವಿಷ್ಯ ಓದುವುದೆಂದರೆ ಇಷ್ಟ. ಗೂಗಲ್ ಮೂಲಕ ಇನ್ನೊಬ್ಬರ ಮನೆಯ ಬಾತ್ ರೂಂನೊಳಕ್ಕೆ ಕಳ್ಳನೋಟ ಬೀರುತ್ತಾರೆಂದು ರಾಹುಲ್ ಲೇವಡಿ ಮಾಡಿದ್ದಾರೆ.

ಪ್ರಧಾನಿಯಾಗಿ ಮೋದಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಮಯಾವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿ ಮಾಡುವುದು ಇದೇ (ಬಾತ್ ರೂಂಗೆ ಕಳ್ಳನೋಟ) ಕೆಲಸವನ್ನು ಎಂದು ಕಾಂಗ್ರೆಸ್ ಯುವರಾಜರು ವ್ಯಂಗ್ಯವಾಡಿದ್ದಾರೆ.

ಕೆಲವೊಬ್ಬರು ಮನ್ ಕೀ ಬಾತ್ ಮಾಡುತ್ತಾರೆ, ಕಾಮ್ ಕೀ ಬಾತ್ ಮಾಡುವುದಿಲ್ಲ ಎಂದು ಆಕಾಶವಾಣಿಯಲ್ಲಿ ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮದ ಬಗ್ಗೆ ಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಜನ್ಮ ಜಾಲಾಡಿಸುತ್ತೇನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಅಖಿಲೇಶ್, ಪ್ರಧಾನಿಯಾದವರಿಗೆ ತಾಳ್ಮೆ ಮುಖ್ಯ, ಅವರು ಇಷ್ಟು ನರ್ವಸ್ ಆಗಬಾರದೆಂದು ಪ್ರಧಾನಿ ಮೋದಿಗೆ ವ್ಯಂಗ್ಯ ಮಿಶ್ರಿತ ಸಲಹೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi likes peeping into others bathrooms, says AICC Vice President Rahul Gandhi in Lucknow on Feb 11.
Please Wait while comments are loading...