ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ, ಕರ್ನಾಟಕದವು ಎಷ್ಟು?
ನವದೆಹಲಿ, ಬೆಂಗಳೂರು, ಆಗಸ್ಟ್ 06: ದೇಶಾದ್ಯಂತ ರೈಲುಗಳು ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ವಿವಿಧ ರಾಜ್ಯಗಳಲ್ಲಿ ನೂರಾರು ರೈಲು ನಿಲ್ದಾಣಗಳು ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 508 ನಿಲ್ದಾಣಗಳ ನವೀಕರಣದಂತಹ ಅಭಿವೃದ್ಧಿ ಕಾರ್ಯ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಪಶ್ಚಿಮ ಬಂಗಾಳದಲ್ಲಿ 37, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಮಧ್ಯಪ್ರದೇಶದಲ್ಲಿ 34, ಒಡಿಶಾದಲ್ಲಿ 25, ಅಸ್ಸಾಂನಲ್ಲಿ 32, ಪಂಜಾಬ್‌ನಲ್ಲಿ 22 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಈ ಎಲ್ಲ ರೈಲು ನಿಲ್ದಾಣಗಳು ಅಭಿವೃದ್ಧಿಗೊಳ್ಳಲಿವೆ. ಆಧುನಿಕ ವ್ಯವಸ್ಥೆಯಡಿ ಈ ರೈಲುಗಳು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಿವೆ.

ಇನ್ನೂ ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18 ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯಕ್ಕೆ ಭಾನುವಾರ ಹಸಿರು ನಿಶಾನೆ ಸಿಕ್ಕಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಮಾಹಿತಿ ನೀಡಿದೆ.
ಹರಿಯಾಣದಲ್ಲಿ 15 ನಿಲ್ದಾಣ, ಕರ್ನಾಟಕದಲ್ಲಿ?
ಭಾರತೀಯ ರೈಲ್ವೆ ಸಚಿವಾಲಯವು ಒಟ್ಟು ₹ 24,470 ಕೋಟಿ ವೆಚ್ಚದಲ್ಲಿ ಈ ಒಟ್ಟು 500ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಮರುಅಭಿವೃದ್ಧಿ ಆಗಲಿವೆ. ಆಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಒದಗಿಸಲಿವೆ. ಜೊತೆಗೆ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಂಚಾರ, ಅಂತರ-ಮಾದರಿ ಏಕೀಕರಣ ಮತ್ತು ಪ್ರಯಾಣಿಕರ ಮಾರ್ಗದರ್ಶನಕ್ಕಾಗಿ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸೂಚನಾ ಫಲಕಗಳ ಅಳವಡಿಕೆ ಇರಲಿದೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ವಿಶೇಷವೇನೆಂದರೆ ಇಷ್ಟು ರೈಲು ನಿಲ್ದಾಣಗಳ ಕಟ್ಟಡಗಳು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಆಧಾರಿತವಾಗಿ ಅಭಿವೃದ್ಧಿಗೊಳ್ಳಲಿವೆ ಎಂದು ಸರ್ಕಾರ ಹೇಳಿದೆ.

ಅತ್ಯಾಧುನಿಕ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಕುರಿತು ಪ್ರಧಾನಿ ಮೋದಿ ಅವರು ಆದ್ಯತೆ ನೀಡುತ್ತಿದ್ದಾರೆ. ಲಕ್ಷಾಂತರ ಪ್ರಯಾಣಿಕರಿಗೆ ರೈಲು ವಲಯವು ಆದ್ಯತೆಯ ಸಾರಿಗೆ ವಿಧಾನವಾಗಿದೆ. ಹೀಗಾಗಿ ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲು ಪ್ರಾಮುಖ್ಯತೆಗೆ ನೀಡಲಾಗುತ್ತಿದೆ ಎಂದು ಪಿಎಂಒ ತಿಳಿಸಿದೆ.
ಸದ್ಯ ದೇಶಾದ್ಯಂತ ಕೇಂದ್ರ ಸರ್ಕಾರವು 'ಅಮೃತ್ ಭಾರತ್ ಸ್ಟೇಷನ್ ಸ್ಕೀಮ್' ಸೂಕ್ತ ಮಾರ್ಗದರ್ಶನ ಪಡೆದು 1,309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಮುಂದಾಗಿದೆ. ಸದ್ಯ ಈ ಕೆಲಸ ಆರಂಭವಾಗಿದೆ. ಈ ಯೋಜನೆಯ ಭಾಗವಾಗಿ, 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹಂತ ಹಂತವಾಗಿ ಉದ್ದೇಶಿತ ಎಲ್ಲ ರೈಲು ನಿಲ್ದಾಣಗಳು ಅಭಿವೃದ್ಧಿಗೊಳ್ಳಲಿವೆ.












Click it and Unblock the Notifications