ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯೋಮಿತಿ ಬಗ್ಗೆ ಪ್ರಧಾನಿ ಮೋದಿ ಸುಳಿವು!

ನವದೆಹಲಿ, ಆಗಸ್ಟ್.16: ಹೆಣ್ಣುಮಕ್ಕಳ ಮದುವೆಗೆ ಕನಿಷ್ಛ ವಯೋಮಿತಿಯನ್ನು 18ಕ್ಕೆ ನಿಗದಿಗೊಳಿಸಲಾಗಿದ್ದು, ಇದನ್ನು ಪರಿಷ್ಕರಿಸುವ ಸುಳಿವು ಸಿಕ್ಕಿದೆ. ದೇಶದಲ್ಲಿ ಹೆಣ್ಣುಮಕ್ಕಳ ಮದುವೆಗೆ ಸರಿಯಾದ ವಯೋಮಿತಿ ಎಷ್ಟಿರಬೇಕು ಎನ್ನುವುದರ ಕುರಿತು ಸಮೀಕ್ಷೆಗೆ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಹೊಸ ಸಮಿತಿಯ ರಚನೆಯ ಬಗ್ಗೆ ಸುಳಿವು ನೀಡಿದ್ದಾರೆ. ಹೆಣ್ಣುಮಕ್ಕಳ ಮದುವೆಯ ವಯೋಮಿತಿ ಎಷ್ಟಿದ್ದರೆ ಸೂಕ್ತ ಎನ್ನುವುದರ ಕುರಿತು ಶೀಘ್ರದಲ್ಲಿ ಸಮಿತಿಯು ವರದಿ ಸಲ್ಲಿಸಲಿದೆ. ಈ ಸಮಿತಿಯ ವರದಿ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.

ಭಾರತದಲ್ಲಿ ಸದ್ಯದ ಮಟ್ಟಿಗೆ ಗಂಡು ಮಕ್ಕಳ ಮದುವೆ ವಯೋಮಿತಿ 21 ಇದ್ದರೆ ಹೆಣ್ಣುಮಕ್ಕಳಿಗೆ ಕನಿಷ್ಠ 18ರ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ. ಈ ಹಿಂದೆ ಶಾರದಾ ಕಾಯ್ದೆ-1929 ಅಡಿಯಲ್ಲಿ 1978ಕ್ಕೂ ಮೊದಲು ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15 ರಿಂದ 18ಕ್ಕೆ ಹೆಚ್ಚಿಸಲಾಗಿತ್ತು. ಹೆಣ್ಣು ಮಕ್ಕಳಿಗೆ 18 ಹಾಗೂ ಗಂಡು ಮಕ್ಕಳಿಗೆ ಮದುವೆ ವಯಸ್ಸನ್ನು 21ಕ್ಕೆ ನಿಗದಿಗೊಳಿಸಲಾಗಿತ್ತು. ಇದೀಗ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಕೂಡಾ 21ಕ್ಕೆ ಹೆಚ್ಚಿಸಲು ಸರ್ಕಾರವು ಮುಂದಾಗಿದೆ.

18 ರಿಂದ 21ಕ್ಕೆ ಹಣ್ಣುಮಕ್ಕಳ ವಯೋಮಿತೆ ಹೆಚ್ಚಿಸಲು ಚಿಂತನೆ

18 ರಿಂದ 21ಕ್ಕೆ ಹಣ್ಣುಮಕ್ಕಳ ವಯೋಮಿತೆ ಹೆಚ್ಚಿಸಲು ಚಿಂತನೆ

ದೇಶದಲ್ಲಿ ಅಪೌಷ್ಠಿಕತೆ ಮತ್ತು ತಾಯಿಯ ಮರಣ ಅನುಪಾತವನ್ನು ತಗ್ಗಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಗತ್ಯ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಹೀಗಾಗಿ ಹೆಣ್ಣುಮಕ್ಕಳ ಮದುವೆ ವಯೋಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ.

