ಗಮನಿಸಿ ಜುಲೈ12ರಂದು ಭಾರತದಾದ್ಯಂತ ಪೆಟ್ರೋಲ್ ಬಂಕ್ ಬಂದ್

ನವದೆಹಲಿ, ಜುಲೈ 04 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಪೆಟ್ರೋಲ್ ವಿತರಕರ ಸಂಘ ಜುಲೈ 12ರಂದು ಭಾರತದಾದ್ಯಂತ ಪೆಟ್ರೋಲ್ ಬಂಕ್ ಬಂದ್ ಗೆ ಕರೆ ಕೊಟ್ಟಿದೆ.

ಪೆಟ್ರೋಲ್ ಪಂಪ್​ಗಳಲ್ಲಿ ಶೇ.100ರಷ್ಟು ಸ್ವಯಂಚಾಲಿತ ವ್ಯವಸ್ಥೆಯನ್ನು (ಆಟೋಮೇಟೆಡ್ ಸಿಸ್ಟಂ) ಸ್ಥಾಪಿಸುವಲ್ಲಿ ಮತ್ತು ಪ್ರತಿದಿನ ದರ ಪರಿಷ್ಕರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೈಲ ಮಾರಾಟ ಕಂಪನಿಗಳು ವಿಫಲವಾಗಿರುವುದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

Petrol Pump Owners Call For Nationwide Strike On July 12

ದೇಶಾದ್ಯಂತ ಪೆಟ್ರೋಲ್ ಬಂಕ್​ ಗಳು ಜುಲೈ 5ರಂದು ಖರೀದಿ ಸ್ಥಗಿತ (ನೋ ಪರ್ಚೇಸ್ ಡೇ) ಆಚರಣೆ ಮಾಡಲಿದ್ದು, ಬಳಿಕ ಜುಲೈ 12ರಂದು ಪೆಟ್ರೋಲ್ ಬಂಕ್ ಸಂಪೂರ್ಣ ಬಂದ್ ಆಚರಿಸಲಿವೆ ಎಂದು ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ (ಎಐಪಿಡಿಎ) ತಿಳಿಸಿದೆ.

ಜೂನ್ 29ರಂದು ತೈಲ ಮಾರಾಟ ಕಂಪನಿಗಳ (ಒಎಂಸಿ) ಜೊತೆ ಸತತ 3 ಗಂಟೆ ಕಾಲ ಸಭೆ ನಡೆಸಿದ್ದೇವೆ. ತೈಲ ದರದಲ್ಲಿ ಸ್ಥಿರತೆ ಅಗತ್ಯವಿದ್ದು, ಇದಕ್ಕೆ ತೈಲ ಮಾರಾಟ ಕಂಪನಿಗಳು ಕೂಡ ಒಪ್ಪಿಗೆ ನೀಡಿವೆ.

ಈ ನಿಟ್ಟಿನಲ್ಲಿ ಕ್ರಮದ ಭರವಸೆ ನೀಡಿವೆ. ಆದರೆ, ದರ ರಕ್ಷಣೆ ಜಾರಿಗೆ ನಿರ್ದಿಷ್ಟ ದಿನಾಂಕ ನೀಡದಿರುವ ಕಾರಣ ಪ್ರತಿಭಟನೆಗೆ ಮುಂದಾಗಿದ್ದೇವೆ.

ನಿರ್ಧಾರ ಮರುಪರಿಶೀಲನೆಗಾಗಿ ಜೂನ್ 30ರ ಮಧ್ಯಾಹ್ನ 2 ಗಂಟೆಯವರೆಗೆ ಕಾಯುವಂತೆ ತೈಲ ಮಾರಾಟ ಕಂಪನಿಗಳು ಮನವಿ ಮಾಡಿದ್ದವು.

ಆದರೆ. ಇನ್ನೂ ಫಲಿತಾಂಶ ಬಂದಿಲ್ಲ ಎಂದು ಎಐಪಿಡಿಎ ವಕ್ತಾರ ಅಲಿ ದಾರುವಾಲ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+