ರೂಪಾಯಿಗಳಲ್ಲಿ ಏರಿದ್ದ ಪೆಟ್ರೋಲ್ ಬೆಲೆ ಪೈಸೆಗಳಲ್ಲಿ ಇಳಿಯುತ್ತಿದೆ
ಬೆಂಗಳೂರು, ಜೂನ್ 23: ರೂಪಾಯಿಗಳಲ್ಲಿ ಏರಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಕೆಲವು ದಿನಗಳಿಂದ ಕೇವಲ ಪೈಸೆಗಳ ಲೆಕ್ಕದಲ್ಲಿ ಇಳಿಯುತ್ತಿದೆ.
ಜೂನ್ ಮೊದಲ ದಿನದಿಂದಲೂ ಪೆಟ್ರೋಲ್ ಬೆಲೆ ಇಳಿಮುಖವಾಗುತ್ತಿದೆ ಆದರೂ ಅದು ಕೇಲವೇ ಪೈಸಿಗಳಲ್ಲಿ ಆಗುತ್ತಿರುವುದರಿಂದ ಹೆಚ್ಚಿನ ಬದಲಾವಣೆಯೇನೂ ಆಗುತ್ತಿಲ್ಲ. ನಿನ್ನೆ (ಜೂನ್ 22) ರಂದು ಪೆಟ್ರೋಲ್ ಬೆಲೆ 14 ಪೈಸೆ ಇಳಿದಿದೆ.
ಜೂನ್ ಮೊದಲ ದಿನದಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸುಮಾರು 2 ರೂಪಾಯಿ ಇಳಿದಿದ್ದರೆ ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ ಎಂದು ಭಾರತೀಯ ಪೊಟ್ರೋಲಿಯಂ ಕಾರ್ಪೊರೇಷನ್ ಹೇಳಿದೆ.

ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 75.93 ಇದ್ದರೆ ಡೀಸೆಲ್ ಬೆಲೆ 67.61 ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 77.16 ರೂಪಾಯಿ ಇದ್ದರೆ ಡೀಸೆಲ್ ಬೆಲೆ 68.62 ಇದೆ.












Click it and Unblock the Notifications