ಪ್ರಧಾನಿ ಮೋದಿ 'ಕಾಗದದ ಹುಲಿ' ಎಂದ ಕಾಂಗ್ರೆಸ್

ನವದೆಹಲಿ, ಜುಲೈ 13: ಇರಾನಿನಿಂದ ತೈಲ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿರುವುದನ್ನು ಟೀಕಿಸಿರುವ ಕಾಂಗ್ರೆಸ್, 'ನರೇಂದ್ರ ಮೋದಿ ಕಾಗದದ ಹುಲಿ' ಎಂದು ಕಟುವಾಗಿ ಟೀಕಿಸಿದೆ.

"ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿರುವುದು ಮೋದಿಯವರ ಗೊಂದಲಮಯ ವಿದೇಶಿ ನೀತಿಗೆ ಒಂದು ಅತ್ಯುತ್ತಮ ಉದಾಹರಣೆ. ಅಮೆರಿಕದ ಒತ್ತಡಕ್ಕೆ ಮಣಿದು, ಭಾರತ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದೆ. ಇದರಿಂದಾಗಿ ಇಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕದ ಒಳಿತಿಗಾಗಿ ಮೋದಿ, ಭಾರತೀಯರ ಹಿತವನ್ನು ಬಲಿ ಕೊಡುತ್ತಿದ್ದಾರೆ" ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್, 'ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಮೋದಿಯವರಿಗೆ ತಿಳಿದಿರಬೇಕಿತ್ತು. ಅಮೆರಿಕಕ್ಕೆ ಆದ್ಯತೆ ನೀಡಿ ಭಾರತೀಯರ ಮೇಲೆ ತೈಲ ಬೆಲೆಯ ಹೊರೆ ಹೊರುತ್ತಿರುವುದು ಸರಿಯಲ್ಲ' ಎಂದಿದ್ದಾರೆ.

PM Modi is a paper tiger says Congress

ಕಳೆದ ಜೂನ್ ತಿಂಗಳಿನಿಂದ ತೈಲವನ್ನು ಇರಾನಿನಿಂದ ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿ ಭಾರತ ಸಾಕಷ್ಟು ಕಡಿವಾಣ ಹಾಕಿದೆ. ಇದಕ್ಕೆ ಅಮೆರಿಕದ ಒಯತ್ತಡವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+