Lok Sabha 2024: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಗ್ಯಾರಂಟಿ?
ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 3ನೇ ಸರ್ಕಾರದ ಆಡಳಿತ ನೋಡಲು ಬೆಂಬಲಿಗರು ಕಾಯುತ್ತಿದ್ದಾರೆ. ಹೀಗಿದ್ದಾಗಲೇ ಹೊಸ ಚುನಾವಣೆ ಸರ್ವೆ ಒಂದು ಹೊರಬಿದ್ದಿದ್ದು, 2024ರ ಲೋಕಸಭೆ ಚುನಾವಣೆ ಅಖಾಡದಲ್ಲಿ ಗೆಲುವು ಯಾರಿಗೆ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗಾದರೆ ಕೇಂದ್ರದಲ್ಲಿ ಸರ್ಕಾರವನ್ನ ರಚನೆ ಮಾಡೋದು ಯಾರು? ಬಿಜೆಪಿ ಅಥವಾ ಕಾಂಗ್ರೆಸ್? ಬನ್ನಿ ತಿಳಿಯೋಣ.
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಅವರ ಸರ್ಕಾರ ಈಗಾಗಲೇ 10 ವರ್ಷ ಪೂರೈಸಿದ್ದು ಇನ್ನೇನು ಮತ್ತೊಂದು ದಶಕಕ್ಕೆ ಕಾಲಿಡುತ್ತಿದೆ. ಹೀಗಾಗಿಯೇ 2024ರ ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 'ಎನ್‌ಡಿಎ' ಒಕ್ಕೂಟವು ಗೆಲುವಿಗೆ ತಂತ್ರ ರೂಪಿಸುತ್ತಿದ್ದರೆ, ಮತ್ತೊಂದು ಕಡೆ ವಿರೋಧ ಪಕ್ಷಗಳು ಇಂಡಿಯಾ ಒಕ್ಕೂಟ ರಚಿಸಿದ್ದವು. ಹೀಗಾಗಿ ಎರಡೂ ಕಡೆ ಜಿದ್ದಾಜಿದ್ದಿ ಜೋರಾಗಿರುವ ಸಮಯದಲ್ಲೇ, 2024ರ ಲೋಕಸಭೆಯ ಚುನಾವಣಾ ಸಮೀಕ್ಷೆ ಸಂಚಲನ ಸೃಷ್ಟಿಸಿದೆ. ಹಾಗಾದರೆ ಈ ಸಮೀಕ್ಷೆ ಪ್ರಕಾರ 2024ರಲ್ಲಿ ಲೋಕಸಭೆ ಚುನಾವಣೆ ಗೆಲ್ಲೋದು ಯಾರು? ಮುಂದೆ ಓದಿ.

ಮತ್ತೊಮ್ಮೆ ಮೋದಿ ಸರ್ಕಾರ ಗ್ಯಾರಂಟಿ!
ಹೌದು, ಈಗ ಹೊರಬಿದ್ದ 'ಟೈಮ್ಸ್ ನೌ ಇಟಿಜಿ' ಸಮೀಕ್ಷೆ ಪ್ರಕಾರ 2024ರ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಕಾಣಲಿದೆಯಂತೆ. ಬಿಜೆಪಿ ನೇತೃತ್ವದಲ್ಲಿ, 2024 ಲೋಕಸಭೆ ಎಲೆಕ್ಷನ್ ಎನ್‌ಡಿಎ ಒಕ್ಕೂಟದ ಪಾಲಾಗಾಲಿದೆ. ಹಾಗಾದ್ರೆ ಯಾರಿಗೆ ಎಷ್ಟೆಷ್ಟು ಸ್ಥಾನ ಸಿಗಬಹುದು? ಬಿಜೆಪಿಗೆ ಎಷ್ಟು ಸ್ಥಾನ ಸಿಗಲಿದೆ? ಹಾಗೇ ಕಾಂಗ್ರೆಸ್ ಎಷ್ಟು ಸ್ಥಾನದಲ್ಲಿ ಗೆಲುವು ಸಾಧಿಸುತ್ತೆ? ಪ್ರಧಾನಿ ಮೋದಿ ಅವರ ಸರ್ಕಾರಕ್ಕೆ ಮತ್ತೊಮ್ಮೆ ಪೂರ್ಣ ಬಹುಮತ ಸಿಗಲಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಬನ್ನಿ ತಿಳಿಯೋಣ.
ಬಿಜೆಪಿಗೆ ಸಿಗಲಿದೆ ಮ್ಯಾಜಿಕ್ ನಂಬರ್!
ಅಂದಹಾಗೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬರೋಬ್ಬರಿ 323 ಸ್ಥಾನ ಸಿಗಲಿದೆಯಂತೆ. ಈ ಪೈಕಿ ಬಿಜೆಪಿ ಪಕ್ಷವೇ ಸ್ವತಂತ್ರವಾಗಿ ಭರ್ಜರಿ 308 ರಿಂದ 328 ಸ್ಥಾನಗಳನ್ನ ಗೆಲ್ಲಬಹುದು ಅಂತಾ ಈಗ 'ಟೈಮ್ಸ್ ನೌ ಇಟಿಜಿ' ಸಮೀಕ್ಷೆ 2024ರ ಲೋಕಸಭೆ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದೆ. ಆದ್ರೆ ಎನ್‌ಡಿಎ ವಿರುದ್ಧ ಇರುವ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ (INDIA) ಕೇವಲ 163 ಸ್ಥಾನ ಗೆಲ್ಲಲಿದೆ ಎನ್ನಲಾಗ್ತಿದೆ. ಈ ಮೂಲಕ ಭರ್ಜರಿ ಕುತೂಹಲ ಮೂಡಿದೆ.