18 ರಿಂಗ 21 ವರ್ಷದೊಳಗೆ ಶೇ.56ರಷ್ಟು ಹೆಣ್ಣುಮಕ್ಕಳಿಗೆ ಮದುವೆ

18 ರಿಂಗ 21 ವರ್ಷದೊಳಗೆ ಶೇ.56ರಷ್ಟು ಹೆಣ್ಣುಮಕ್ಕಳಿಗೆ ಮದುವೆ

2011ರ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶೇ.25.5ರಷ್ಟು ಹೆಣ್ಣುಮಕ್ಕಳಿಗೆ 18 ವರ್ಷದೊಳಗೆ ಮದುವೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಈ ಪ್ರಮಾಣವು ಶೇ.12.1ರಷ್ಟಿದೆ. 18 ರಿಂದ 19ನೇ ವಯಸ್ಸಿನೊಳಗೆ ಗ್ರಾಮೀಣ ಭಾಗದಲ್ಲಿ ಶೇ.10.6ರಷ್ಟು ಮತ್ತು ನಗರ ಭಾಗದಲ್ಲಿ ಶೇ.3.1ರಷ್ಟು ಹೆಣ್ಣುಮಕ್ಕಳಿಗೆ ವಿವಾಹ ಮಾಡಲಾಗುತ್ತಿದೆ. ಇನ್ನು, 20 ರಿಂದ 21ನೇ ವಯಸ್ಸಿನಲ್ಲಿ ಗ್ರಾಮೀಣ ಪ್ರದೇಶದ ಶೇ.4.9 ಮತ್ತು ನಗರ ಪ್ರದೇಶಗಳಲ್ಲಿ ಶೇ.2.6ರಷ್ಟು ಹೆಣ್ಣುಮಕ್ಕಳಿಗೆ ವಿವಾಹ ಮಾಡಲಾಗುತ್ತಿದೆ. ಒಟ್ಟಾರೆ 18 ರಿಂದ 21ನೇ ವಯಸ್ಸಿನಲ್ಲಿ ಗ್ರಾಮೀಣ ಪ್ರದೇಶದ ಶೇ.15.5 ಮತ್ತು ನಗರ ಪ್ರದೇಶದಲ್ಲಿ ಶೇ.5.7ರಷ್ಟು ಸೇರಿದಂತೆ ಒಟ್ಟು ಶೇ.21.20ರಷ್ಟು ಹೆಣ್ಣುಮಕ್ಕಳಿಗೆ ಮದುವೆಗಳು ನಡೆದಿರುವ ಬಗ್ಗೆ ವರದಿ ಹೇಳಿದೆ.

ಹೆಣ್ಣುಮಕ್ಕಳ ಮದುವೆ ವಯೋಮಿತಿ ಯಾವ ದೇಶದಲ್ಲಿ ಎಷ್ಟು?

ಹೆಣ್ಣುಮಕ್ಕಳ ಮದುವೆ ವಯೋಮಿತಿ ಯಾವ ದೇಶದಲ್ಲಿ ಎಷ್ಟು?

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳಿಗೆ ಮದುವೆಯ ವಯಸ್ಸಿನ ಮಿತಿ ಒಂದೊಂದು ರೀತಿಯಲ್ಲಿದೆ. ಸೌದಿ ಅರೇಬಿಯಾ, ಯೆಮನ್, ದಿಜ್ಬುತ್ ನಲ್ಲಿ ಯಾವುದೇ ವಯೋಮಿತಿಯನ್ನು ನಿಗದಿಗೊಳಿಸಿಲ್ಲ. ಸುಡಾನ್, ಲೆಬನಾನ್ ನಲ್ಲಿ 9 ವರ್ಷವಾಗಿದ್ದರೆ, ಇರಾನ್ ನಲ್ಲಿ ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿ 13 ವರ್ಷವಿದೆ. ಭಾರತವೂ ಸೇರಿದಂತೆ ವಿಶ್ವದ 143 ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯೋಮಿತಿ 18 ವರ್ಷವಿದ್ದರೆ, ಇಂಡೋನೆಷ್ಯಾ, ಮಲೇಶಿಯಾ, ನೈಜಿರಿಯಾ ಸೇರಿದಂತೆ 20 ರಾಷ್ಟ್ರಗಳಲ್ಲಿ ಕನಿಷ್ಠ ವಯೋಮಿತಿ 21 ವರ್ಷವಿದೆ.

ಮಾತೃತ್ವದ ವಯಸ್ಸು, ತಾಯಿ ಮರಣ ಪ್ರಮಾಣ ತಗ್ಗಿಸಲು ಕ್ರಮ

ಮಾತೃತ್ವದ ವಯಸ್ಸು, ತಾಯಿ ಮರಣ ಪ್ರಮಾಣ ತಗ್ಗಿಸಲು ಕ್ರಮ

ಮಾತೃತ್ವದ ವಯಸ್ಸು, ತಾಯಿಯ ಮರಣ ಪ್ರಮಾಣ ಕಡಿಮೆಗೊಳಿಸುವುದು, ಪೌಷ್ಠಿಕಾಂಶದ ಮಟ್ಟ ಸುಧಾರಣೆ ಹಾಗೂ ಸಂಬಂಧಿತ ಸಮಸ್ಯೆಗಳನ್ನು ಪರೀಕ್ಷಿಸುತ್ತದೆ. ದೇಶವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ಈ ಹಿನ್ನೆಲೆ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾಭಿವೃದ್ಧಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕಾಗುತ್ತದೆ. ತಾಯಿಯ ಮರಣ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಮಾತೃತ್ವದ ವಯೋಮಾನವನ್ನು ಗಮನದಲ್ಲಿ ಇಟ್ಟುಕೊಂಡು ಮದುವೆ ವಯಸ್ಸನ್ನು ನಿಗದಿಗೊಳಿಸಬೇಕಿದೆ. ಈ ಬಗ್ಗೆ ಅಧ್ಯಯನ ನಡೆಸಿ ಶಿಫಾರಸ್ಸುಗಳನ್ನು ಸಲ್ಲಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗುತ್ತದೆ ಎಂದು ಈ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+