NaMo Bharat Train Inauguration: ಭಾರತದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ಆರಂಭಿಸಿದ ಪ್ರಧಾನಿ ಮೋದಿ

ಲಕ್ನೋ ಅಕ್ಟೋಬರ್ 20: ಭಾರತದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ 'ನಮೋ ಭಾರತ್'ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದಲ್ಲಿ ಚಾಲನೆ ನೀಡಿದರು. ಉತ್ತರ ಪ್ರದೇಶದ ಸಾಹಿಬಾಬಾದ್ ಮತ್ತು ದುಹೈ ಡಿಪೋ ನಿಲ್ದಾಣಗಳನ್ನು ಸಂಪರ್ಕಿಸುವ ರ್‍ಯಾಪಿಡ್ ರೈಲನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.

ಇದರೊಂದಿಗೆ ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ರೈಲು ಸೇವೆ (ಆರ್‌ಆರ್‌ಟಿಎಸ್) ಪ್ರಾರಂಭವಾಗಿದೆ. 'ನಮೋ ಭಾರತ್' ಒಂದು ಪರಿವರ್ತನೆಯ ಪ್ರಾದೇಶಿಕ ಅಭಿವೃದ್ಧಿ ಉಪಕ್ರಮವಾಗಿದೆ. ಇದು ಇಂಟರ್‌ಸಿಟಿ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿದೆ. ಉದ್ಘಾಟನೆ ಬಳಿಕ ಶಾಲಾ ಮಕ್ಕಳು ಮತ್ತು ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ರೈಲಿನಲ್ಲಿ ಸಂಚಾರ ಮಾಡುವ ಮೂಲಕ ಸಂವಾದ ನಡೆಸಿದರು.

pm-modi-inaugurates-namo-bharat-train

ರೈಲು ಸೇವೆಯ ಹೆಸರನ್ನು ನಿನ್ನೆ RapidX ನಿಂದ NaMo Bharat ಗೆ ಬದಲಾಯಿಸಲಾಗಿದೆ. ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವಿನ ಸಂಚರಿಸುವ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಹೀಗೆ ಐದು ನಿಲ್ದಾಣಗಳನ್ನು ಹೊಂದಿದೆ. ಉದ್ಘಾಟನೆಯ ಒಂದು ದಿನದ ನಂತರ ಅಂದರೆ ನಾಳೆಯಿಂದ ಪ್ರಯಾಣಿಕರು ಇದರಲ್ಲಿ ಪ್ರಯಾಣ ಮಾಡಬಹುದು.

RRTS ರೈಲುಗಳು ಪ್ರತಿ ಸೀಟಿನಲ್ಲಿ ಓವರ್‌ಹೆಡ್ ಸ್ಟೋರೇಜ್, ವೈ-ಫೈ ಮತ್ತು ಚಾರ್ಜಿಂಗ್ ಆಯ್ಕೆಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂಲಕ ಪ್ರಯಾಣಿಕರ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ ವಿಶಾಲವಾದ ಆಸನಗಳು, ಕೋಟ್ ಹ್ಯಾಂಗರ್‌ಗಳೊಂದಿಗೆ ಪ್ರೀಮಿಯಂ-ಕ್ಲಾಸ್ ಇರುತ್ತದೆ. ಸಿಸಿಟಿವಿ ಕ್ಯಾಮೆರಾಗಳು, ತುರ್ತು ಬಾಗಿಲು ತೆರೆಯುವ ಕಾರ್ಯವಿಧಾನ ಮತ್ತು ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಲು ಬಟನ್ ಈ ರೈಲಿನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸೇರಿವೆ.

pm-modi-inaugurates-namo-bharat-train

ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್ ಅನ್ನು 30,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ದೆಹಲಿಯಿಂದ ಮೀರತ್‌ಗೆ ಒಂದು ಗಂಟೆಗಿಂತ ಕಡಿಮೆ ಪ್ರಯಾಣದ ಸಮಯದಲ್ಲಿ ಗಾಜಿಯಾಬಾದ್, ಮುರಾದ್‌ನಗರ ಮತ್ತು ಮೋದಿನಗರದ ನಗರ ಕೇಂದ್ರಗಳ ಮೂಲಕ ಸಂಪರ್ಕಿಸುತ್ತದೆ.

ಈ ಕುರಿತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಎಕ್ಸ್ ಅಧಿಕೃತ ಹ್ಯಾಂಡಲ್ ಪೋಸ್ಟ್ ಮಾಡಿದ್ದು, "ಭಾರತದ ಮೊದಲ ಪ್ರಾದೇಶಿಕ ರಾಪಿಡ್ ರೈಲು ನಮೋ ಭಾರತ್ ಗಂಟೆಗೆ 160 ರಿಂದ 180 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಸ್ಥಳೀಯವಾಗಿ ತಯಾರಿಸಲ್ಪಟ್ಟಿದೆ" ಎಂದು ಮಾಹಿತಿ ನೀಡಿದೆ.

ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಅವರು ಮಾರ್ಚ್ 8, 2019 ರಂದು ಅಡಿಪಾಯ ಹಾಕಿದ್ದರು. ಹೊಸ ವಿಶ್ವ ದರ್ಜೆಯ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣದ ಮೂಲಕ ದೇಶದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಪರಿವರ್ತಿಸುವ ಮೋದಿ ಅವರ ದೃಷ್ಟಿಗೆ ಅನುಗುಣವಾಗಿ, ಆರ್‌ಆರ್‌ಟಿಎಸ್ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 21 ರಂದು ಪ್ರಯಾಣಿಕರಿಗೆ ತೆರೆಯಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+