ರೈಲ್ವೇ ನೌಕರರ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಗೋಯಲ್ ಸಲಹೆ
ನವದೆಹಲಿ, ನವೆಂಬರ್ 14: ಭಾರತೀಯ ರೈಲ್ವೇ ನೌಕರರ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಪಿಯೂಷ್ ಗೋಯಲ್ ಸಲಹೆ ಮೇರೆಗೆ ರೈಲ್ವೇ ನೌಕರರಿಗೆ ತರಬೇತಿ ನೀಡುವ 'ಪ್ರಾಜೆಕ್ಟ್ ಸಕ್ಷಮ್' ಹೆಸರಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಒಂದು ವಾರಗಳ ಕಾಲ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ. ನೌಕರರ ಕೆಲಸದಲ್ಲಿ ಬದಲಾವಣೆ ತರಲು ಈ ತರಬೇತಿ ಶಿಬಿರ ನಡೆಸಲಾಗುತ್ತಿದೆ.
ಪ್ರತೀ ವಲಯದ ಎಲ್ಲಾ ಸಿಬ್ಬಂದಿಗಳಿಗೆ ಒಂದು ವಾರಗಳ ತರಬೇತಿ ನೀಡಲಾಗುತ್ತದೆ. ಮುಂದಿನ ಒಂದು ವರ್ಷಗಳ ಪ್ರತಿ ವರ್ಗದ ಸಿಬ್ಬಂದಿಗಳು ನಿರ್ವಹಿಸಲಿರುವ ಹುದ್ದೆಗೆ ಅನುಗುಣವಾಗಿ ಈ ತರಬೇತಿ ನೀಡಲಾಗುತ್ತದೆ.

ರೈಲ್ವೇ ಜಾಲ ಬೆಳೆಯತ್ತಿದ್ದಂತೆ ನವೀನ ದರ್ಜೆಯ ಸೇವೆಗಳು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇವುಗಳ ಜ್ಞಾನ ನೌಕರರಿಗೆ ಸಿಗಲು ಈ ರೀತಿ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ.
ಈ ತರಬೇತಿಯ ಪರಿಣಾಮಗಳನ್ನು ಗುರುತಿಸಲು ಪ್ರತೀ ವಲಯಗಳಲ್ಲಿ ಒಂದಷ್ಟು ಮಾನದಂಡಗಳನ್ನೂ ಪಟ್ಟಿ ಮಾಡಲಾಗಿದೆ. ಈ ಮೂಲಕ ಸುಧೀರ್ಘ ಹಾದಿಯಲ್ಲಿ ಸಿಬ್ಬಂದಿಗಳ ಕಾರ್ಯಕ್ರಮತೆ ಜತೆ ರೈಲ್ವೇ ಕಾರ್ಯಕ್ಷಮತೆಯನ್ನೂ ಹೆಚ್ಚಿಸುವ ವಿಶಿಷ್ಟ ಗುರಿಯನ್ನು ಹಾಕಿಕೊಳ್ಳಲಾಗಿದೆ.












Click it and Unblock the Notifications