• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಮಾನದಲ್ಲಿ ಕೊರೊನಾ ಶಂಕಿತ: ಕಾಕ್ ಪಿಟ್ ನಿಂದ ಕೆಳಕ್ಕೆ ಹಾರಿದ ಇಂಡಿಯನ್ ಪೈಲಟ್

|

ನವದೆಹಲಿ, ಮಾರ್ಚ್ 23: ತಾನು ಚಲಾಯಿಸುತ್ತಿದ್ದ ವಿಮಾನದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಯಾಣಿಸುತ್ತಿದ್ದ ಎಂದರಿತ ಪೈಲಟ್, ವಿಮಾನ ಲ್ಯಾಂಡ್ ಆದ ಕೂಡಲೇ, ಕಾಕ್ ಪಿಟ್ ನಿಂದ ಕೆಳಕ್ಕೆ ಜಿಗಿದಿದ್ದಾನೆ.

ಕಳೆದ ಶುಕ್ರವಾರ (ಮಾ 20) ಏರ್‌ ಏಷ್ಯಾದ ಐ5-732 ಪುಣೆ-ದೆಹಲಿ ವಿಮಾನವನ್ನು ಲ್ಯಾಂಡ್ ಮಾಡಿ, ದ್ವಿತೀಯ ನಿರ್ಗಮನದ ಕಾಕ್ ಪಿಟ್ ನ ಸ್ಲೈಡಿಂಗ್ ಕಿಟಕಿಯ ಮೂಲಕ ಪೈಲಟ್ ಜಂಪ್ ಮಾಡಿದ್ದಾನೆ.

ಕೊರೊನಾ: 40 ದಿನದ ಹಿಂದೆಯೇ ಸರಕಾರವನ್ನು ಎಚ್ಚರಿಸಿದ್ದ ರಾಹುಲ್ ಗಾಂಧಿ

ಈ ವಿಮಾನದಲ್ಲಿ ಕೊರೊನಾ ಸೋಂಕಿತ ಇರುವುದನ್ನು ಅರಿತ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ, ಗದ್ದಲ ಎಬ್ಬಿಸಿದ್ದಾರೆ. ವಿಮಾನ ದೆಹಲಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೇ, ಮುನ್ನೆಚ್ಚರಿಕಾ ಕ್ರಮವಾಗಿ ದೂರದಲ್ಲಿ ಲ್ಯಾಂಡ್ ಮಾಡಲು ಸೂಚಿಸಲಾಗಿತ್ತು.

"ಈ ವಿಮಾನದಲ್ಲಿ ಸೋಂಕಿತ ಪ್ರಯಾಣಿಕರೊಬ್ಬರು ಇದ್ದರು ಎನ್ನುವ ಮಾಹಿತಿ ನಮಗೆ ಬಂದಿದೆ. ಮೊದಲನೇ ಸಾಲಿನಲ್ಲಿ ಈ ವ್ಯಕ್ತಿ ಕುಳಿತುಕೊಂಡಿದ್ದ. ಈತನನ್ನು ಬೇರೆ ದ್ವಾರದಿಂದ ಹೊರಕ್ಕೆ ಕಳುಹಿಸಿ ಕ್ವಾರಂಟೇನ್ ಗೆ ಕಳುಹಿಸಲಾಯಿತು" ಎಂದು ಏರ್ ಏಷ್ಯಾದ ಅಧಿಕಾರಿಗಳು ಹೇಳಿದ್ದಾರೆ.

"ವಿಮಾನದಲ್ಲಿ ಪ್ರಯಾಣಿಸಿದ್ದ ಇತರ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಯಿತು. ವಿಮಾನ ನಿಲ್ದಾಣದ ಹಿಂದಿನ ದ್ವಾರದ ಮೂಲಕ ಅವರನ್ನು ಹೊರಕ್ಕೆ ಕಳುಹಿಸಲಾಯಿತು. ಇತರ ಎಲ್ಲಾ ಪ್ರಯಾಣಿಕರದ್ದು ಕೊರೊನಾ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ: ರಾಜ್ಯ ಸರಕಾರ ಎಡವುತ್ತಿರುವುದು ಈ 3 ವಿಚಾರದಲ್ಲಿ, ತುರ್ತಾಗಿ ಗಮನಕೂಡಬೇಕಿದೆ

"ಎಲ್ಲಾ ಪ್ರಯಾಣಿಕರು ಹೊರಬಂದ ನಂತರ ವಿಮಾನವನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದೆ. ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸಿಬ್ಬಂದಿಗಳು ಸರ್ವಸನ್ನದ್ದರಾಗಿದ್ದಾರೆ" ಎಂದು ಏರ್ ಏಷ್ಯಾದ ಅಧಿಕಾರಿಗಳು ಹೇಳಿದ್ದಾರೆ.

English summary
Pilot Jumps Out Of Cockpit In Air Asia Flight Over Coronavirus Scare
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X