ಚಿಣ್ಣರೊಂದಿಗೆ ಬೆರೆತು ಯೋಗ ಗುರುವಾದ ನರೇಂದ್ರ ಮೋದಿ

ನವದೆಹಲಿ, ಜೂ. 21: ನರೇಂದ್ರ ಮೋದಿ ಕನಸಿನ ಯೊಗ ದಿನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು ವಿಶ್ವದ 177 ರಾಷ್ಟ್ರಗಳಲ್ಲಿ ಭಾನುವಾರ ಯೋಗ ದಿನ ಆಚರಣೆ ಮಾಡಲಾಯಿತು.

ದೆಹಲಿ ರಾಜಪಥದಲ್ಲಿ 40 ಸಾವಿರ ಜನ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅರ್ಧ ಗಂಟೆ ಕಾಲ ಯೋಗದ ವಿವಿಧ ಆಸನಗಳನ್ನು ಮಾಡಿ ಮಹತ್ವ ಸಾರಿದರು. [ಮೋದಿ ನೇತೃತ್ವದಲ್ಲಿ ಯೋಗಪಥವಾದ ದೆಹಲಿ ರಾಜಪಥ]

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಬಾಬಾ ರಾಮ್ ದೇವ್ ಸೇರಿದಂತೆ ಅನೇಕರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನರೇಂದ್ರ ಮೋದಿ ಯೋಗ ಪ್ರದರ್ಶನದ ಕೆಲ ಚಿತ್ರಗಳು ಇಲ್ಲಿದೆ.

ಸಾಮಾಜಿಕ ತಾಣಗಳ ನೆರವು

ಸಾಮಾಜಿಕ ತಾಣಗಳ ನೆರವು

ಕೇಂದ್ರ ಸರ್ಕಾರ ಯೋಗ ದಿನಕ್ಕೆ ಭರ್ಜರಿ ತಯಾರಿ ನಡೆಸಿತ್ತು. ಸಾಮಾಜಿಕ ತಾಣಗಳ ಜತೆಗೆ ಅಂತರ್ಜಾಲದ ನೆರವನ್ನು ಪಡೆದುಕೊಂಡಿತ್ತು. ದೇಶಾದ್ಯಂತ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ವಿಶ್ವಸಂಸ್ಥೆಯಲ್ಲಿ ಉಲ್ಲೇಖ

ವಿಶ್ವಸಂಸ್ಥೆಯಲ್ಲಿ ಉಲ್ಲೇಖ

ಸಪ್ಟೆಂಬರ್ 26ರಂದು ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಮೋದಿ ತಮ್ಮ ಭಾಷಣದಲ್ಲಿ ಭಾರತದ ಪುರಾತನ ಪರಂಪರೆ ಯೋಗದ ಮಹತ್ವ ವಿವರಿಸಿದ್ದರು. ಅಲ್ಲದೇ ಜೂ. 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಬೇಕು ಎಂಬ ಅಂಶ ಮುಂದಿಟ್ಟಿದ್ದರು.

ಎಲ್ಲಿಂದ ಆರಂಭ ?

ಎಲ್ಲಿಂದ ಆರಂಭ ?

ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನರೇಂದ್ರ ಮೋದಿಗೆಆರಂಭದಲ್ಲಿಯೇ 50 ದೇಶಗಳು ಬೆಂಬಲ ಸೂಚಿಸಿದ್ದವು. ಅಮೆರಿಕ, ಚೀನಾ, ಕೆನಡಾ ಸೇರಿದಂತೆ ಅನೇಕ ದೇಶಗಳು ಮೋದಿ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸಿದ್ದವು.

ಅಂತಾರಾಷ್ಟ್ರೀಯ ಯೋಗ ದಿನ ಮಾನ್ಯತೆ

ಅಂತಾರಾಷ್ಟ್ರೀಯ ಯೋಗ ದಿನ ಮಾನ್ಯತೆ

ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ ಮಾತಿಗೆ 2014 ರ ಡಿಸೆಂಬರ್ 11 ರಂದು ಮನ್ನಣೆ ನೀಡಿದ ವಿಶ್ವಸಂಸ್ಥೆ ಯೋಗ ದಿನ ಮಾನ್ಯ ಮಾಡಿತ್ತು.

ವಿಶ್ವಸಂಸ್ಥೆಗೆ ಧನ್ಯವಾದ

ವಿಶ್ವಸಂಸ್ಥೆಗೆ ಧನ್ಯವಾದ

ಯೋಗ ದಿನದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಗೆ ಧನ್ಯವಾದ ಸಲ್ಲಿಸಿದರು. ಭಾರತೀಯ ಪರಂಪರೆಯನ್ನು ಜಗತ್ತೇ ಕೊಂಡಾಡುವಂತೆ ಆಗಿದೆ ಎಂದು ಹೇಳಿದರು.

30 ನಿಮಿಷದಲ್ಲಿ 15 ಆಸನ

30 ನಿಮಿಷದಲ್ಲಿ 15 ಆಸನ

ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಒಂದು ಗೂಡಿ ವಜ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶನ ಮಾಡಿದರು. ಸುಮಾರು ಅರ್ಧ ಗಂಟೆ ಕಾಲ ಯೋಗ ಮಾಡಿದ ಪ್ರಧಾನಿ 15 ಆಸನಗಳನ್ನು ಮಾಡಿ ಮುಗಿಸಿದರು.

ಮಲೇಷಿಯಾಲ್ಲಿ ಮೊದಲ ಆಚರಣೆ

ಮಲೇಷಿಯಾಲ್ಲಿ ಮೊದಲ ಆಚರಣೆ

ಮಲೇಷಿಯಾದಲ್ಲಿ ಮೊಟ್ಟ ಮೊದಲನೆಯದಾಗಿ ಯೋಗ ದಿನ ಆಚರಣೆ ಮಾಡಲಾಯಿತು. ಥೈವಾನ್ ನಲ್ಲೂ ಸಾವಿರಾರು ಜನ ಯೋಗಾಸನಗಳನ್ನು ಮಾಡಿದರು.

ಒಂದು ದಿನಕ್ಕೆ ಸೀಮಿತವಾಗದಿರಲಿ

ಒಂದು ದಿನಕ್ಕೆ ಸೀಮಿತವಾಗದಿರಲಿ

ಯೋಗ ದಿನ ಕೇವಲ ಒಂದು ದಿನದ ಆಚರಣೆಯಲ್ಲ. ಪ್ರತಿದಿನ ಒಂದಷ್ಟು ಸಮಯವನ್ನು ಯೋಗ ದಿನಲಲ್ಲೆ ಮೀಸಲಿಡಬೇಕು ಎಂದು ಮೋದಿ ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+