ಭರ್ಜರಿ ಫೈಟಿಂಗ್ ಗ್ಯಾರಂಟಿ!
ಹೀಗೆ ಇಡೀ ಜಗತ್ತೇ ಕಾಯುತ್ತಿರುವ ಭಾರತ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹೊತ್ತಲ್ಲಿ ಸಮೀಕ್ಷೆ ರಿಪೋರ್ಟ್ ರಿವೀಲ್ ಆಗಿ ಸಂಚಲನ ಸೃಷ್ಟಿಸಿದೆ. ಪಿಎಂ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಪಕ್ಕಾ ಆಗಿದೆ. ಎನ್‌ಡಿಎ (NDA) ಮತ್ತು ಇಂಡಿಯಾ (INDIA) ತಿಕ್ಕಾಟದ ನಡುವೆ ಯಾರಿಗೆ ಗೆಲುವು ಅಂತಾ ಸಮೀಕ್ಷೆಗಳು ಭವಿಷ್ಯ ನುಡಯುತ್ತಿವೆ. ಹೀಗಾಗಿ ಚುನಾವಣೆ ಬಳಿಕ ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋದು ಪಕ್ಕಾ ಆಗಲಿದೆ. ಅದಕ್ಕೂ ಮೊದಲು ಚುನಾವಣೆಯ ಅಖಾಡ ಮತ್ತಷ್ಟು ರಂಗೇರುವುದು ಗ್ಯಾರಂಟಿ.
ಪಂಚರಾಜ್ಯ ಎಲೆಕ್ಷನ್ ಎಫೆಕ್ಟ್?
ಇತ್ತೀಚೆಗೆ ನಡೆದಿದ್ದ ಪಂಚರಾಜ್ಯ ಚುನಾವಣೆ ಫಲಿತಾಂಶ ಕೂಡ ಪ್ರಧಾನಿ ಮೋದಿ ಅವರ ಪರ, ಅಂದರೆ ಕೇಂದ್ರ ಸರ್ಕಾರದ ಆಡಳಿತದ ಪರವಾಗಿಯೇ ಬಂದಂತೆ ಇತ್ತು. ಈಗ, ಲೋಕಸಭೆ ಚುನಾವಣೆ ಅಖಾಡದಲ್ಲಿ ಕೂಡ ಬಿಜೆಪಿಗೆ ಭರ್ಜರಿ ಗೆಲುವು ಗ್ಯಾರಂಟಿ ಅನ್ನೋ ಮಾತು ಸಮೀಕ್ಷೆ ಮೂಲಕ ಹೊರ ಬಿದ್ದಿವೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ, ಹಾಗೇ ಲೋಕಸಭೆ ಚುನಾವಣೆ ಫಲಿತಾಂಶ ಕೂಡ ಹೊರಬೀಳಲಿದೆ. ಹೀಗಾಗಿ ರಿಸಲ್ಟ್ ರಿವೀಲ್ ಆಗುವ ತನಕ ಕಾದು ನೋಡಬೇಕಿದೆ.












Click it and Unblock the Notifications